ದೆಹಲಿ ವೈದ್ಯರಿಗೆ ಕೊರೋನಾ ಸೋಂಕು ದೃಢ​; ಅವರೊಂದಿಗೆ ಸಂಪರ್ಕ ಹೊಂದಿದ್ದ 800 ಜನಕ್ಕೆ ಗೃಹ ದಿಗ್ಬಂಧನ

ದೆಹಲಿಯ ಕ್ಲಿನಿಕ್​ನ ವೈದ್ಯರಿಗೆ ಮಾತ್ರವಲ್ಲದೆ ಅವರ ಹೆಂಡತಿ, ಮಕ್ಕಳಲ್ಲೂ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಕುಟುಂಬ, ನರ್ಸ್, ಚಿಕಿತ್ಸೆ ಪಡೆದಿದ್ದ ರೋಗಿಗಳನ್ನು ಹೋಮ್ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

Sushma Chakre | news18-kannada
Updated:March 26, 2020, 1:25 PM IST
ದೆಹಲಿ ವೈದ್ಯರಿಗೆ ಕೊರೋನಾ ಸೋಂಕು ದೃಢ​; ಅವರೊಂದಿಗೆ ಸಂಪರ್ಕ ಹೊಂದಿದ್ದ 800 ಜನಕ್ಕೆ ಗೃಹ ದಿಗ್ಬಂಧನ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಮಾ. 26): ದೆಹಲಿಯ ಮೊಹಲ್ಲಾ ಕ್ಲಿನಿಕ್​ನ ವೈದ್ಯರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಬಳಿ ಚಿಕಿತ್ಸೆ ಪಡೆದ ಮತ್ತು ಆ ಕ್ಲಿನಿಕ್​ಗೆ ಬಂದಿದ್ದ ಸುಮಾರು 800 ಜನರನ್ನು ಐಸೋಲೇಷನ್​ನಲ್ಲಿ ಇರಿಸಲಾಗಿದೆ.

ಈ ಕ್ಲಿನಿಕ್​ನ ವೈದ್ಯ, ವೈದ್ಯರ ಹೆಂಡತಿ, ಮಕ್ಕಳಲ್ಲೂ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಕುಟುಂಬ, ನರ್ಸ್​ ಸೇರಿದಂತೆ ಇಲ್ಲಿಗೆ ಬಂದಿದ್ದ ರೋಗಿಗಳನ್ನು ಕ್ವಾರಂಟೈನ್​ನಲ್ಲಿ ಇರಿಸಿರುವುದಾಗಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿಕೆ ನೀಡಿದ್ದಾರೆ.

ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ವೈದ್ಯರು, ನರ್ಸ್ ಗಳು, ಲ್ಯಾಬ್ ಟೆಕ್ನಿಷಿಯನ್ಸ್, ಸ್ವೀಪರ್ಸ್ ಸೇರಿದಂತೆ ನೇರವಾಗಿ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡವರೆಲ್ಲರಿಗೂ‌ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಕೊರೋನಾ ಸೊಂಕಿತ ವೈದ್ಯರು ಸೌದಿ ಅರೇಬಿಯಾದಿಂದ ಬಂದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿದ್ದರು ಎಂಬುದು ತಿಳಿದುಬಂದಿದೆ. ಆ ವ್ಯಕ್ತಿಯಿಂದಲೇ ವೈದ್ಯರಿಗೆ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: Corona Challenge: ಕಮೋಡ್ ನೆಕ್ಕಿ ಚಾಲೆಂಜ್ ಹಾಕಿದ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆ!

ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಾರ್ಚ್ 12 ರಿಂದ 18ರವರೆಗೆ ಈ ಕ್ಲಿನಿಕ್​ಗೆ ಭೇಟಿ ನೀಡಿದವರೆಲ್ಲರಿಗೂ ಹೋಮ್ ಐಸೋಲೇಷನ್​ನಲ್ಲಿ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಒಂದು ವೇಳೆ ವೈದ್ಯರ ತಪಾಸಣೆ ವೇಳೆ ವೈರಸ್ ಸೋಂಕು ತಗುಲಿದ್ದು, ಅಂತಹವರಿಗೆ ವೈರಸ್ ಲಕ್ಷಣ ಕಂಡುಬಂದರೆ ಅವರನ್ನು ಪ್ರತ್ಯೇಕವಾಗಿ ಇರಿಸಲಾಗುವುದು.

 
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading