ನವ ದೆಹಲಿ (ಜುಲೈ 03); ದೇಶದಲ್ಲಿ ಕೊರೋನಾ ಮೂರನೇ ಅಲೆಯನ್ನು ತಪ್ಪಿಸಲು ಇರುವ ಏಕೈಕ ಅಸ್ತ್ರ ದೇಶದಲ್ಲಿರುವ ಎಲ್ಲರಿಗೂ ಲಸಿಕೆ ನೀಡುವುದು. ಇದೇ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುದ್ಧೋಪಾದಿಯಲ್ಲಿ ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ (WHO- World Health Organisation) ಭಾರತದ ಕೊವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಿಗೆ ಈವರೆಗೆ ಮಾನ್ಯತೆ ನೀಡಿಲ್ಲ. ಯುರೋಪ್ ದೇಶಗಳೂ ಸಹ ಭಾರತದ ಲಸಿಕೆ ಪಡೆದವರಿಗೆ ವೀಸಾ ನೀಡಲು ಮುಂದಾಗುತ್ತಿಲ್ಲ. ಹೀಗಾಗಿ ಬಾರತದಲ್ಲೂ ಸಹ ಈ ಲಸಿಕೆ ಪಡೆಯಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ್ ಬಯೋಟೆಕ್ ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಿದ್ದು, ಸುರಕ್ಷತೆ ಮತ್ತು ಲಸಿಕೆಯ ಪರಿಣಾಮಕಾರಿತ್ವದ ವಿಶ್ಲೇಷಣೆಯ ಡೇಟಾವನ್ನು ಇಂದು ಪ್ರಕಟಿಸಿದೆ
ಭಾರತ್ ಬಯೋಟೆಕ್ ಹೊರಡಿಸಿರುವ ಪ್ರಕಟಣೆಯಲ್ಲಿ, "ಕೊವಾಕ್ಸಿನ್ ಪರಿಣಾಮಕಾರಿತ್ವದ ವಿಶ್ಲೇಷಣೆಯು ಪರಿಣಾಮಕಾರಿಯಾಗಿ ಕೂಡಿದೆ. ಕೋವಿಡ್ ವಿರುದ್ಧ ಈ ಲಸಿಕೆ ಶೇ.77.8 ರಷ್ಟು ಪರಿಣಾಮಕಾರಿಯಾಗಿ ಹೋರಾಡಲಿದೆ. ಧೃಡಪಡಿಸಿದ 130 ಪ್ರಕರಣಗಳ ಮೌಲ್ಯಮಾಪನದ ಮೂಲಕ ತೀವ್ರ ರೋಗಲಕ್ಷಣದ COVID-19 ಪ್ರಕರಣಗಳ ವಿರುದ್ಧ ಶೇ.93.4 ರಷ್ಟು ಪರಿಣಾಮಕಾರಿ ಎಂದು ಈ ಲಸಿಕೆ ತೋರಿಸಿದೆ. ‘
ಸುರಕ್ಷತಾ ವಿಶ್ಲೇಷಣೆಯ ವರದಿ ಮಾಡಿದ ಪ್ರತಿಕೂಲ ಘಟನೆಗಳು ಪ್ಲಸೀಬೊಗೆ ಹೋಲುತ್ತವೆ ಎಂದು ತೋರಿಸುತ್ತದೆ. ಶೇ.12 ರಷ್ಟು ವಿಷಯಗಳು ಸಾಮಾನ್ಯವಾಗಿ ತಿಳಿದಿರುವ ಅಡ್ಡಪರಿಣಾಮಗಳನ್ನು ಅನುಭವಿಸುತ್ತಿವೆ ಮತ್ತು ಶೇ.0.5 ಕ್ಕಿಂತ ಕಡಿಮೆ ವಿಷಯಗಳು ಗಂಭೀರ ಪ್ರತಿಕೂಲ ಘಟನೆಗಳನ್ನು ಅನುಭವಿಸುತ್ತವೆ. ದಕ್ಷತೆಯ ದತ್ತಾಂಶವು ಲಕ್ಷಣರಹಿತ COVID-19 ವಿರುದ್ಧ ಶೇ.63.6 ರಕ್ಷಣೆಯನ್ನು ಮತ್ತು SARS-CoV-2, B.1.617.2 ಡೆಲ್ಟಾ ರೂಪಾಂತರದ ವಿರುದ್ಧ ಶೇ.65.2% ರಕ್ಷಣೆಯನ್ನು ತೋರಿಸಿದೆ" ಎಂದು ತಿಳಿಸಲಾಗಿದೆ.
ಅಲ್ಲದೆ, ಈ ಲಸಿಕೆಗಳಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲ. ಹೀಗಾಗಿ ಜನ ಭಯವಿಲ್ಲದೆ ಲಸಿಕೆಯನ್ನು ಪಡೆದು ಮಾರಕ ಕೊರೋನಾ ವೈರಸ್ ಅನ್ನು ಸೋಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ