Coronavirus Vaccine: ಭಾರತ್ ಬಯೋಟೆಕ್​ನಿಂದ ಪ್ರಾಣಿಗಳ ಮೇಲೆ ಕೊವಾಕ್ಸಿನ್ ಕೊರೋನಾ ಲಸಿಕೆ ಪ್ರಯೋಗ ಯಶಸ್ವಿ

Covaxin: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಜೊತೆ ಸೇರಿಕೊಂಡು ಭಾರತ್ ಬಯೋಟೆಕ್ ಇಂಡಿಯಾ ಲಿಮಿಟೆಡ್ ಕೊವಾಕ್ಸಿನ್ ಲಸಿಕೆಯನ್ನು ಕಂಡುಹಿಡಿದಿದೆ. ಈಗಾಗಲೇ ಈ ಲಸಿಕೆಯನ್ನು ಪ್ರಾಣಿಗಳ ಪ್ರಯೋಗ ಮಾಡಲಾಗಿದ್ದು, ಯಶಸ್ಸು ಸಿಕ್ಕಿದೆ.

Sushma Chakre | news18-kannada
Updated:September 12, 2020, 9:30 AM IST
Coronavirus Vaccine: ಭಾರತ್ ಬಯೋಟೆಕ್​ನಿಂದ ಪ್ರಾಣಿಗಳ ಮೇಲೆ ಕೊವಾಕ್ಸಿನ್ ಕೊರೋನಾ ಲಸಿಕೆ ಪ್ರಯೋಗ ಯಶಸ್ವಿ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಸೆ. 12): ಕೊರೋನಾ ಸೋಂಕಿಗೆ ಲಸಿಕೆ ಕಂಡುಹಿಡಿಯಲು ಜಗತ್ತಿನ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಲೇ ಇವೆ. ಇದೀಗ ಪ್ರಮುಖ ಔಷಧಿ ಸಂಸ್ಥೆಗಳಲ್ಲೊಂದಾದ ಭಾರತ್ ಬಯೋಟೆಕ್ ಕಂಡುಹಿಡಿದಿರುವ ಕೊರೋನಾ ಲಸಿಕೆಯನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದ್ದು, ಆ ಲಸಿಕೆ ಯಶಸ್ವಿಯಾಗಿದೆ ಎಂದು ಘೋಷಿಸಿದೆ. ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಜೊತೆ ಸೇರಿಕೊಂಡು ಭಾರತ್ ಬಯೋಟೆಕ್ ಇಂಡಿಯಾ ಲಿಮಿಟೆಡ್ ಕೊವಾಕ್ಸಿನ್ ಲಸಿಕೆಯನ್ನು ಕಂಡುಹಿಡಿದಿದೆ. ಈಗಾಗಲೇ ಈ ಲಸಿಕೆಯನ್ನು ಪ್ರಾಣಿಗಳ ಪ್ರಯೋಗ ಮಾಡಲಾಗಿದ್ದು, ಯಶಸ್ಸು ಸಿಕ್ಕಿದೆ. ಈ ಮೂಲಕ ಭಾರತದ ಔಷಧ ಕಂಪನಿಯೊಂದು ಕೊರೋನಾ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ಬಹುತೇಕ ಯಶಸ್ಸು ಕಂಡಿದೆ.

ವಿಶ್ವದಲ್ಲಿ ಸುಮಾರು 140 ಕಂಪೆನಿಗಳಲ್ಲಿ ಕೋವಿಡ್-19ಗೆ ಲಸಿಕೆ ಕಂಡುಹಿಡಿಯುತ್ತಿರುವ ಕಾರ್ಯ ನಡೆಯುತ್ತಿದೆ. ಅವುಗಳಲ್ಲಿ 16 ಕಂಪೆನಿಗಳು ಕ್ಲಿನಿಕಲ್ ಪ್ರಯೋಗದ ಹಂತ ತಲುಪಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅವುಗಳಲ್ಲಿ ಚೀನಾ ದೇಶದಲ್ಲಿ 5, ಅಮೆರಿಕದಲ್ಲಿ 3, ಇಂಗ್ಲೆಂಡ್ ನಲ್ಲಿ 2, ಜರ್ಮನಿ, ರಷ್ಯಾ ಮತ್ತು ಆಸ್ಟ್ರೇಲಿಯಾಗಳಲ್ಲಿ ತಲಾ ಒಂದು ಕಂಪೆನಿಗಳು ಕ್ಲಿನಿಕಲ್ ಪ್ರಯೋಗ ಹಂತ ತಲುಪಿವೆ. ಇದೀಗ ಭಾರತದ ಹೈದರಾಬಾದ್​ ಮೂಲದ ಭಾರತ್ ಬಯೋಟೆಕ್ ಸಂಸ್ಥೆಗೆ ಭಾರತ್ ಬಯೋಟೆಕ್​ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿತ್ತು. ಇದೀಗ ಈ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೊವಾಕ್ಸಿನ್ ಲಸಿಕೆಯನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದ್ದು, ಯಶಸ್ವಿಯಾಗಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: Coronavirus Vaccine: ಮೂಗಿನ ಮೂಲಕ ಸಿಂಪಡಿಸುವ ಕೊರೋನಾ ಲಸಿಕೆ ಪ್ರಯೋಗಕ್ಕೆ ಚೀನಾ ಒಪ್ಪಿಗೆ

ಭಾರತ್ ಬಯೋಟೆಕ್ ಸಂಸ್ಥೆ ಇದುವರೆಗೆ ಪೋಲಿಯೋ, ರೇಬಿಸ್, ರೊಟಾ ವೈರಸ್, ಚಿಕಾನ್ ಗುನ್ಯಾ, ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಜಿಂಕಾ ವಿರುದ್ಧದ ಕಾಯಿಲೆಗಳಿಗೆ ಲಸಿಕೆಯನ್ನು ಕಂಡುಹಿಡಿದಿದೆ. ಇದೀಗ ಮಾರಣಾಂತಿಕ ಕೊರೋನಾ ವೈರಸ್​ಗೂ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ಬಹುತೇಕ ಯಶಸ್ಸು ಕಂಡಿದೆ.

ಚೀನಾ ದೇಶ ಈಗಾಗಲೇ ಮೂಗಿನ ಮೂಲಕ ಸಿಂಪಡಿಸುವ ಕೊರೋನಾ ಲಸಿಕೆಯನ್ನು ಕಂಡುಹಿಡಿದಿದ್ದು, ನವೆಂಬರ್ ತಿಂಗಳಲ್ಲಿ ಇದರ ಮೊದಲ ಹಂತದ ಪ್ರಯೋಗವನ್ನು ಆರಂಭಿಸಲಿದೆ. ಇದಕ್ಕಾಗಿ 100 ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಚೀನಾದ ನ್ಯಾಷನಲ್ ಮೆಡಿಕಲ್ ಪ್ರೊಡಕ್ಟ್ ಅಡ್ಮಿನಿಸ್ಟ್ರೇಷನ್​ನಿಂದ ಅನುಮತಿ ಪಡೆದ ಏಕೈಕ ಔಷಧ ಪ್ರಯೋಗ ಇದಾಗಿದೆ. ಈ ಲಸಿಕೆ ಕೇವಲ ಕೊರೋನಾ ವೈರಸ್​​ ಅನ್ನು ಮಾತ್ರವಲ್ಲದೆ ಹೆಚ್​1ಎನ್1, ಹೆಚ್​3ಎನ್​2, ಬಿ ಇನ್​ಫ್ಲುಯೆಂಜಾ ವೈರಸ್​ ಅನ್ನು ಕೂಡ ನಿಯಂತ್ರಿಸಬಲ್ಲದು ಎನ್ನಲಾಗಿದೆ.
Published by: Sushma Chakre
First published: September 12, 2020, 9:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading