HOME » NEWS » Coronavirus-latest-news » CORONAVIRUS UPDATES MAHARASHTRA IMPOSING STRICT CURFEW FROM TODAY PEOPLE SHIFTING MUMBAI TO KARNATAKA DBDEL SCT

Coronavirus Updates: ಕೊರೋನಾದಿಂದ ಮಹಾರಾಷ್ಟ್ರದಿಂದ‌ ಲಕ್ಷಾಂತರ ಜನರ ಆಗಮನ; ಕರ್ನಾಟಕಕ್ಕೂ ಕಾದಿದೆಯಾ ಗಂಡಾಂತರ?

Maharashtra Coronavirus: ಜನತಾ ಕರ್ಫ್ಯೂಗೆ ಬೆದರಿರುವ ಲಕ್ಷಾಂತರ ಜನ ಮಹಾರಾಷ್ಟ್ರ ರಾಜ್ಯ ಬಿಟ್ಟು ಅವರವರ ರಾಜ್ಯಕ್ಕೆ ಮರಳುತ್ತಿದ್ದಾರೆ.‌ ಅವರು ಕರ್ನಾಟಕಕ್ಕೂ ಬರಲಿದ್ದಾರೆ. ಅಲ್ಲಿಂದ ಬಂದವರನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಇದ್ದರೆ ರಾಜ್ಯದಲ್ಲಿ ಕೊರೋನಾ ಸೋಂಕಿನ ಕರಾಳ ರೂಪ ಇನ್ನೂ‌ ಹೆಚ್ಚಾಗುವ‌ ಸಾಧ್ಯತೆ ಇದೆ.

news18-kannada
Updated:April 14, 2021, 9:09 AM IST
Coronavirus Updates: ಕೊರೋನಾದಿಂದ ಮಹಾರಾಷ್ಟ್ರದಿಂದ‌ ಲಕ್ಷಾಂತರ ಜನರ ಆಗಮನ; ಕರ್ನಾಟಕಕ್ಕೂ ಕಾದಿದೆಯಾ ಗಂಡಾಂತರ?
ಸಾಂದರ್ಭಿಕ ಚಿತ್ರ
  • Share this:
ಮುಂಬೈ, ಏ. 14: ದೇಶದಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗಿ ಅಪ್ಪಳಿಸುತ್ತಿದ್ದು ಇದರಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಇಂದಿನಿಂದ 15 ದಿನ ಜನತಾ ಕರ್ಫ್ಯೂ ಜಾರಿ ಮಾಡುತ್ತಿದೆ. ಜನತಾ ಕರ್ಫ್ಯೂಗೆ ಬೆದರಿರುವ ಲಕ್ಷಾಂತರ ಜನ ಮಹಾರಾಷ್ಟ್ರ ರಾಜ್ಯ ಬಿಟ್ಟು ಅವರವರ ರಾಜ್ಯಕ್ಕೆ ಮರಳುತ್ತಿದ್ದಾರೆ.‌ ಅವರು ಕರ್ನಾಟಕಕ್ಕೂ ಬರಲಿದ್ದಾರೆ. ಅಲ್ಲಿಂದ ಬಂದವರನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಇದ್ದರೆ ರಾಜ್ಯದಲ್ಲಿ ಕೊರೋನಾ ಸೋಂಕಿನ ಕರಾಳ ರೂಪ ಇನ್ನೂ‌ ಹೆಚ್ಚಾಗುವ‌ ಸಾಧ್ಯತೆ ಇದೆ.

ಜನತಾ ಕರ್ಫ್ಯೂ ಎಂದರೆ ಒಂದರ್ಥದ ಲಾಕ್ಡೌನ್ ಆಗಿರುವುದರಿಂದ ಮತ್ತೆ ನಮ್ಮ ಕೆಲಸ ಹೋಗುತ್ತೆ. ತುತ್ತು ಅನ್ನಕ್ಕೂ ಪರದಾಡಬೇಕಾಗುತ್ತೆ ಎನ್ನುವುದು ಲಕ್ಷಾಂತರ ಜನರಿಗಿರುವ ಭಯ. ಅದರಲ್ಲೂ ಮಹಾರಾಷ್ಟ್ರಕ್ಕೆ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರು ಮತ್ತು ದಿನಗೂಲಿ ನೌಕರರ ಆತಂಕ. ಜೊತೆಗೆ ನಾಳೆಯಿಂದ ಪರಿಸ್ಥಿತಿ ಏನಾಗುತ್ತದೆಯೋ ಎಂಬ ಹೆದರಿಕೆಯಿಂದ ಈಗಾಗಲೇ ತವರೂರ ಕಡೆ ಹೊರಟು ನಿಂತಿದ್ದಾರೆ.‌ ಮಹಾ ನಗರಗಳಾದ‌ ಮುಂಬೈ, ಪುಣೆ, ನಾಗಪುರವೂ ಸೇರಿದಂತೆ ಮಹಾರಾಷ್ಟ್ರದ ಬೇರೆ ಬೇರೆ ಭಾಗಗಳಿಂದ ಜನ ಹೊರಟಿದ್ದಾರೆ.
ರೈಲು, ಬಸ್ಸು ಮತ್ತು ಸಿಕ್ಕ ಸಿಕ್ಕ ವಾಹನಗಳಲ್ಲಿ ಜನ ಪ್ರಯಾಣ ಮಾಡುತ್ತಿದ್ದು ಮಹಾರಾಷ್ಟ್ರದ ಎಲ್ಲಾ ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ಮತ್ತು ಬೇರೆ ರಾಜ್ಯಗಳನ್ನು ಪ್ರವೇಶಿಸಬಹುದಾದ ಗಡಿ ಭಾಗಗಳಲ್ಲಿ ಜನ ಸಾಗರವನ್ನೇ ಕಾಣಬಹುದಾಗಿದೆ. ಅವರು ಸದ್ಯ ಇರುವ ಜಾಗಗಳಲ್ಲಾಗಲಿ, ಪ್ರಯಾಣ ಮಾಡುತ್ತಿರುವ ವಾಹನಗಳಲ್ಲಾಗಲಿ ಯಾವುದೇ ರೀತಿಯ ಸ್ಯಾನಿಟೈಸ್ ವ್ಯವಸ್ಥೆ ಕಂಡುಬರುತ್ತಿಲ್ಲ. ಸಮಾಜಿಕ ಅಂತರವಂತೂ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಇದರಿಂದಾಗಿ ಅವರ ಮೂಲಕ ಬೇರೆ ಬೇರೆ ರಾಜ್ಯಗಳಿಗೂ ಕೊರೋನಾ ಸೋಂಕು ಹರಡುವ ಸಾಧ್ಯತೆಗಳು ದಟ್ಟವಾಗಿವೆ.ಇದೇ ರೀತಿ ಜನ ಅಥವಾ ವಲಸಿಗರು ಕರ್ನಾಟಕಕ್ಕೂ ಬರುತ್ತಿರುವುದರಿಂದ ಈಗ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿರಲಿದೆ. ಮಹಾರಾಷ್ಟ್ರದಿಂದ ಬಂದವರನ್ನು ಸರಿಯಾದ ರೀತಿಯಲ್ಲಿ ಕ್ವಾರಂಟೈನ್ ಮಾಡದಿದ್ದರೆ, ಪರೀಕ್ಷೆಗೆ ಒಳಪಡಿಸದಿದ್ದರೆ ಅವರಿಂದ ರಾಜ್ಯದಲ್ಲಿ ಕೊರೋನಾ ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ನಿನ್ನೆ ರಾತ್ರಿಯಿಂದಲೇ ಅಲ್ಲಿಂದ ಜನ ಹೊರಟಿದ್ದು ಇಂದು ನಾಳೆಯೊಳಗೆ ರಾಜ್ಯ ಪ್ರವೇಶ ಮಾಡಲಿದ್ದಾರೆ. ಅವರು ಬರುವ ಮುನ್ನವೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.

ಮಹಾರಾಷ್ಟ್ರ ರಾಜ್ಯಾದ್ಯಂತ ಇಂದು ರಾತ್ರಿ 8 ಗಂಟೆಯಿಂದ ಇಡೀ ರಾಜ್ಯದಲ್ಲಿ 144 ಸೆಕ್ಷನ್ ಜಾರಿಯಾಗಲಿದೆ. ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಲೋಕಲ್ ಟ್ರೈನ್, ಬಸ್ಸು ಮತ್ತಿತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಇರಲಿದೆ. ಜನರ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಅನಗತ್ಯವಾಗಿ ಮನೆಯಿಂದ ಹೊರಬರದೆ ಜತನಾ ಕರ್ಫ್ಯೂವನ್ನು ಪಾಲಿಸಬೇಕು. ಆ ಮೂಲಕ ಕೊರೋನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಉದ್ಧವ್ ಠಾಕ್ರೆ  ತಿಳಿಸಿದ್ದಾರೆ.
Published by: Sushma Chakre
First published: April 14, 2021, 9:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories