ಕೋವಿಡ್-19 ಲಸಿಕೆ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಅಧಿಕಾರಿಗಳು ಆದೇಶ ಪಾಲನೆ ಮತ್ತು ಲಸಿಕೆಯ ಬಗ್ಗೆ ಇರುವ ಹೆದರಿಕೆಯನ್ನು ನಿಯಂತ್ರಿಸಲು ಉಚಿತ ಸಬ್ ವೇ ಪ್ರಯಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ನ್ಯೂಯಾರ್ಕ್ ಸರ್ಕಾರ ಆಂಡ್ರ್ಯೂ ಕ್ಯುಮೊ ಅವರ ಪ್ರಕಾರ ಸಂಯುಕ್ತ ಸರ್ಕಾರದಿಂದ ಸಂಪೂರ್ಣ ಅನುಮೋದನೆ ಪಡೆಯುವವರೆಗೆ ರಾಜ್ಯವು ಲಸಿಕೆಗಳನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಒಂದು ವೇಳೆ ಅದು ಸಾಧ್ಯವಾದರೆ ನ್ಯೂಯಾರ್ಕ್ ರಾಜ್ಯದ ವಿದ್ಯಾರ್ಥಿಗಳು, ನ್ಯೂಯಾರ್ಕ್‌ನ ವಿಶ್ವವಿದ್ಯಾಲಯ ಮತ್ತು ಕಾಲೇಜು ವ್ಯವಸ್ಥೆಯ ಪ್ರತಿಯೊಬ್ಬರು ತರಗತಿಗಳಿಗೆ ಪ್ರವೇಶ ಪಡೆದುಕೊಳ್ಳಲು ಲಸಿಕೆಯನ್ನು ತೆಗೆದುಕೊಳ್ಳಲೇಬೇಕು ಎಂದು ಕ್ಯುಮೊ ಅವರು ನ್ಯೂಯಾರ್ಕ್ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
'ನೀವು ಲಸಿಕೆಯನ್ನು ತೆಗೆದುಕೊಳ್ಳಬೇಕಿದ್ದಲ್ಲಿ ಈಗಲೇ ಅದನ್ನು ಪಡೆಯಿರಿ. ನೀವು ಹೇಗಾದರೂ ಅದನ್ನು ಪಡೆಯಲೇಬೇಕು' ಎಂದು ಕ್ಯುಮೊ ಹೇಳಿದರು. ನ್ಯೂಯಾರ್ಕ್‌ನ 6 ಸಿಟಿ ಸಬ್ ವೇ ನಿಲ್ದಾಣಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವವರು ಬುಧವಾರದಿಂದ ಭಾನುವಾರದವರೆಗೆ ಉಚಿತ ಮೆಟ್ರೋ ಕಾರ್ಡ್ ಸೇವೆ ಪಡೆಯಬಹುದಾಗಿದೆ ಎಂದು ನ್ಯೂಯಾರ್ಕ್ ಸಿಟಿ ಟ್ರಾನ್ಸಿಟ್ ಸದ್ಯದ ಅಧ್ಯಕ್ಷೆ ಸಾರಾ ಫೀನ್ಬರ್ಗ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಬ್‌ವೇ ಮಾರ್ಗದಲ್ಲಿ 2.23 ಮಿಲಿಯನ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಲಾಂಗ್ ಐಲ್ಯಾಂಡ್ ರೈಲು ರಸ್ತೆ ಮತ್ತು ಮೆಟ್ರೋ ನಾರ್ತ್‌ನ ಒಸೈನಿಂಗ್ ಮತ್ತು ಹ್ಯಾಂಪ್‌ಸ್ಟೆಡ್‌ನ ಎರಡು ನಿಲ್ದಾಣಗಳಲ್ಲಿ ಲಸಿಕೆಗಳನ್ನು ಹಾಕಲಾಗುತ್ತಿದೆ. ಇದರಿಂದಾಗಿ ಉಚಿತವಾಗಿ ಎರಡು ಬಾರಿ ಏಕಮುಖ ಪ್ರವಾಸ ಮಾಡುವ ಅವಕಾಶವನ್ನು ಪಡೆಯಬಹುದಾಗಿದೆ.
ಕ್ಯುಮೊ ಮತ್ತು ಸಾರಿಗೆ ಅಧಿಕಾರಿಗಳ ಹೇಳಿಕೆ ಪ್ರಕಾರ ಪಾಪ್ ಅಪ್ ಲಸಿಕೆಯ ತಾಣಗಳು ಲಸಿಕೆಯ ವೇಗವನ್ನು ಹೆಚ್ಚಿಸಬಹುದು. ಅಲ್ಲದೇ ನ್ಯೂಯಾರ್ಕ್ ನಗರದ ಸಬ್ ವೇ ಮೇ 17 ರಿಂದ ದಿನದ 24 ಗಂಟೆಗಳು ಪುನರಾರಂಭಿಸಲು ಆಲೋಚಿಸಿದ್ದು, ಪ್ರಯಾಣಿಕರ ಮನಸ್ಸು ಹಗುರಗೊಳಿಸಿದೆ.
ಇದನ್ನೂ ಓದಿ: ಚೀನಾದ 18 ಟನ್ ರಾಕೆಟ್ ಅವಶೇಷಗಳು ಹಿಂದೂ ಮಹಾಸಾಗರದಲ್ಲಿ ಪತ್ತೆ; ನಿಟ್ಟುಸಿರು ಬಿಟ್ಟ ವಿಜ್ಞಾನಿಗಳು
ಫೀನ್ಬರ್ಗ್ ಅವರು ಹೇಳುವ ಪ್ರಕಾರ ಈ ಯೋಜನೆ ಸಾರ್ವಜನಿಕರಿಗೆ ಮತ್ತು ಸಬ್‌ವೇ ಉದ್ಯೋಗಿಗಳಿಗೆ ಇಬ್ಬರಿಗೂ ಅವಕಾಶವನ್ನು ಕಲ್ಪಿಸಿದೆ. ನ್ಯೂಯಾರ್ಕ್ ಮೆಟ್ರೋಪಾಲಿಟನ್ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಮತ್ತು ಸಿಇಒ ಪ್ಯಾಟ್ ಫೊಯೆ ಅವರ ಪ್ರಕಾರ ಅದರಲ್ಲೂ ಶೇಕಡಾ 50 ರಷ್ಟು ಅಥವಾ 35,000 ಸಾರಿಗೆ ಕಾರ್ಮಿಕರು ಇಲ್ಲಿಯವರೆಗೆ ಕೋವಿಡ್ 19 ಲಸಿಕೆಯ ಕನಿಷ್ಠ ಪ್ರಮಾಣವನ್ನು ಪಡೆದಿದ್ದಾರೆ. ಇಲ್ಲಿಯವರೆಗೆ ಶೇಕಡಾ 39.4 ರಷ್ಟು ಅಥವಾ 77 ಮಿಲಿಯನ್ ನ್ಯೂಯಾರ್ಕ್ ನಿವಾಸಿಗಳು ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪ್ರಿವೆನ್ಷನ್ ಡೇಟಾ ತಿಳಿಸಿದೆ.
ಆದರೆ ರಾಜ್ಯ ದತ್ತಾಂಶವು ಲಸಿಕೆ ಪಡೆಯುವ ನಿವಾಸಿಗಳ ಸಂಖ್ಯೆ ಪ್ರತಿದಿನ ಕಡಿಮೆಯಾಗುತ್ತಿದೆ. ಅದರಲ್ಲೂ ಯುವ ಜನರಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಇದೆ. 16 ರಿಂದ 25 ವರ್ಷದೊಳಗಿನ ನಾಲ್ಕನೇ ಒಂದು ಭಾಗದಷ್ಟು ಜನರಿಗೆ ಹೋಲಿಸಿದರೆ, 65 ರಿಂದ 74 ವರ್ಷದೊಳಗಿನ ಸುಮಾರು ಮೂರರಲ್ಲಿ ನಾಲ್ಕು ಭಾಗದಷ್ಟು ಜನರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ.
ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿನ ಅಧ್ಯಾಪಕರು ಮತ್ತು ಸಿಬ್ಬಂದಿಗಳು ಲಸಿಕೆ ಪಡೆಯಬೇಕೇ ಎಂಬ ಪ್ರಶ್ನೆಗೆ ಕ್ಯೂಮೊ ಕಛೇರಿ ತಕ್ಷಣ ಪ್ರತಿಕ್ರಿಯೆ ನೀಡಲಿಲ್ಲ. ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯದಲ್ಲಿ ಸುಮಾರು 400,000 ವಿದ್ಯಾರ್ಥಿಗಳು ಈಗಾಗಲೇ ದಾಖಲಾಗಿದ್ದಾರೆ, ಆದರೆ ಸಿಟಿ ಯೂನಿವರ್ಸಿಟಿ ಸುಮಾರು 270,000 ವಿದ್ಯಾರ್ಥಿಗಳನ್ನು ಹೊಂದಿದೆ.
ನ್ಯೂಯಾರ್ಕ್ ನಗರದ ಮೇಯರ್ ಬಿಲ್ ಡಿ ಬ್ಲೇಸಿಯೊ ಅವರ ಹೇಳಿಕೆ ಪ್ರಕಾರ ನಗರದ ಬ್ರೂಕ್ಲಿನ್ ಬೊಟಾನಿಕಲ್ ಗಾರ್ಡನ್, ಬ್ರಾಂಕ್ಸ್ ಮೃಗಾಲಯ, ಲಿಂಕನ್ ಸೆಂಟರ್‌ನಲ್ಲಿನ ಕಾರ್ಯಕ್ರಮಗಳು, ಬ್ರೂಕ್ಲಿನ್ ಸೈಕ್ಲೋನ್ಸ್ ಮೈನರ್ ಲೀಗ್ ಬೇಸ್ ಬಾಲ್ ತಂಡ ಮತ್ತು NYCFC ಸಾಕರ್ ಕ್ಲಬ್ ಸೇರಿದಂತೆ ಅನೇಕ ಕಡೆ ಲಸಿಕೆ ತೆಗೆದುಕೊಂಡರೆ ಟಿಕೆಟ್ಗಳಿಗೆ ಪ್ರೋತ್ಸಾಹ ಧನ ನೀಡುತ್ತಿದೆ. ಮೇಯರ್ ಅವರ ಮಾತಿನಂತೆ ಕೆಲವು ವಿಷಯಗಳನ್ನು ನಿಶ್ಚಿತಗೊಳಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ