HOME » NEWS » Coronavirus-latest-news » CORONAVIRUS VACCINE INDIA GETS COVID 19 VACCINE AS DCGI APPROVES SPUTNIK V VACCINE DBDEL SCT

Coronavirus Vaccine: ಭಾರತಕ್ಕೆ ಮತ್ತೊಂದು ಕೊರೋನಾ ಲಸಿಕೆ ಲಭ್ಯ; ರಷ್ಯಾ ಮೂಲದ ಸ್ಪುಟ್ನಿಕ್ ಲಸಿಕೆ ಬಳಕೆಗೆ DCGI ಅನುಮತಿ

Sputnik V Vaccine: ರಷ್ಯಾದಲ್ಲಿ ಸಿದ್ದವಾಗಿರುವ ಸ್ಪುಟ್ನಿಕ್ ಸಂಸ್ಥೆಯ ಲಸಿಕೆಗಳನ್ನು ಭಾರತದಲ್ಲಿ ಪ್ರಯೋಗ ಮಾಡಲಾಗಿದೆ. ಹೈದರಾಬಾದ್ ನಲ್ಲಿರುವ ಡಾ. ರೆಡ್ಡಿಸ್ ಲ್ಯಾಬ್ಸ್ ನಿಂದ ಇದರ ಪ್ರಯೋಗ ನಡೆದಿದ್ದು ಸ್ಪುಟ್ನಿಕ್ ಸಂಸ್ಥೆಯು ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.

news18-kannada
Updated:April 13, 2021, 10:01 AM IST
Coronavirus Vaccine: ಭಾರತಕ್ಕೆ ಮತ್ತೊಂದು ಕೊರೋನಾ ಲಸಿಕೆ ಲಭ್ಯ; ರಷ್ಯಾ ಮೂಲದ ಸ್ಪುಟ್ನಿಕ್ ಲಸಿಕೆ ಬಳಕೆಗೆ DCGI ಅನುಮತಿ
ಕೋವಿಡ್ ಲಸಿಕೆ
  • Share this:
ನವದೆಹಲಿ, ಏ. 13: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಈಗ ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಜನರು‌ ಕೊರೋನಾ ಸೋಂಕು ಪೀಡಿತರಾಗುತ್ತಿದ್ದಾರೆ. ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡುವ ಅಭಿಯಾನವನ್ನೂ ಕೈಗೆತ್ತಿಕೊಳ್ಳಲಾಗಿದೆ. ಕೆಲ ರಾಜ್ಯಗಳು ಇನ್ನೂ ಹೆಚ್ಚಿನ‌ ಕೊರೋನಾ ಲಸಿಕೆ ಕೊಡಿ ಎಂದು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ. ಇದರಿಂದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಜೊತೆಗೆ ಮತ್ತೊಂದು ಅಗತ್ಯ ಇತ್ತು. ಈ‌ ಹಿನ್ನೆಲೆಯಲ್ಲಿ ಈಗ ರಷ್ಯಾ ಮೂಲದ ಸ್ಪುಟ್ನಿಕ್ ವಿ. ಲಸಿಕೆ ಬಳಕೆಗೆ ಭಾರತದಲ್ಲಿ ಅನುಮೋದನೆ ನೀಡಲಾಗಿದೆ.

ರಷ್ಯಾದಲ್ಲಿ ಸಿದ್ದವಾಗಿರುವ ಸ್ಪುಟ್ನಿಕ್ ಸಂಸ್ಥೆಯ ಲಸಿಕೆಗಳನ್ನು ಭಾರತದಲ್ಲಿ ಪ್ರಯೋಗ ಮಾಡಲಾಗಿದೆ. ಹೈದರಾಬಾದ್ ನಲ್ಲಿರುವ ಡಾ. ರೆಡ್ಡಿಸ್ ಲ್ಯಾಬ್ಸ್ ನಿಂದ ಇದರ ಪ್ರಯೋಗ ನಡೆದಿದ್ದು ಸ್ಪುಟ್ನಿಕ್ ಸಂಸ್ಥೆಯು ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕಳೆದ ವಾರ ಕೇಂದ್ರ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಪೆಷಲ್ ಎಕ್ಸಫರ್ಟ್ ಕಮಿಟಿ (SEC) ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಮುಂದೆ ಮನವಿ ಮಾಡಿತ್ತು.

ಮೊದಲಿಗೆ ಸ್ಪುಟ್ನಿಕ್ ಲಸಿಕಾ ಸಂಸ್ಥೆಯ ಮನವಿ ಆಧರಿಸಿ ಸಭೆ ನಡೆಸಿದ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಸ್ಪುಟ್ನಿಕ್ ಸಂಸ್ಥೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ವರದಿ ಪರಿಶೀಲಿಸಿ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಡೆಟಾ ಸಲ್ಲಿಸುವಂತೆ ಸೂಚಿಸಿತ್ತು. ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಸೂಚನೆ ಮೇರೆಗೆ ಸ್ಪುಟಿಕ್ ಲಸಿಕಾ ಸಂಸ್ಥೆಯು ಹೆಚ್ಚಿನ ಡೆಟಾ ಸಲ್ಲಿಕೆ ಮಾಡಿತ್ತು‌. ಈ ಬಗ್ಗೆ ನಿನ್ನೆ (ಏಪ್ರಿಲ್ ‌12ರಂದು) ಸಭೆ ನಡೆಸಿದ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಸ್ಪುಟ್ನಿಕ್ ವಿ ತುರ್ತು ಬಳಕೆಗೆ ಅನುಮೋದನೆ ನೀಡಿವೆ.

ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಗಳ ತುರ್ತು ಬಳಕೆಗೆ ಸಬ್ಜೆಕ್ಟ್ ಎಕ್ಸಫರ್ಟ್ ಕಮಿಟಿ ಶಿಫಾರಸು ಮಾಡಿತ್ತು. ಇದಾದ ಬಳಿಕ ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾದ ಮುಖ್ಯಸ್ಥ ಡಾ. ವಿ.ಜಿ. ಸೋಮಾನಿ ಅವರು ಸಬ್ಜೆಕ್ಟ್ ಎಕ್ಸಫರ್ಟ್ ಕಮಿಟಿ ಶಿಫಾರಸಿಗೆ ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಭಾರತವು ಸ್ಪುಟ್ನಿಕ್ ಲಸಿಕೆಗೆ ಅನುಮೋದನೆ ನೀಡಿದ ಜಗತ್ತಿನ 60ನೇ ದೇಶವಾಗಿದೆ. ಈಗ ಕೋವಿಶೀಲ್ಡ್, ಕೋವ್ಯಾಕ್ಸಿನ್ ಬಳಿಕ ದೇಶಕ್ಕೆ ಮತ್ತೊಂದು ಕೊರೋನಾ ಲಸಿಕೆ ಲಭ್ಯ ಆದಂತಾಗಿದೆ. ಸದ್ಯ ಎಲ್ಲಾ ಪ್ರಕ್ರಿಯೆಗಳು ಮುಗಿದಿರುವುದರಿಂದ ತಿಂಗಳ ಅಂತ್ಯದಲ್ಲಿ ದೇಶದಲ್ಲಿ ಸ್ಪುಟ್ನಿಕ್ ಲಸಿಕೆ ಬಳಕೆಗೆ ಲಭ್ಯ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
Published by: Sushma Chakre
First published: April 13, 2021, 10:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories