Coronavirus Updates: ಭಾರತದಲ್ಲಿ ತಗ್ಗಿದ ಕೊರೋನಾ ಹಾವಳಿ; ನಿನ್ನೆ ಎರಡೂವರೆ ಲಕ್ಷ ಕೊರೋನಾ ಪ್ರಕರಣಗಳು ಪತ್ತೆ

Coronavirus Updates | ಗುರುವಾರ ಭಾರತದಲ್ಲಿ 2,59,591 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,60,31,991ಕ್ಕೆ ಏರಿಕೆ ಆಗಿದೆ.‌

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ನವದೆಹಲಿ, ಮೇ 21: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿದೆಯಾದರೂ ಇನ್ನೂ ಪ್ರತಿದಿನ ಸರಿ ಸುಮಾರು ಎರಡೂವರೆ ಲಕ್ಷ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಭಾರೀ ಇಳಿಮುಖ ಆಗಿಲ್ಲ.

ಗುರುವಾರ ಭಾರತದಲ್ಲಿ 2,59,591 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,60,31,991ಕ್ಕೆ ಏರಿಕೆ ಆಗಿದೆ.‌ ಆದರೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಗುರುವಾರ 4,209 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,91,331ಕ್ಕೆ ಏರಿಕೆ ಆಗಿದೆ. ಈವರೆಗೆ 2,27,12,735 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 30,27,925 ಆಕ್ಟಿವ್ ಕೇಸುಗಳಿವೆ.

ಇದನ್ನೂ ಓದಿ: Explained: Corona Vaccine: ಲಸಿಕೆ ಪಡೆಯೋಕೆ ಆನ್​ಲೈನ್​ ಮೂಲಕ ರೆಜಿಸ್ಟರ್ ಮಾಡಿಕೊಳ್ಳೋದು ಹೀಗೆ !

ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿ ಹೆಚ್ಚಾಗಿತ್ತು.

ಎರಡನೇ ಅಲೆ ಶುರುವಾದ ಮೇಲೆ ಏಪ್ರಿಲ್ 4ರಂದು 1,03,558, ಏಪ್ರಿಲ್ 5ರಂದು 96,982, ಏಪ್ರಿಲ್ ‌6ರಂದು 1,15,736, ಏಪ್ರಿಲ್ 7ರಂದು 1,26,789, ಏಪ್ರಿಲ್ 8ರಂದು 1,31,968, ಏಪ್ರಿಲ್ 9ರಂದು 1,45,384, ಏಪ್ರಿಲ್ 10ರಂದು 1,52,879, ಏಪ್ರಿಲ್ 11ರಂದು 1,68,912, ಏಪ್ರಿಲ್ 12ರಂದು 1,61,736, ಏಪ್ರಿಲ್ 13ರಂದು 1,84,372, ಏಪ್ರಿಲ್ 14ರಂದು 2,00,739, ಏಪ್ರಿಲ್ 15ರಂದು 2,17,353, ಏಪ್ರಿಲ್ 16ರಂದು 2,34,692, ಏಪ್ರಿಲ್ 17ರಂದು 2,61,500 ಏಪ್ರಿಲ್ 18ರಂದು 2,73,810, ಏಪ್ರಿಲ್ 19ರಂದು 2,59,170, ಏಪ್ರಿಲ್ 20ರಂದು 2,95,041, ಏಪ್ರಿಲ್ 21ರಂದು 3,14,835, ಏಪ್ರಿಲ್ 22ರಂದು 3,32,730, ಏಪ್ರಿಲ್ 23ರಂದು 3,46,786, ಏಪ್ರಿಲ್ 24ರಂದು 3,49,691, ಏಪ್ರಿಲ್ 25ರಂದು 3,52,991, ಏಪ್ರಿಲ್ 26ರಂದು 3,23,144, ಏಪ್ರಿಲ್ 27ರಂದು 3,60,960, ಏಪ್ರಿಲ್ 28ರಂದು 3,23,144, ಏಪ್ರಿಲ್ 29ರಂದು 3,86,452, ಏಪ್ರಿಲ್ 30ರಂದು 4,01,993, ಮೇ 1ರಂದು 3,92,488, ಮೇ 2ರಂದು 3,68,147, ಮೇ 3ರಂದು 3,57,229, ಮೇ 4ರಂದು 3,82,315, ‌ಮೇ 5ರಂದು 4,12,262 ಪ್ರಕರಣಗಳು, ಮೇ 6ರಂದು 4,14,188, ಮೇ 7ರಂದು 4,01,078, ಮೇ 8ರಂದು 4,03,738, ಮೇ 9ರಂದು 3,66,161, ಮೇ 10ರಂದು 3,29,942, ಮೇ 11ರಂದು 3,48,421, ಮೇ 12ರಂದು 3,62,727, ಮೇ 13ರಂದು 3,43,144,  ಮೇ 14ರಂದು 3,26,098, ಮೇ 15ರಂದು 3,11,170, ಮೇ 16ರಂದು 2,81,386, ಮೇ 17ರಂದು 2,63,533, ಮೇ 18ರಂದು 2,67,334 ಹಾಗೂ ಮೇ 19ರಂದು 2,76,070‌ ಪ್ರಕರಣಗಳು ಕಂಡುಬಂದಿದ್ದವು.‌ ಮೇ 20ರಂದು 2,59,591 ಪ್ರಕರಣಗಳು ಪತ್ತೆಯಾಗಿವೆ.
Published by:Sushma Chakre
First published: