HOME » NEWS » Coronavirus-latest-news » CORONAVIRUS VACCINE DO YOU NEED AN ANTIBODY TEST AFTER GETTING VACCINATED STG LG

Coronavirus: ಕೊರೋನಾ ಲಸಿಕೆ ಪಡೆದ ನಂತರ ಆ್ಯಂಟಿಬಾಡಿ ಟೆಸ್ಟ್​ನ ಅಗತ್ಯವಿದೆಯೇ?

ವ್ಯಾಕ್ಸಿನೇಷನ್ ವಿಚಾರದಲ್ಲಿ ರೋಗನಿರೋಧಕ ಶಕ್ತಿಯನ್ನು ಅಳೆಯಲು ಪ್ರತಿಕಾಯಗಳು ಒಳ್ಳೆಯ ಆಲೋಚನೆ. ಆದರೆ ಇದನ್ನು ಮಾಡಿಸಲೇಬೇಕು ಎನ್ನುವ ನಿಯಮವಿಲ್ಲ. ಪ್ರತ್ಯೇಕವಾಗಿ ನಿಮಗೆ ಸಲಹೆ ನೀಡಿದಾಗ, ವ್ಯಾಕ್ಸಿನೇಷನ್​ಗೂ ಮೊದಲು ಮತ್ತು ನಂತರ ಪ್ರತಿಕಾಯಗಳ ಪರೀಕ್ಷೆಯ ಅಗತ್ಯವಿಲ್ಲ

news18-kannada
Updated:April 8, 2021, 9:24 AM IST
Coronavirus: ಕೊರೋನಾ ಲಸಿಕೆ ಪಡೆದ ನಂತರ ಆ್ಯಂಟಿಬಾಡಿ ಟೆಸ್ಟ್​ನ ಅಗತ್ಯವಿದೆಯೇ?
ಸಾಂದರ್ಭಿಕ ಚಿತ್ರ
  • Share this:
ಪ್ರತಿಕಾಯಗಳು ಅಥವಾ ಆ್ಯಂಟಿಬಾಡಿಗಳು ವೈ-ಆಕಾರದ ಪ್ರೋಟೀನ್‌ಗಳು. ಇವು ವೈರಸ್​ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ಪ್ರತಿಕಾಯಗಳ ಪರೀಕ್ಷೆಯೆಂದರೆ ರಕ್ತ ಪರೀಕ್ಷೆಯಾಗಿದೆ. ಕೋವಿಡ್ 19 ಲಸಿಕೆಯ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಲು ಸಂಶೋಧನೆ ನಡೆಸಲು ಪ್ರತಿಕಾಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪ್ರತಿಕಾಯ ಪರೀಕ್ಷೆಯಿಂದ ಕೋವಿಡ್​ ಪರಿಸ್ಥಿತಿ ನಿಯಂತ್ರಿಸಬಹುದು. ಹಾಗಾದರೆ ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ಪ್ರತಿಕಾಯಗಳ ಪರೀಕ್ಷೆ ಅಗತ್ಯವೇ ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.

ಲಸಿಕೆ ಪಡೆದ ಬಳಿಕ ಪ್ರತಿಕಾಯ (ಆ್ಯಂಟಿಬಾಡಿ) ಟೆಸ್ಟ್​ ಮಾಡಿಸಬೇಕೆ?

ಭಾರತದಲ್ಲಿ 7 ಕೋಟಿಗೂ ಅಧಿಕ ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ವರದಿ ನೀಡಲಾಗಿದೆ. ಅಲ್ಲದೇ ಪ್ರಪಂಚದಾದ್ಯಂತವೂ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಕೋವಿಡ್ ವ್ಯಾಕ್ಸಿನ್ ಭರವಸೆಯ ಮಿಂಚಿನಂತೆ ಎಂದು ಎಲ್ಲರು ನಂಬಿದ್ದಾರೆ. ಈ ನಿಟ್ಟಿನಲ್ಲಿ ಲಸಿಕೆ ತೆಗೆದುಕೊಂಡ ಬಹುತೇಕರಿಗೆ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ. ಕೆಲವು ಸೈಡ್​ ಎಫೆಕ್ಟ್ಸ್​ಗಳು ಸಹ ರೋಗನಿರೋಧಕ ಶಕ್ತಿಯ ವೃದ್ಧಿಗೆ ಸಹಾಯಕವಾಗಿದೆ ಎಂದು ಹೇಳಲಾಗುತ್ತಿದೆ.

ನೀವು ತೆಗೆದುಕೊಂಡ ಲಸಿಕೆ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರೀಕ್ಷಿಸಲು ಸಾಧ್ಯವೇ?

ಔಷಧಿಯಂತಲ್ಲದೇ ಲಸಿಕೆಗಳು ಕಾರ್ಯನಿರ್ವಹಿಸಲು ಕೆಲವು ದಿನಗಳ ಸಮಯವನ್ನು ತೆಗೆದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಈಗ ಕೊರೊನಾ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ನೀವು ಲಸಿಕೆ ತೆಗೆದುಕೊಂಡಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಆದಷ್ಟು ರೋಗ ನಿಮ್ಮ ಹತ್ತಿರ ಬಾರದಂತೆ ತಡೆಯಬಹುದು. ಆದರೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನವುದೇ ಕುತೂಹಲದಿಂದ ಕೂಡಿದೆ.

ಅರಾಜಕತೆ ಸೃಷ್ಠಿಸೋದು ನಾಯಕತ್ವದ ಲಕ್ಷಣ ಅಲ್ಲ; ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿ.ಟಿ. ರವಿ ಗುಡುಗು‌

ವ್ಯಾಕ್ಸಿನೇಷನ್​ ಜೊತೆಗೆ ಹೆಚ್ಚುತ್ತಿರುವ ಪರೀಕ್ಷೆಯ ಬೇಡಿಕೆಈಗಾಗಲೇ ಸಾಕಷ್ಟು ಜನರಿಗೆ ಲಸಿಕೆಗಳನ್ನು ಹಾಕಿದ್ದು ಅದನ್ನು ಪರೀಕ್ಷಿಸಲು ಸಾಕಷ್ಟು ಜನರು ಮುಂದಾಗಿದ್ದಾರೆ. ಅದರಲ್ಲೂ ವಯಸ್ಸಾದವರಿಗೂ ಸಹ ಲಸಿಕೆಗಳನ್ನು ನೀಡಲಾಗಿತ್ತು.

ಪ್ರತಿಕಾಯಗಳ(ಆ್ಯಂಟಿ ಬಾಡಿ) ಟೆಸ್ಟ್​ ಪ್ರಯೋಜನವೇನು?
ಪ್ರತಿಕಾಯಗಳು ಇನ್​ಫೆಕ್ಷನ್​ ಫೈಟಿಂಗ್​ ಪ್ರೊಟೀನ್​ ಆಗಿದ್ದು ವೈರಸ್ ನಿರ್ಮೂಲನಕ್ಕೆ ನೆರವಾಗುತ್ತದೆ. ಇದು ನಿಮ್ಮ ದೇಹಕ್ಕೆ ವೈರಸ್ ಅನ್ನು ಗುರುತಿಸುವ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ಇನ್​ಫೆಕ್ಷನ್​ ಜೊತೆಗೆ ಹೋರಾಡಲು ನೆರವಾಗುತ್ತದೆ. ಇದು ಎಷ್ಟು ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ಇದೆ ಎನ್ನುವುದನ್ನು ತಿಳಿಯಲು ನೆರವಾಗುತ್ತದೆ.

ಪ್ರತಿಕಾಯಗಳ ಪರೀಕ್ಷೆ ನಂತರ ವ್ಯಾಕ್ಸಿನೇಷನ್ ಪಡೆದ ವ್ಯಕ್ತಿಯ ರೋಗನಿರೋಧಕ ಶಕ್ತಿ ಮಟ್ಟವನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ. ಕೆಲವೊಂದು ಸಮಯದಲ್ಲಿ ಮತ್ತೆ ಸೋಂಕಿಗೆ ತುತ್ತಾಗುವ ಸಾಧ್ಯತೆಯನ್ನು ಸಹ ಇದರಿಂದ ಕಂಡುಕೊಳ್ಳಬಹುದು.

ವ್ಯಾಕ್ಸಿನೇಷನ್​ ಪಡೆದ ಎಷ್ಟು ಸಮಯದ ಬಳಿಕ ಅತ್ಯುತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಬಹುದು?

ಸದ್ಯ ಎರಡು ಹಂತದಲ್ಲಿ ವ್ಯಾಕ್ಸಿನೇಷನ್​ ನಡೆಯುತ್ತಿದ್ದು, ರೋಗನಿರೋಧಕ ಶಕ್ತಿಗೆ ಇದು ಪೂರಕವಾಗಿದೆ. ಒಬ್ಬ ವ್ಯಕ್ತಿ ಎರಡನೇ ಡೋಸ್ ಪಡೆದ 14 ದಿನಗಳ ನಂತರ ಆತನ ರೋಗನಿರೋಧಕ ಶಕ್ತಿಯ ಬಗ್ಗೆ ನಾವು ಯೋಚಿಸಬಹುದು. ಅದಕ್ಕಿಂತ ಮುಂಚೆ ಆತನ ರೋಗ ನಿರೋಧಕ ಶಕ್ತಿ ಪ್ರಾಥಮಿಕ ಹಂತದಲ್ಲಿರುತ್ತದೆ.

ಆ್ಯಂಟಿಬಾಡಿ ಹೆಚ್ಚಾಗಿರದಿದ್ದರೆ ಏನಾಗಬಹುದು?

ಅಂತಾರಾಷ್ಟ್ರೀಯ ಸ್ಟ್ಯಾಂಡರ್ಡ್ಸ್​ ಪ್ರಕಾರ 10-1000 IU ನಷ್ಟು ಸುರಕ್ಷಿತವಾಗಿದೆ. ಪರಿಣಿತರ ಪ್ರಕಾರ ವ್ಯಾಕ್ಸಿನ್​ ನಂತರ 300 ರವರೆಗೆ ಇಮ್ಯೂನಿಟಿ ಹೆಚ್ಚಾಗಬಹುದು. ಆದರೆ ಕೇವಲ ನಂಬರ್​ಗಳಿಂದ ನಿರ್ಧರಿಸಲು ಸಾಧ್ಯವಿಲ್ಲ. ಕೆಲವರು ಸುರಕ್ಷಿತವಾಗಿದ್ದರೂ ಪ್ರತಿಕಾಯಗಳು ಕಡಿಮೆ ಇದ್ದಾಗ ಸಮಸ್ಯೆ ಹೆಚ್ಚಾಗಬಹುದು. ಕಡಿಮೆ ಪ್ರತಿಕಾಯಗಳ ಉತ್ಪಾದನೆಯಿಂದ ಆತ ಸಮಸ್ಯೆಗೆ ಸಿಲುಕಬಹುದು. ಆದ್ದರಿಂದ ಇದು ಪ್ರತಿಕಾಯಗಳ ಉತ್ಪತ್ತಿಯನ್ನು ಅವಲಂಭಿಸಿದೆ.

ಹಾಗಾದರೆ ನೀವು ಪರೀಕ್ಷೆಗೆ ಒಳಪಡಬೇಕೆ?

ವ್ಯಾಕ್ಸಿನೇಷನ್ ವಿಚಾರದಲ್ಲಿ ರೋಗನಿರೋಧಕ ಶಕ್ತಿಯನ್ನು ಅಳೆಯಲು ಪ್ರತಿಕಾಯಗಳು ಒಳ್ಳೆಯ ಆಲೋಚನೆ. ಆದರೆ ಇದನ್ನು ಮಾಡಿಸಲೇಬೇಕು ಎನ್ನುವ ನಿಯಮವಿಲ್ಲ. ಪ್ರತ್ಯೇಕವಾಗಿ ನಿಮಗೆ ಸಲಹೆ ನೀಡಿದಾಗ, ವ್ಯಾಕ್ಸಿನೇಷನ್​ಗೂ ಮೊದಲು ಮತ್ತು ನಂತರ ಪ್ರತಿಕಾಯಗಳ ಪರೀಕ್ಷೆಯ ಅಗತ್ಯವಿಲ್ಲ. ಒಂದು ವೇಳೆ ಪರೀಕ್ಷೆಗಳನ್ನು ಮಾಡಿದರೂ ಅದು ನಿಖರವಾಗಿರುವ ಸ್ಪಷ್ಟತೆ ಇಲ್ಲ. ನಿಮ್ಮ ಡೋಸ್​ ಮುಗಿದಿದ್ದರೂ ಸಹ, ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದನ್ನು ಮರೆಯಬೇಡಿ.

ವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ ಎಂದು ನಿರ್ಧರಿಸುವುದೇ?

ಲಸಿಕೆಯ ಪರಿಣಾಮ ತಿಳಿಯಲು ಪ್ರತಿಕಾಯ ಪರೀಕ್ಷೆಗಳು ಸೂಕ್ತ. ಆದರೆ ಕಾಯಿಲೆಯ ವಿರುದ್ಧ ವ್ಯಾಕ್ಸಿನ್ ಹೇಗೆ ಕೆಲಸ ಮಾಡುತ್ತದೆ ಅನ್ನುವುದು ವೈದ್ಯಕೀಯ ಪರಿಧಿಯೊಳಗೆ ಬರುತ್ತದೆ.
Published by: Latha CG
First published: April 8, 2021, 9:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories