news18-kannada Updated:May 11, 2020, 1:33 PM IST
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿರುವ ಡಿಪಿಯನ್ನು ಬದಲಾಯಿಸಿಕೊಂಡಿದ್ದಾರೆ. ಮೊನ್ನೆಯಷ್ಟೆ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುತ್ತಿರುವ ಮುಂಬಯಿ ಪೊಲೀಸರ ಕಲ್ಯಾಣಕ್ಕಾಗಿ ತಲಾ 5 ಲಕ್ಷ ರೂಪಾಯಿ ಕೊಡುಗೆ ನೀಡಿದ್ದರು.
ಇದಾದ ಬೆನ್ನೆಲ್ಲೆ ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿನ ಡಿಪಿ ಬದಲಾಯಿಸಿದ್ದಾರೆ. ಕೊಹ್ಲಿ ಡಿಪಿಯಲ್ಲಿ ಮುಂಬೈ ಪೊಲೀಸ್ ಲೊಗೋ ಹಾಕಿದ್ದು, ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ರಕ್ಷಣೆ ನೀಡುವುದು ಪೊಲೀಸರು ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನ್ ಕ್ವಾಲಿಫಿಕೇಷನ್ ನಿಮಗೆ ಗೊತ್ತೆ?; ಇಲ್ಲಿದೆ ವಿವರ
'ಮಹಾರಾಷ್ಟ್ರ ಪೊಲೀಸರು ವಿಪತ್ತುಗಳು, ದಾಳಿಗಳು ಮತ್ತು ಸಂಕಷ್ಟದ ಸಮಯದಲ್ಲಿ ನಾಗರಿಕರ ಜೊತೆ ನಿಂತಿದ್ದಾರೆ. ಇಂದು ಅವರು ಕೊರೊನಾ ವಿರುದ್ಧದ ಯುದ್ಧವನ್ನು ಮುನ್ನಡೆಸುತ್ತಿರುವಾಗ, ನಾನು ಮಹಾರಾಷ್ಟ್ರ ಪೊಲೀಸ್ ಲೊಗೋವನ್ನು ಟ್ವಿಟರ್ನಲ್ಲಿ ಡಿಪಿಯನ್ನಾಗಿ ಮಾಡಲು ನಿರ್ಧರಿಸಿದ್ದೇನೆ' ಎಂದು ಕೊಹ್ಲಿ ಹೇಳಿದ್ದಾರೆ.
Jofra Archer: ಜೋಫ್ರಾ ಆರ್ಚರ್ಗೆ ಕರ್ನಾಟಕದ ಈ ಬ್ಯಾಟ್ಸ್ಮನ್ ಕಂಡರೆ ಭಯವಂತೆ!
ಇತ್ತೀಚೆಗಷ್ಟೆ ಕೊಹ್ಲಿ ಹಾಗೂ ಅನುಷ್ಕಾ ಮುಂಬೈ ಪೊಲೀಸರಿಗೆ ತಲಾ 5 ಲಕ್ಷ ರೂಪಾಯಿಯನ್ನು ನೀಡಿದ್ದರು. ಈ ವಿಚಾರವನ್ನು ಮುಂಬಯಿ ಪೊಲೀಸ್ ಆಯುಕ್ತ ಪರಮ್ ವೀರ್ ಸಿಂಗ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು.
'ಮುಂಬಯಿ ಪೊಲೀಸ್ ಕಲ್ಯಾಣಕ್ಕೆ ತಲಾ 5 ಲಕ್ಷ ರೂ. ಗಳನ್ನು ನೀಡಿದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರಿಗೆ ಧನ್ಯವಾದಗಳು. ಈ ನಿಮ್ಮ ಕೊಡುಗೆ ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರನ್ನು ರಕ್ಷಿಸುತ್ತದೆ' ಎಂದು ಪರಮ್ ವೀರ್ ಸಿಂಗ್ ಬರೆದುಕೊಂಡಿದ್ದರು.
Published by:
Vinay Bhat
First published:
May 11, 2020, 1:33 PM IST