ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಮಹಾಂತ್ ನೃತ್ಯ ಗೋಪಾಲದಾಸ್​​ಗೆ ಕೊರೋನಾ ಪಾಸಿಟಿವ್

ಮಹಾಂತ್ ನೃತ್ಯ ಗೋಪಾಲದಾಸ್ ಅವರಿಗೆ ಕೊರೋನಾ ಸೋಂಕಿನ‌ ಗುಣಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ವೇಳೆ ಮಹಾಂತ್ ನೃತ್ಯ ಗೋಪಾಲದಾಸ್ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ತಿಳಿದು ಬಂದಿದೆ

news18-kannada
Updated:August 13, 2020, 2:42 PM IST
ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಮಹಾಂತ್ ನೃತ್ಯ ಗೋಪಾಲದಾಸ್​​ಗೆ ಕೊರೋನಾ ಪಾಸಿಟಿವ್
ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಮಹಾಂತ್ ನೃತ್ಯ ಗೋಪಾಲದಾಸ್
  • Share this:
ನವದೆಹಲಿ(ಆಗಸ್ಟ್​.13): ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ್ ನೃತ್ಯ ಗೋಪಾಲದಾಸ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿರುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೃಢಪಡಿಸಿದ್ದಾರೆ.

ಮಹಾಂತ್ ನೃತ್ಯ ಗೋಪಾಲದಾಸ್ ಅವರಿಗೆ ಕೊರೋನಾ ಸೋಂಕಿನ‌ ಗುಣಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ವೇಳೆ ಮಹಾಂತ್ ನೃತ್ಯ ಗೋಪಾಲದಾಸ್ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ತಿಳಿದು ಬಂದಿದ್ದರಿಂದ ಅವರನ್ನು ಉತ್ತರ ಪ್ರದೇಶದ ಮಥುರಾದಲ್ಲಿ ಇರುವ ಮೆದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇದಾಂತ ಆಸ್ಪತ್ರೆಯಲ್ಲಿ ಮಹಾಂತ್ ನೃತ್ಯ ಗೋಪಾಲದಾಸ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ. ತ್ರೆಹನ್ ಅವರಿಗೆ ಇಂದು ದೂರವಾಣಿ ಕರೆ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸದ್ಯದ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಹಾಂತ್ ನೃತ್ಯ ಗೋಪಾಲದಾಸ್ ಅವರ ಆರೋಗ್ಯದ ಮೇಲೆ ತೀವ್ರ ನಿಗ ಇಡುವಂತೆ ಸೂಚನೆ ನೀಡಿದ್ದಾರೆ.

ಇದಲ್ಲದೆ ಮಥುರಾದ ಜಿಲ್ಲಾಧಿಕಾರಿಗೂ ದೂರವಾಣಿ ಕರೆ ಮಾಡಿ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ. ಈ ಮೂಲಕ ಮಹಾಂತ್ ನೃತ್ಯ ಗೋಪಾಲದಾಸ್ ಅವರಿಗೆ ಕೊರೋನಾ ಪಾಸಿಟಿವ್ ಇರುವುದನ್ನು ದೃಢಪಡಿಸಿದ್ದಾರೆ.

ಇದನ್ನೂ ಓದಿ : ತೆರಿಗೆ ಸುಧಾರಣೆಗೆ ಹೊಸ ಹೆಜ್ಜೆ; ‘ಪಾರದರ್ಶಕ ತೆರಿಗೆ - ಪ್ರಾಮಾಣಿಕರಿಗೆ ಗೌರವ’ ವೇದಿಕೆ ಉದ್ಘಾಟನೆ

ಮಹಾಂತ್ ನೃತ್ಯ ಗೋಪಾಲದಾಸ್ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದರು. ಅಂದು ಅವರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೇನ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಭಾಗವಹಿಸಿದ್ದರು.

ಕೊರೋನಾ ಸೋಂಕು ಹರಡುವಿಕೆ ಈಗ ಶರವೇಗ ಪಡೆದುಕೊಂಡಿದೆ. ಕೊರೋನಾ ಕಡಿಮೆ ಇದ್ದಾಗ ಲಾಕ್​ಡೌನ್​ ಮಾಡಿ ತೀವ್ರಗೊಂಡಾಗ‌ ಅನ್ ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ 24 ಲಕ್ಷದ ಗಡಿ ಸಮೀಪ ಬಂದಿದೆ.ಈಗ ಆಗಸ್ಟ್ 12ರಂದು 66,999 ಪ್ರಕರಣಗಳು ವರದಿಯಾಗಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 23,96,638ಕ್ಕೆ ಏರಿಕೆಯಾಗಿದೆ. ಇದಲ್ಲದೆ ಬುಧವಾರ 942 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 47 ಸಾವಿರದ ಗಡಿ‌ ದಾಟಿದ್ದು 47,033ಕ್ಕೆ ಏರಿಕೆಯಾಗಿದೆ.
Published by: G Hareeshkumar
First published: August 13, 2020, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading