HOME » NEWS » Coronavirus-latest-news » CORRUPTION IN BUYING CORONAVIRUS MEDICINE AND KITS GNR

ಕೊರೋನಾ ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರೀ ಅಕ್ರಮ; ಗಂಭೀರ ಆರೋಪ

ಇನ್ನು, ದೂರಿನ ಹಿನ್ನೆಲೆಯಲ್ಲಿ ಈಗ ವರದಿ ಕೇಳಿರುವ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ ಪಾಟೀಲ್​​, ಇದೊಂದು ಗಂಭೀರ ಆರೋಪ. ಕೊರೋನಾ ವಿರುದ್ಧ ರಾಜ್ಯ ಹೋರಾಟ ಮಾಡುವಾಗ ಸರ್ಕಾರ ಮೇಲೆ ಈ ರೀತಿ ಆರೋಪ ಕೇಳಿ ಬಂದಿರುವ ಕಾರಣದಿಂದ ವರದಿ ಕೇಳಿದ್ದೇನೆ ಎಂದರು.

news18-kannada
Updated:May 24, 2020, 1:23 PM IST
ಕೊರೋನಾ ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರೀ ಅಕ್ರಮ; ಗಂಭೀರ ಆರೋಪ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಮೇ.24): ಕೊರೋನಾ ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯೂ ಕರ್ನಾಟಕ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಂದ ವರದಿ ಕೇಳಿದೆ.

ಇಂದು ಅಕ್ರಮ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಎಸಿಬಿಗೆ ಕರ್ನಾಟಕ ರಾಷ್ಟ್ರೀಯ ಸಮಿತಿ ನೀಡಿದೆ. ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷರಿಗೆ ದೂರು ನೀಡಿದ ಬಳಿಕ ಮಾತಾಡಿದ ರಾಷ್ಟ್ರ ಸಮಿತಿ ಪ್ರಧಾನ ಕಾರ್ಯದರ್ಶಿ ದೀಪಕ್​​, ಕಳಪೆ ವೈದ್ಯಕೀಯ ಉಪಕರಣ ಖರೀದಿ ಮಾಡಿರುವ ಬಗ್ಗೆ ಅನುಮಾನ ಇದೆ. ಹಾಗಾಗಿ ನಾವು ದೂರು ನೀಡಿರುವದಾಗಿ ತಿಳಿಸಿದರು.

ಇನ್ನು, ದೂರಿನ ಹಿನ್ನೆಲೆಯಲ್ಲಿ ಈಗ ವರದಿ ಕೇಳಿರುವ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ ಪಾಟೀಲ್​​, ಇದೊಂದು ಗಂಭೀರ ಆರೋಪ. ಕೊರೋನಾ ವಿರುದ್ಧ ರಾಜ್ಯ ಹೋರಾಟ ಮಾಡುವಾಗ ಸರ್ಕಾರ ಮೇಲೆ ಈ ರೀತಿ ಆರೋಪ ಕೇಳಿ ಬಂದಿರುವ ಕಾರಣದಿಂದ ವರದಿ ಕೇಳಿದ್ದೇನೆ ಎಂದರು.

ಇದನ್ನೂ ಓದಿ: ದೇಶದಲ್ಲಿ ಕೋವಿಡ್​​-19: 24 ಗಂಟೆಯಲ್ಲಿ 6,767 ಕೇಸ್​ ಪತ್ತೆ; 1.38 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಒಟ್ನಲ್ಲಿ ಕರ್ನಾಟಕ ಡ್ರಗ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಸಂಸ್ಥೆಯಲ್ಲಿ ಆಕ್ರಮ ಆರೋಪ ಕೇಳಿ ಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಈಗ ಸರ್ಕಾರ ಯಾವ ರೀತಿ ವರದಿ ಕೊಡುತ್ತೆ ಮತ್ತೆ ಲೆಕ್ಕಪತ್ರ ಸಮಿತಿ ಯಾವುದನ್ನು ಹೇಗೆ ಸ್ವೀಕಾರ ಮಾಡಲಿದ್ದಾರೋ ಕಾದು ನೋಡಬೇಕಿದೆ.
First published: May 24, 2020, 12:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories