ಪೊಲೀಸ್ ಜೀಪ್  ಡ್ರೈವರ್ ಗೆ ಕೊರೋನಾ ಸೋಂಕು ದೃಢ; ಕಾನ್ಸ್‌ಟೇಬಲ್ ವಾಸವಿದ್ದ ಏರಿಯಾ ಸೀಲ್‌ಡೌನ್

ಪೇದೆ ಸೋಂಕು ಶಂಕೆ ಇದ್ದ ಕಾರಣ ಅವರನ್ನು ಇಎಸ್ ಐ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ, ಇದೀಗ ಸೋಂಕು ದೃಢಪಟ್ಟಿರುವ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

news18-kannada
Updated:May 23, 2020, 4:20 PM IST
ಪೊಲೀಸ್ ಜೀಪ್  ಡ್ರೈವರ್ ಗೆ ಕೊರೋನಾ ಸೋಂಕು ದೃಢ; ಕಾನ್ಸ್‌ಟೇಬಲ್ ವಾಸವಿದ್ದ ಏರಿಯಾ ಸೀಲ್‌ಡೌನ್
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು (ಮೇ 23); ಪೊಲೀಸ್ ಜೀಪ್  ಡ್ರೈವರ್ ಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಮಹಾಲಕ್ಷ್ಮಿ ಲೇ ಔಟ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ಪೇದೆ ವಾಸವಿದ್ದ ಶಂಕರ್‌ ನಗರದ ರಸ್ತೆಯನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.

ಪೇದೆ ಸೋಂಕು ಶಂಕೆ ಇದ್ದ ಕಾರಣ ಅವರನ್ನು ಇಎಸ್ ಐ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ, ಇದೀಗ ಸೋಂಕು ದೃಢಪಟ್ಟಿರುವ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಅಲ್ಲದೆ, ಪೊಲೀಸ್ ಜೀಪ್ ಡ್ರೈವ್ ಮದುವೆಯಾಗಿ ಒಂದು ವರ್ಷ
ಗರ್ಭಿಣಿ ಪತ್ನಿಯನ್ನು ಹೆರಿಗೆಗೆ ತವರು ಮನೆಗೆ ಕಳುಹಿಸಲಾಗಿದೆ. ಮಾರಪ್ಪನ ಪಾಳ್ಯ ವಾರ್ಡ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೇದೆ ವಾಸವಾಗಿದ್ದ ಶಂಕರ್ ನಗರ  ರಸ್ತೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ಅಕ್ಕಪಕ್ಕದ ಮನೆಗಳಿಗೆಲ್ಲಾ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಹೊಸ ದಾಖಲೆ: 1939ಕ್ಕೆ ಏರಿದ ಕೊರೋನಾ ಪ್ರಕರಣ
First published: May 23, 2020, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading