ವಾಷಿಂಗ್ಟನ್ (ಏ.23): ಕೊರೋನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಈ ವೈರಸ್ನಿಂದ ಮೃತಪಡುವವರ ಸಂಖ್ಯೆ ಎರಡು ಲಕ್ಷ ಸಮೀಪಿಸಿದೆ. ಸೋಂಕಿತರ ಸಂಖ್ಯೆ 26 ಲಕ್ಷದ ಗಡಿ ದಾಟಿದೆ.
ಇಡೀ ವಿಶ್ವದಲ್ಲಿ 26.36 ಲಕ್ಷ ಜನರಿಗೆ
ಕೊರೋನಾ ಅಂಟಿದೆ. ಈ ಮಹಾಮಾರಿ ವೈರಸ್ನಿಂದ 1.84 ಲಕ್ಷ ಮಂದಿ ಅಸುನೀಗಿದ್ದಾರೆ. ಈ ವೈರಸ್ನಿಂದ ಗುಣಮುಖರಾದವರ ಸಂಖ್ಯೆ 7.16 ಲಕ್ಷ ಮಂದಿ.
ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೊರೋನಾ ಸೋಂಕು ಮಿತಿಮೀರಿ ಹಬ್ಬುತ್ತಿದೆ. 24 ಗಂಟೆಯಲ್ಲಿ ಅಮೆರಿಕದಲ್ಲಿ ಈ ವೈರಸ್ಗೆ 1,709 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 47 ಸಾವಿರಕ್ಕೆ ಏರಿಕೆ ಆಗಿದೆ. 8.48 ಲಕ್ಷ ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ.
ಇದನ್ನೂ ಓದಿ: ಕೊರೋನಾಗೆ ಬೆಚ್ಚಿದ ಅಮೆರಿಕ; ಒಂದೇ ದಿನ 2,100 ಜನ ಸಾವು; 45 ಸಾವಿರಕ್ಕೇರಿದ ಮೃತರ ಸಂಖ್ಯೆ
ಸ್ಪೇನ್ನಲ್ಲಿ
ಸೋಂಕಿತರ ಸಂಖ್ಯೆ 2.8 ಲಕ್ಷದ ಗಡಿ ದಾಟಿದೆ. 21,717 ಸಾವಿರ ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 1.87 ಲಕ್ಷ ಜನರಿಗೆ ಸೋಂಕು ಅಂಟಿದ್ದು, ಸಾವಿನ ಸಂಖ್ಯೆ 25 ಸಾವಿರದ ಗಡಿ ತಲುಪಿದೆ. ಈ ಮೊದಲ ವಾರಗಳಿಗೆ ಹೋಲಿಸಿದರೆ ಇಟಲಿಯಲ್ಲಿ ಕೊರೋನಾ ಕೊಂಚ ನಿಯಂತ್ರಣಕ್ಕೆ ಬಂದಿದೆ ಎನ್ನಬಹುದು.
ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್ನಲ್ಲೂ
ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಫ್ರಾನ್ಸ್ನಲ್ಲಿ 1.59 ಲಕ್ಷ ಮಂದಿಗೆ ಕೊರೋನಾ ದೃಢಪಟ್ಟಿದೆ. 21 ಸಾವಿರ ಮಂದಿ ಮೃತಪಟ್ಟಿದ್ದಾರೆ. ಜರ್ಮನಿಯಲ್ಲಿ 1.50 ಲಕ್ಷ ಜನರಿಗೆ ಕೊರೋನಾ ಸೋಂಕಿದೆ. 5315 ಜನರು ಮೃತಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ