HOME » NEWS » Coronavirus-latest-news » CORONAVIRUS WAR OF WORDS BETWEEN CENTRE VS MAHARASHTRA GOVT MAK

CoronaVirus: ಮಹಾರಾಷ್ಟ್ರದಲ್ಲಿ ಕೈಮೀರಿದ ಕೊರೋನಾ ಸ್ಥಿತಿ; ಮುಂದುವರೆದ ಕೇಂದ್ರ-ಮಹಾ ಸರ್ಕಾರದ ಮಾತಿನ ಜಟಾಪಟಿ

ಕೇಂದ್ರ ಸರ್ಕಾರದ ಹಸ್ತಕ್ಷೇಪದಿಂದಾಗಿ, #Remdesivir ಇಂಜೆಕ್ಷನ್‌ನ ಬೆಲೆ ಈಗ ಕಡಿಮೆಯಾಗಿದೆ! ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸರ್ಕಾರದೊಂದಿಗೆ ಕೈಜೋಡಿಸಿದ ಔಷಧೀಯ ಕಂಪನಿಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಬಿಜೆಪಿ ಮನ್ಸುಖ್ ಮಂಡವಿಯಾ ತಿಳಿಸಿದ್ದಾರೆ.

news18-kannada
Updated:April 17, 2021, 9:50 PM IST
CoronaVirus: ಮಹಾರಾಷ್ಟ್ರದಲ್ಲಿ ಕೈಮೀರಿದ ಕೊರೋನಾ ಸ್ಥಿತಿ; ಮುಂದುವರೆದ ಕೇಂದ್ರ-ಮಹಾ ಸರ್ಕಾರದ ಮಾತಿನ ಜಟಾಪಟಿ
ಉದ್ದವ್ ಠಾಕ್ರೆ.
  • Share this:
ಮುಂಬೈ (ಏಪ್ರಿಲ್ 17); ಭಾರತದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ಅಧಿಕವಾಗುತ್ತಲೇ ಇದೆ. ಪ್ರತಿ ದಿನ ದೇಶದಾದ್ಯಂತ 1.5 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಕೇಂದ್ರ ಸರ್ಕಾರ ಕೊರೋನಾ ಲಸಿಕೆ ಅಭಿಯಾನವನ್ನು ನಡೆಸುತ್ತಿದೆಯಾದರೂ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಗುಜರಾತ್​-ಮುಂಬೈ ಸೇರಿದಂತೆ ಅನೇಕ ರಾಜ್ಯಗಳು ಈಗಾಗಲೇ ಕೊರೋನಾದಿಂದ ತತ್ತರಿಸಿದ್ದು, ಸೋಂಕು ತಡೆಗೆ ನೈಟ್​ ಕರ್ಫ್ಯೂ ಮೊರೆ ಹೋಗಿವೆ. ಮತ್ತೊಮ್ಮೆ ಲಾಕ್​ಡೌನ್ ಕೂಗು ಕೇಳಿಬರುತ್ತಿದೆಯಾದರೂ, ಕೇಂದ್ರ ಸರ್ಕಾರ ಮಾತ್ರ ಯಾವುದೇ ನಿರ್ಧಾರಕ್ಕೆ ಮುಂದಾಗಿಲ್ಲ. ಕೊರೋನಾ ತಡೆಗೂ ಸೂಕ್ತ ಕ್ರಮ ಜರುಗಿಸಿಲ್ಲ. ಈ ನಡುವೆ ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರದ ನಡುವೆ ಮಾತಿನ ಚಕಮಕಿಯೂ ಕಾವೇರುತ್ತಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಆಕ್ಸಿಜನ್​ ಕೊರತೆ ಉಂಟಾಗಿದ್ದು ಸಿಎಂ ಉದ್ಧವ್ ಠಾಕ್ರೆ ಕೇಂದ್ರಕ್ಕೆ ಸರ್ಕಾರಕ್ಕೆ ಆಕ್ಸಿಜನ್ ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈ ಮನವಿಯನ್ನು ಪುರಸ್ಕರಿಸಿಲ್ಲ. ಇದಲ್ಲದೆ, ಕೊರೋನಾ ಲಸಿಕೆ ಬೆಲೆಯೂ ಅಧಿಕವಾಗಿರುವ ಕಾರಣ ಮಹಾರಾಷ್ಟ್ರ ಸರ್ಕಾರ ನಿರಂತರವಾಗಿ ಕೇಂದ್ರದ ವಿರುದ್ಧ ಹರಿಹಾಯುತ್ತಲೇ ಇದೆ. ಈ ನಡುವೆ ಎನ್​ಸಿಪಿ ನಾಯಕ ನವಾಬ್ ಮಲಿಕ್ ಟ್ವೀಟ್ ಮಾಡಿದ್ದು, "ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಇದೆ. ಹಾಗೆಯೇ ಕೋವಿಡ್​ ಸಂತ್ರಸ್ತರ ಮರಣ ಪ್ರಮಾಣ ಪತ್ರದಲ್ಲೂ ಸಹ ಮೋದಿ ಪೋಟೋ ಹಾಕಿ" ಎಂದು ಕಿಚಾಯಿಸಿದ್ದರು. ಆ ಮೂಲಕ ಕೊರೋನಾ ಲಸಿಕೆಯ ಗುಣಮಟ್ಟವನ್ನು ಪರೋಕ್ಷವಾಗಿ ಪ್ರಶ್ನಿಸಿದ್ದರು.ಅಲ್ಲದೆ ಮತ್ತೊಂದು ಟ್ವೀಟ್​ನಲ್ಲಿ ಪಿಯೂಷ್​ ಗೋಯಲ್​ಗೆ ಪ್ರಶ್ನೆ ಮಾಡಿದ್ದ ನವಾಬ್ ಮಲಿಕ್, "ದಯವಿಟ್ಟು ಕೆಲವು ಸಂಗತಿಗಳನ್ನು ನಮಗೆ ತಿಳಿಸಿ, ನಮ್ಮ ದೇಶದಲ್ಲಿ ಎಷ್ಟು ಮೆಟ್ರಿಕ್ ಟನ್ ಆಮ್ಲಜನಕ ಉತ್ಪತ್ತಿಯಾಗುತ್ತದೆ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಕೇಂದ್ರ ಸರ್ಕಾರ ಎಷ್ಟು ಆಮ್ಲಜನಕವನ್ನು ನೀಡಿದೆ?" ಎಂದು ಪ್ರಶ್ನೆ ಮಾಡಿದ್ದರು.ನವಾಬ್ ಮಲಿಕ್ ಅವರ ಪ್ರಶ್ನೆಗೆ ಟ್ವೀಟ್ ಮೂಲಕವೇ ಉತ್ತರ ನೀಡಿರುವ ಬಿಜೆಪಿ ನಾಯಕ ರಾಜ್ಯಸಭಾ ಸದಸ್ಯ ಮನ್ಸುಖ್ ಮಂಡವಿಯಾ, "ನವಾಬ್  ಮಲಿಕ್ ಅವರ ಟ್ವೀಟ್ ಆಘಾತಕಾರಿಯಾಗಿದ್ದು, ಇದು ಅರ್ಧ ಸತ್ಯಗಳು ಮತ್ತು ಸುಳ್ಳುಗಳಿಂದ ತುಂಬಿದೆ. ಅಲ್ಲದೆ, ಇಂತಹ ಬೆದರಿಕೆಗಳು ಸ್ವೀಕಾರಾರ್ಹವಲ್ಲ. ಅವರಿಗೆ ಈ ನೆಲದ ಪರಿಸ್ಥಿತಿ ತಿಳಿದಿಲ್ಲ. ಕೇಂದ್ರ ಸರ್ಕಾರದ ಅಧಿಕಾರಿಗಳು ಮಹಾರಾಷ್ಟ್ರ ಅಧಿಕಾರಿಗಳ ಜೊತೆಗೆ ಸಕ್ರಿಯ ಸಂಪರ್ಕದಲ್ಲಿದ್ದಾರೆ. ರೆಮ್ಡೆಸಿವಿರ್ ಲಸಿಕೆ ಸರಬರಾಜಿಗೆ ಎಲ್ಲ ರೀತಿಯಲ್ಲೂ ಸಹಕರಿಸುತ್ತಿದೆ.

ನಾವು ದೇಶದಲ್ಲಿ ರೆಮ್ಡೆಸಿವಿರ್ ಉತ್ಪಾದನೆಯನ್ನು ದ್ವಿಗುಣಗೊಳಿಸುತ್ತಿದ್ದೇವೆ ಮತ್ತು 12-4-2021 ರಿಂದ ಹೆಚ್ಚಿನ ಉತ್ಪಾದನೆಗೆ ಅನುಮತಿ ನೀಡಿದ್ದೇವೆ. ಮಹಾರಾಷ್ಟ್ರದ ಜನರಿಗೆ ರೆಮ್‌ಡೆಸಿವಿರ್‌ನ ಸಮರ್ಪಕ ಪೂರೈಕೆಯನ್ನು ಖಾತರಿಪಡಿಸುವುದು ನಮ್ಮ ಆದ್ಯತೆಯಾಗಿದೆ.ಸರ್ಕಾರದ ದಾಖಲೆಯ ಪ್ರಕಾರ, EOU ನ ಒಂದು ಘಟಕ ಮತ್ತು SEZ​ ನಲ್ಲಿ ಒಂದು ಘಟಕ ಮಾತ್ರ ಇದೆ. ನಾವು ರೆಮ್ಡೆಸಿವಿರ್​ ತಯಾರಿಕೆಗೆ ಎಲ್ಲಾ ಕ್ರಮಗಳನ್ನೂ ಜರುಗಿಸುತ್ತಿದ್ದೇವೆ. ಈ 16 ಕಂಪನಿಗಳ ಪಟ್ಟಿ, ಷೇರುಗಳ ಲಭ್ಯತೆ ಮತ್ತು WHO-GMP ಅನ್ನು ಅವರೊಂದಿಗೆ ಹಂಚಿಕೊಳ್ಳಲು ನಾನು ವಿನಂತಿಸುತ್ತೇನೆ. ನಮ್ಮ ಜನರಿಗೆ ಸಹಾಯ ಮಾಡಲು ಎಲ್ಲವನ್ನೂ ಮಾಡಲು ನಮ್ಮ ಕೇಂದ್ರ ಸರ್ಕಾರ ಬದ್ಧವಾಗಿದೆ" ಎಂದಿದ್ದಾರೆ.

ಇದನ್ನೂ ಓದಿ: CoronaVirus: ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ; ಸೋನಿಯಾ ಗಾಂಧಿ ಕಿಡಿ

ಅಲ್ಲದೆ, "ಕೇಂದ್ರ ಸರ್ಕಾರದ ಹಸ್ತಕ್ಷೇಪದಿಂದಾಗಿ, #Remdesivir ಇಂಜೆಕ್ಷನ್‌ನ ಬೆಲೆ ಈಗ ಕಡಿಮೆಯಾಗಿದೆ! ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸರ್ಕಾರದೊಂದಿಗೆ ಕೈಜೋಡಿಸಿದ ಔಷಧೀಯ ಕಂಪನಿಗಳಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಮನ್ಸುಖ್ ಮಂಡವಿಯಾ ತಿಳಿಸಿದ್ದಾರೆ.
Published by: MAshok Kumar
First published: April 17, 2021, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories