ದುರಸ್ತಿ ಸೇತುವೆ ಮೇಲೆ ಕಾರು ಚಾಲನೆ; ನದಿಗೆ ಬಿದ್ದು 10 ತಿಂಗಳ ಮಗು, ದಂಪತಿ ಸಾವು

ಕಳೆದ ವರ್ಷ ಸುರಿದ ಜೋರು ಮಳೆಯಿಂದಾಗಿ ಸೇತುವೆ ಹಾಳಾಗಿತ್ತು. ಹೀಗಾಗಿ ಸೇತುವೆ ಬಳಿ ಬ್ಯಾರಿಕೇಡ್​ಗಳನ್ನು ಹಾಕಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು ಎಂದು ಗಂಗ್ದರ್ ಪೊಲೀಸ್​ ಠಾಣೆಯ ಸರ್ಕಲ್ ಇನ್ಸ್​​ಪೆಕ್ಟರ್​​ ಕಲ್ಯಾಣ್​ ಸಿಂಗ್ ಹೇಳಿದ್ದಾರೆ. ಆದರೂ ಸಹ ದಂಪತಿ ದುರಸ್ತಿಗೊಳಗಾಗಿದ್ದ ಸೇತುವೆ ಮೇಲೆ ಪ್ರಯಾಣಿಸಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

news18-kannada
Updated:March 26, 2020, 3:51 PM IST
ದುರಸ್ತಿ ಸೇತುವೆ ಮೇಲೆ ಕಾರು ಚಾಲನೆ; ನದಿಗೆ ಬಿದ್ದು 10 ತಿಂಗಳ ಮಗು, ದಂಪತಿ ಸಾವು
ಪ್ರಾತಿನಿಧಿಕ ಚಿತ್ರ
  • Share this:
ರಾಜಸ್ಥಾನ (ಮಾ.26): ದೇವಸ್ಥಾನದಿಂದ ಮನೆಗೆ ವಾಪಸ್​ ಬರುತ್ತಿದ್ದ ಕಾರು ಬ್ಯಾರಿಕೇಡ್​ಗೆ ಡಿಕ್ಕಿ ಹೊಡೆದು ಚಂಬಲ್ ನದಿಗೆ ಬಿದ್ದ ಪರಿಣಾಮ, ಕಾರಿನಲ್ಲಿದ್ದ 10 ತಿಂಗಳ ಮಗು ಮತ್ತು ದಂಪತಿ ಸಾವನ್ನಪ್ಪಿರುವ ದುರಂತ ಘಟನೆ ರಾಜಸ್ಥಾನದ ಜಲವಾರ್ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಬುಧವಾರ ರಾತ್ರಿ ನಡೆದಿದ್ದು, ದಂಪತಿ ತಮ್ಮ ಮಗುವಿನೊಂದಿಗೆ ದೇವಾಲಯದಿಂದ ಮನೆಗೆ ಹಿಂತಿರುಗುತ್ತಿದ್ದರು ಎಂದು ತಿಳಿದು ಬಂದಿದೆ. ಮೃತಪಟ್ಟವರನ್ನು ಮಧ್ಯಪ್ರದೇಶದ ತುಫಾನ್ ಸಿಂಗ್​(25), ಆತನ ಪತ್ನಿ ಸೀಮಾ ಕನ್ವರ್(23) ಮತ್ತು ಇವರ 10 ತಿಂಗಳ ಗಂಡು ಮಗು ಎಂದು ಗುರುತಿಸಲಾಗಿದೆ. ಇವರೆಲ್ಲರೂ ನೀಮುಂಚ್​ ಜಿಲ್ಲೆಯವರು ಎನ್ನಲಾಗಿದೆ.

ಲಾಕ್‌ಡೌನ್ ಪರಿಹಾರಕ್ಕಾಗಿ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ; ಯಾವ ವಲಯಕ್ಕೆ ಎಷ್ಟು ಹಣ? ಇಲ್ಲಿದೆ ಮಾಹಿತಿ

ಕಳೆದ ವರ್ಷ ಸುರಿದ ಜೋರು ಮಳೆಯಿಂದಾಗಿ ಸೇತುವೆ ಹಾಳಾಗಿತ್ತು. ಹೀಗಾಗಿ ಸೇತುವೆ ಬಳಿ ಬ್ಯಾರಿಕೇಡ್​ಗಳನ್ನು ಹಾಕಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು ಎಂದು ಗಂಗ್ದರ್ ಪೊಲೀಸ್​ ಠಾಣೆಯ ಸರ್ಕಲ್ ಇನ್ಸ್​​ಪೆಕ್ಟರ್​​ ಕಲ್ಯಾಣ್​ ಸಿಂಗ್ ಹೇಳಿದ್ದಾರೆ. ಆದರೂ ಸಹ ದಂಪತಿ ದುರಸ್ತಿಗೊಳಗಾಗಿದ್ದ ಸೇತುವೆ ಮೇಲೆ ಪ್ರಯಾಣಿಸಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಮೃತರು ರಾಜಸ್ಥಾನ ಗಡಿಯಲ್ಲಿರುವ ರಾಜ್​​ಗರ್ ಜಿಲ್ಲೆಯ ದೇವಾಲಯವೊಂದಕ್ಎಕ ತೆರಳಿದ್ದರು. ಸುಮಾರು 9 ಗಂಟೆ ಸಮಯದಲ್ಲಿ 60 ಅಡಿ ಉದ್ದದ ಸೇತುವೆಯನ್ನು ದಾಟುವಾಗ ಬ್ಯಾರಿಕೇಡ್​ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ನದಿಗೆ ಹಾರಿ ಬಿದ್ದಿದೆ. ದುರಾದೃಷ್ಟವಶಾತ್ ಮೂವರು ಸಹ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ, ನದಿಯಿಂದ ಕಾರು ಮತ್ತು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಇಂದು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

ಕೊರೋನಾ ನಿಗ್ರಹ ಹೋರಾಟ ಬೆಂಬಲಿಸಿ ಮೂರು ತಿಂಗಳ ವೇತನ ನೀಡಿದ ಶಾಸಕ ಯತ್ನಾಳ್
First published: March 26, 2020, 3:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading