Coronavirus Vaccine: ಕೊರೋನಾ ವ್ಯಾಕ್ಸಿನ್ ಡ್ರೈ ರನ್ ಕೇಂದ್ರದಲ್ಲಿ ಈ ನಿಯಮಗಳನ್ನು ಅನುಸರಿಸಲೇಬೇಕು!

Coronavirus Vaccine Dry Run: ಡ್ರೈ ರನ್ ಕೇಂದ್ರದಲ್ಲಿ ವ್ಯಾಕ್ಸಿನ್ ಬಂದ ನಂತರ ಜನರು ಈ ನಿಯಮಗಳನ್ನು ಅನುಸರಿಸಲೇಬೇಕು. ಹಾಗಿದ್ದರೆ ಆ ನಿಯಮಗಳು ಯಾವುವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜ. 8): ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇಂದು ಕೊರೋನಾ ವ್ಯಾಕ್ಸಿನ್ ಡ್ರೈ ರನ್ ನಡೆಯಲಿದೆ. ಐಸಿಎಂಆರ್ ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 1 ಗಂಟೆ ತಡವಾಗಿ ಡ್ರೈ ರನ್ ಶುರುವಾಗಲಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಬೆಂಗಳೂರಿನಲ್ಲಿ ಡ್ರೈ ರನ್ ಆರಂಭವಾಗಲಿದೆ. ಡ್ರೈ ರನ್ ಕೇಂದ್ರದಲ್ಲಿ ವ್ಯಾಕ್ಸಿನ್ ಬಂದ ನಂತರ ಜನರು ಈ ನಿಯಮಗಳನ್ನು ಅನುಸರಿಸಲೇಬೇಕು. ಹಾಗಿದ್ದರೆ ಆ ನಿಯಮಗಳು ಯಾವುವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

ಡ್ರೈ ರನ್ ಕೇಂದ್ರದ ವಿಭಾಗದಲ್ಲಿ 4 ವಿಭಾಗಗಳು ಬರುತ್ತವೆ. ರಿಜಿಸ್ಟ್ರೇಶನ್ ವಿಭಾಗ, ವೈಟಿಂಗ್ ರೂಮ್, ವ್ಯಾಕ್ಸಿನ್ ರೂಮ್ ಮತ್ತು ಅಬ್ಸರ್ವೇಶನ್ ರೂಮ್ ಎಂಬ 4 ವಿಭಾಗಗಳು ಇರಲಿವೆ.

1. ರಿಜಿಸ್ಟ್ರೇಶನ್ ವಿಭಾಗ:

ವ್ಯಾಕ್ಸಿನ್ ಪಡೆಯಲು ಬಂದ ವ್ಯಕ್ತಿಗಳು ಕಡ್ಡಾಯವಾಗಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು.‌ ರಿಜಿಸ್ಟ್ರೇಶನ್ ಗೆ ಅಡ್ರೆಸ್ ಪ್ರೂಫ್ ಬೇಕು. ಅಡ್ರೆಸ್​ ಪ್ರೂಫ್​ಗೆ ಪಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಸರ್ಕಾರಿ ಅಧಿಕಾರಿಯಾಗಿದ್ದರೆ ಐಡಿ ಕಾರ್ಡ್, ಸರ್ಕಾರದಿಂದ ಮಾನ್ಯತೆ ಪಡೆದ ಉದ್ಯೋಗಿ ಆಗಿದ್ದರೆ ಐಡಿ ಕಾರ್ಡ್ ಇರಬೇಕಾಗುತ್ತದೆ.

2. ವೈಟಿಂಗ್ ರೂಂ:
ರಿಜಿಸ್ಟ್ರೇಶನ್ ಆದ ನಂತರ ವ್ಯಕ್ತಿಗೆ ನಂಬರ್ ಕೊಡುತ್ತಾರೆ.‌‌ ನಂಬರ್ ಪ್ರಕಾರ ವೈಟಿಂಗ್ ರೂಂನಲ್ಲಿ ಕುಳಿತುಕೊಳ್ಳಬೇಕು. ವೈಟಿಂಗ್ ರೂಮ್ ನಲ್ಲಿ ಕುಳಿತುಕೊಂಡ ನಂತರ ನಿಮ್ಮ ಹೆಸರು ಬಂದಾಗ ವ್ಯಾಕ್ಸಿನ್ ರೂಮ್‌ಗೆ ಹೋಗಬೇಕು.

3. ವ್ಯಾಕ್ಸಿನ್ ರೂಂ:
ವೈಟಿಂಗ್ ರೂಂನಲ್ಲಿ ಕುಳಿತುಕೊಂಡ ನಂತರ ವ್ಯಾಕ್ಸಿನ್ ರೂಂಗೆ ಹೋಗಬೇಕು. ವ್ಯಾಕ್ಸಿನ್ ರೂಂನಲ್ಲಿ ಡಾಕ್ಟರ್ ರೋಗಿಯನ್ನು ಕೂರಿಸಿಕೊಂಡು ವಿಚಾರಣೆ ಮಾಡಿ ವ್ಯಾಕ್ಸಿನ್ ಇಂಜೆಕ್ಷನ್ ಕೊಡುತ್ತಾರೆ. ವ್ಯಾಕ್ಸಿನ್ ಇಂಜೆಕ್ಷನ್ ಕೊಟ್ಟ ನಂತರ ಅಬ್ಸರ್ವೇಶನ್ ರೂಂಗೆ ಹೋಗಬೇಕು.

4. ಅಬ್ಸರ್ವೇಶನ್ ರೂಂ:
ವ್ಯಾಕ್ಸಿನ್ ಪಡೆದ ನಂತರ ವ್ಯಕ್ತಿಯನ್ನ ಅಬ್ಸರ್ವೇಶನ್ ರೂಮ್ ಗೆ ಶಿಫ್ಟ್​ ಮಾಡುತ್ತಾರೆ. 30 ನಿಮಿಷಗಳ ಕಾಲ ವೈದ್ಯರ ನಿಗಾದಲ್ಲೆ ಇರಬೇಕು. 30 ನಿಮಿಷದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡುತ್ತಾರೆ‌.‌ ನಂತರ ಆಸ್ಪತ್ರೆಗೆ ಶಿಫ್ಟ್​ ಮಾಡುತ್ತಾರೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಲಿಲ್ಲ ಅಂದರೆ ಎಗ್ಸಿಟ್ ಆಗಿ ಮನೆಗೆ ಹೋಗಬಹುದು.

ಇದನ್ನೂ ಓದಿ: Covid Vaccine - ಬೆಂಗಳೂರಿನ 8 ಕಡೆ ಸೇರಿದಂತೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಕ್ಸಿನ್ ಡ್ರೈ ರನ್

ಈಗಾಗಲೇ ಜ. 2ರಂದು ರಾಜ್ಯದ 5 ಜಿಲ್ಲೆಗಳಾದ ಬೆಂಗಳೂರು, (ಬಿಬಿಎಂಪಿ ಒಳಗೊಂಡಂತೆ), ಬೆಳಗಾವಿ, ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ಮೊದಲ ಹಂತದ ಡ್ರೈ ರನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹಾಗೆಯೇ ದೇಶಾದ್ಯಂತ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ರನ್ ನಡೆಯಲಿದೆ.

ಬೆಂಗಳೂರಿನ 8 ವಲಯಗಳಲ್ಲಿ ಇಂದು ಡ್ರೈ ರನ್ ನಡೆಯಲಿದೆ. ಬೊಮ್ಮನಹಳ್ಳಿ ವಲಯ - ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ದಾಸರಹಳ್ಳಿ ವಲಯ - ಸಪ್ತಗಿರಿ ಮೆಡಿಕಲ್ ಕಾಲೇಜು, ಈಸ್ಟ್ ವಲಯ - ಹಲಸೂರು ರೆಫೆರಲ್ ಆಸ್ಪತ್ರೆ, ಮಹದೇವಪುರ ವಲಯ - ಕೆ.ಆರ್.ಪುರಂ ಜನರಲ್ ಆಸ್ಪತ್ರೆಆರ್.ಆರ್.ನಗರ - ಕೆಂಗೇರಿ ಪಿಹೆಚ್‌ಸಿ ದಕ್ಷಿಣ ವಲಯ - ಕಿಮ್ಸ್ ಆಸ್ಪತ್ರೆವೆಸ್ಟ್ ವಲಯ - ಬಿಎಂಸಿ ಯಲಹಂಕ ವಲಯ - ಆಸ್ಟ್ರೋ ಸಿಎಂಐ ಆಸ್ಪತ್ರೆಯಲ್ಲಿ ಡ್ರೈ ರನ್ ನಡೆಯಲಿದೆ.

ಜಿಲ್ಲಾ ಆಸ್ಪತ್ರೆ/ ವೈದ್ಯಕೀಯ ಮಹಾವಿದ್ಯಾಲಯಗಳ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ/ ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ವೈದ್ಯಕೀಯ ಕಾಲೇಜು / 100ಕ್ಕಿಂತ ಹೆಚ್ಚು ಫಲಾನುಭವಿಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಯಲ್ಲಿ ಡ್ರೈ ರನ್ ನಡೆಯಲಿದೆ.

ಬೆಂಗಳೂರು ಮೆಡಿಕಲ್ ಕಾಲೇಜಿನ ವಾಣಿ ವಿಲಾಸ್ ಆವರಣದಲ್ಲಿ ಡ್ರೈ ರನ್​ಗೆ ಭರದ ಸಿದ್ಧತೆ ನಡೆದಿದೆ. ವೇಟಿಂಗ್ ರೂಂ, ವ್ಯಾಕ್ಸಿನ್ ರೂಂ, ಹಾಗೂ ಅಬ್ಸರ್ವೇಷನ್ ರೂಂಗಳ ನಿರ್ಮಾಣ ಮಾಡಲಾಗಿದೆ. ಇಂದು 25 ಆರೋಗ್ಯ ಕಾರ್ಯಕರ್ತರು ರಿಹರ್ಸಲ್‌ನಲ್ಲಿ ಭಾಗಿಯಾಗಲಿದ್ದಾರೆ. ಡ್ರೈ ರನ್​ಗೆ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಇಲ್ಲ. ಈಗಾಗಲೇ ನೊಂದಣಿ ಮಾಡಿಕೊಳ್ಳದೆ ಇರುವವರಿಗೆ ಅವಕಾಶ ಇಲ್ಲ. ನಿನ್ನೆಯೇ ಒಟಿಪಿ ಬಂದಿರುವವರು ಇಂದು ಭಾಗಿಯಾಗಲಿದ್ದಾರೆ.
Published by:Sushma Chakre
First published: