Vaccine for Children: ದೇಶದಲ್ಲಿ ಮಕ್ಕಳಿಗೆ ನವೆಂಬರ್‌ನಿಂದ ಕೋವ್ಯಾಕ್ಸಿನ್‌ ಲಸಿಕೆ: ಎನ್‌.ಕೆ. ಅರೋರಾ

COVID-19 Vaccine for Kids: 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ -19 ಲಸಿಕೆ ಹಾಕುವ ಕಾರ್ಯ ಮುಂದಿನ ತಿಂಗಳಿನಿಂದ ಆರಂಭವಾಗಬಹುದು ಎನ್ನಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Coronavirus ಸದ್ಯ ದೇಶದಲ್ಲಿ ಕಡಿಮೆಯಾಗಿದೆ. ಇದಕ್ಕೆ ದೇಶದ ವಯಸ್ಕ ಜನಸಂಖ್ಯೆಯಲ್ಲಿ ಬಹುಪಾಲು ಕನಿಷ್ಠ ಒಂಡು ಡೋಸ್‌ ಲಸಿಕೆಯನ್ನಾದರೂ ಪಡೆದುಕೊಂಡಿದ್ದಾರೆ. ಸದ್ಯ, ಎರಡನೇ ಡೋಸ್‌ ಲಸಿಕೆ ಪಡೆಯುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, COVID-19 ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೋವಿಡ್‌ ಆತಂಕವಿದೆ. ಅದು ಮಕ್ಕಳನ್ನೇ ಹೆಚ್ಚಾಗಿ ಗುರಿಯಾಗಿಸುತ್ತೆ ಅಂತ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ರು. ಈ ಹಿನ್ನೆಲೆ, ಶಾಲೆ, ಕಾಲೇಜುಗಳು ಆರಂಭ ಮಾಡುತ್ತಿರುವುದಕ್ಕೆ ಕೆಲ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಲವರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸೋದೇ ಇಲ್ಲ ಎಂದೂ ಹೇಳುತ್ತಿದ್ದರು. ಆದರೀಗ, ಆ ಸಮಸ್ಯೆಯೂ ನಿವಾರಣೆ ಆಗುತ್ತಿದ್ದು, ದೇಶದಲ್ಲೂ ಮಕ್ಕಳಿಗೆ ಶೀಘ್ರದಲ್ಲೇ ಕೋವಿಡ್‌ - 19 ವಿರುದ್ಧ ಲಸಿಕೆ ನೀಡುವುದು ಆರಂಭವಾಗಲಿದೆ. ಭಾರತ ನಿರ್ಮಿತ ಕೋವ್ಯಾಕ್ಸಿನ್‌ ಲಸಿಕೆಯನ್ನು 2 - 18 ವರ್ಷದ ಕೆಳಗಿನ ಮಕ್ಕಳಿಗೆ ನವೆಂಬರ್‌ನಿಂದಲೇ ನೀಡಲಾಗುವುದು ಎಂದು ತಿಳಿದುಬಂದಿದೆ.

  2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ -19 ಲಸಿಕೆ ಹಾಕುವ ಕಾರ್ಯ ಮುಂದಿನ ತಿಂಗಳಿನಿಂದ ಆರಂಭವಾಗಬಹುದು ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹದ ಪ್ರತಿರಕ್ಷಣಾ ಕೇಂದ್ರದ COVID-19 Working Groupನ ಅಧ್ಯಕ್ಷ ಡಾ. ಎನ್. ಕೆ ಅರೋರಾ ಹೇಳಿದರು.

  ನವೆಂಬರ್​ ಆರಂಭದಿಂದಲೇ ಲಸಿಕೆ:

  CNN-News 18ಗೆ ನೀಡಿದ ಸಂದರ್ಶನದಲ್ಲಿ, ಕೇಂದ್ರವು ವಯಸ್ಕರಂತೆ ಇಲ್ಲೂ ಸಹ ಕೋಮಾರ್ಬಿಡೀಸ್‌ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ ಮತ್ತು ಪಟ್ಟಿಯಲ್ಲಿರುವ ಮಕ್ಕಳಿಗೆ ಲಸಿಕೆ ಡೋಸ್‌ ನೀಡಲು ಮೊದಲ ಆದ್ಯತೆ ನೀಡಲಾಗುವುದು ಎಂದು ಅರೋರಾ ಹೇಳಿದರು.

  ಕೋಮಾರ್ಬಿಡಿಟಿ ಇರುವ ಮಕ್ಕಳಿಗೆ ಅಕ್ಟೋಬರ್‌ ಅಂತ್ಯ ಅಥವಾ ನವೆಂಬರ್‌ ಆರಂಭದಿಂದಲೇ ಲಸಿಕೀಕರಣ ಆರಂಭವಾಗಬಹುದು. 2022ರ ಮೊದಲ ತ್ರೈಮಾಸಿಕದಲ್ಲಿ ಆರೋಗ್ಯವಂತ ಮಕ್ಕಳಿಗೆ ಕೋವಿಡ್ - 19 ವಿರುದ್ಧದ ಲಸಿಕೆ ನೀಡಬಹುದು ಎಂದೂ ಡಾ. ಅರೋರಾ ಹೇಳಿದರು.

  2 ವರ್ಷದ ಮಕ್ಕಳಿಗೆ ಲಸಿಕೆ ನೀಡುತ್ತಿರುವ ಮೊದಲ ದೇಶ ಭಾರತ:

  2 ವರ್ಷದಷ್ಟು ಕಿರಿಯ ಮಕ್ಕಳಿಗೆ ಯಾವ ದೇಶದಲ್ಲೂ ಕೋವಿಡ್ - 19 ವಿರುದ್ಧ ಹೋರಾಡುವ ಲಸಿಕೆ ನೀಡುತ್ತಿಲ್ಲ. ಈ ಹಿನ್ನೆಲೆ ಇಷ್ಟು ಕಿರಿಯ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು ಅಧಿಕೃತಗೊಳಿಸಿದ ಮೊದಲ ದೇಶ ಎನಿಸಿಕೊಳ್ಳಲಿದೆ ಭಾರತ.

  ಕೇಂದ್ರವು ಅಕ್ಟೋಬರ್ 12 ರಂದು Bharath Bioteckನ Covaxinಗೆ 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ತುರ್ತು ಬಳಕೆಯ ಅಧಿಕಾರ ನೀಡಿತು.

  28 ದಿನಗಳ ಅಂತರದಲ್ಲಿ ಈ ಮಕ್ಕಳಿಗೆ ಎರಡು ಡೋಸ್‌ಗಳ ಲಸಿಕೆ ನಿಡಲಾಗುವುದು ಎಂದು ತಿಳಿದುಬಂದಿದೆ.

  ಇದನ್ನೂ ಓದಿ: ಭಾರತಕ್ಕೆ ಶುಭ ಸಂಕೇತವಾದ ಮಂಗಳವಾರ; ಕಳೆದ 7 ತಿಂಗಳಲ್ಲಿ ಅತ್ಯಂತ ಕಡಿಮೆ ಕೋವಿಡ್ ಪ್ರಕರಣ ದಾಖಲು

  ಇನ್ನು, ಕೋವ್ಯಾಕ್ಸಿನ್‌ ಮಾತ್ರವಲ್ಲದೆ, ZyCoV-D ಲಸಿಕೆಗೂ ಕೇಂದ್ರ ಸರ್ಕಾರ ಅನುಮೋದನೆ ನಿಡಿದ್ದು, ಇದು ವಯಸ್ಕರ ಜತೆಗೆ 12 ರಿಂದ 18 ವಯೋಮಾನದವರಿಗೆ ನೀಡಲಾಗುವ ಮೊದಲ ಲಸಿಕೆಯಾಗಿದೆ. ಆಗಸ್ಟ್‌ ತಿಂಗಳಲ್ಲೇ ಝೈಡಸ್‌ ಕ್ಯಾಡಿಲಾ ಕಂಪನಿಯ 3 ಡೋಸ್‌ನ ಸೂಜಿ ರಹಿತವಾದ ಲಸಿಕೆಗೆ ಒಪ್ಪಿಗೆ ದೊರೆತಿತ್ತು.. ಆದರೆ, ಈ ಲಸಿಕೆಯ ಉತ್ಪಾದನೆ ಇನ್ನೂ ನಡೆಯುತ್ತಿದ್ದು, ಅಲ್ಲದೆ, ಬೆಲೆಯ ವಿಚಾರದಲ್ಲೂ ಮೋದಿ ಸರ್ಕಾರದ ಜತೆಗೆ ಮಾತುಕತೆ ಮುಂದುವರಿದಿದೆ ಎನ್ನಲಾಗಿದೆ.

  ಇದನ್ನೂ ಓದಿ: Covid Vaccine: ನಗರ ಹಾಗೂ ಗ್ರಾಮೀಣ ಭಾರತದ ನಡುವಿನ ಅಂತರಕ್ಕೆ ಕಾರಣ ಇದು

  ಝೈಡಸ್‌ ಕ್ಯಾಡಿಲಾ ಫಾರ್ಮಾ ಕಂಪನಿಯು ತನ್ನ ಮೂರು-ಡೋಸ್‌ನ ZyCoV-D ಲಸಿಕೆಗೆ 1,900 ರೂಗಳ ಬೆಲೆ ಪ್ರಸ್ತಾಪಿಸಿದ ನಂತರ ಕೇಂದ್ರ ಸರ್ಕಾರ ಮತ್ತು ಝೈಡಸ್‌ ಕ್ಯಾಡಿಲಾ ಕಂಪನಿಯ ನಡುವೆ ಬೆಲೆ ಕುರಿತು ಮಾತುಕತೆ ನಡೆಯುತ್ತಿದೆ.
  Published by:Sharath Sharma Kalagaru
  First published: