ನವದೆಹಲಿ (ಜು.7): ಲಾಕ್ಡೌನ್ ಪೂರ್ಣಗೊಂಡು ಒಂದು ತಿಂಗಳ ಮೇಲಾಗಿದೆ. ಯಾವಾಗ ಅನ್ಲಾಕ್ ಪ್ರಕ್ರಿಯೆ ಆರಂಭವಾಯಿತೋ ಅಲ್ಲಿಂದ ಕೊರೋನಾ ವೈರಸ್ ಪೀಡಿತರ ಸಂಖ್ಯೆ ಹೆಚ್ಚಲು ಆರಂಭವಾಗಿತ್ತು. ಈ ಕೊರೋನಾ ವೈರಸ್ ನಿಯಂತ್ರಣ ಅಸಾಧ್ಯ ಎಂಬಂತಾಗಿಬಿಟ್ಟಿದೆ. ಸದ್ಯ ದೇಶದ ಕೊರೊನಾ ಪೀಡಿತರ ಸಂಖ್ಯೆ ಏಳು ಲಕ್ಷ ದಾಟಿದೆ.
ಭಾರತದಲ್ಲಿ ಜುಲೈ 1ರಿಂದ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 2ರಿಂದ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜುಲೈ 3ರಿಂದ 22 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಜುಲೈ 4ರಿಂದ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಸೋಮವಾರ ಸ್ವಲ್ಪ ಇಳಿಕೆ ಕಂಡಿದ್ದು 22,252 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 7,19,665ಕ್ಕೆ ಏರಿಕೆಯಾಗಿದೆ.
ಇದಲ್ಲದೆ ಸೋಮವಾರ 467 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 20 ಸಾವಿರ ದಾಟಿದ್ದು 20,160ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 4,39,948 ಜನ ಮಾತ್ರ. ದೇಶದಲ್ಲಿ ಇನ್ನೂ 2,59,557 ಜನರಲ್ಲಿ ಕೊರೊನಾ ಸಕ್ರೀಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜೂನ್ 1ರಂದು 8,171, ಜೂನ್ 2ರಂದು 8,909, ಜೂನ್ 3ರಂದು 9,304, ಜೂನ್ 4ರಂದು 9,851, ಜೂನ್ 5ರಂದು 9,887, ಜೂನ್ 6ರಂದು 9,971, ಜೂ 7ರಂದು 9,983, ಜೂನ್ 8ರಂದು 9987, ಜೂನ್ 9ರಂದು 9,985, ಜೂನ್ 10ರಂದು 9,996, ಜೂನ್ 11ರಂದು 10,956, ಜೂನ್ 12ರಂದು 11,458, ಜೂನ್ 13ರಂದು 11,929, ಜೂನ್ 14ರಂದು 11,502, ಜೂನ್ 15ರಂದು 10,667, ಜೂನ್ 16ರಂದು 10,974, ಜೂನ್ 17ರಂದು 12,881, ಜೂನ್ 18ರಂದು 13,586, ಜೂನ್ 19ರಂದು 14,516, ಜೂನ್ 20ರಂದು 15,413, ಜೂನ್ 21ರಂದು 14,821, ಜೂನ್ 22ರಂದು 14,933, ಜೂನ್ 23ರಂದು 15,968, ಜೂನ್ 24ರಂದು 16,922, ಜೂನ್ 25ರಂದು 17,296, ಜೂನ್ 26ರಂದು 18,552, ಜೂನ್ 27ರಂದು 19,906, ಜೂನ್ 28ರಂದು 19,459, ಜೂನ್ 29ರಂದು 18,522, ಜೂನ್ 30ರಂದು 18,653, ಜುಲೈ 1ರಂದು 19,148, ಜುಲೈ 2ರಂದು 20,903, ಜುಲೈ 3 ರಂದು 22,771, ಜುಲೈ 4ರಂದು 24,850, ಜುಲೈ 5 ರಂದು 24,248 ಹಾಗೂ ಜುಲೈ 6ರಂದು 22,252 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ