Coronavirus India: ಭಾರತದಲ್ಲಿ ಒಂದೇ ದಿನ 70 ಸಾವಿರ ಕೊರೋನಾ ಕೇಸ್; 28 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಇದೇ ಮೊದಲ ಬಾರಿಗೆ ಭಾರತದಲ್ಲಿ ದಿನವೊಂದರಲ್ಲಿ ಸುಮಾರು 70 ಸಾವಿರ ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಕೊರೋನಾದಿಂದ ಬುಧವಾರ 977 ಮಂದಿ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 53,866ಕ್ಕೆ ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಕೊರೊನಾ ಸೋಂಕು ಹರಡುವಿಕೆ ಈಗ ಶರವೇಗ ಪಡೆದುಕೊಂಡಿದೆ. ಕೊರೊನಾ ಕಡಿಮೆ ಇದ್ದಾಗ ಲಾಕ್​ಡೌನ್ ಮಾಡಿ ತೀವ್ರಗೊಂಡಾಗ‌ ಅನ್ ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೋರೊನಾ ಸೋಂಕು ಪೀಡಿತರ ಸಂಖ್ಯೆ 28 ಲಕ್ಷ‌ ದಾಟಿದೆ. ಅಲ್ಲದೆ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ ಸುಮಾರು 70 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಜುಲೈ 1ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 20ರಿಂದ 37 ಸಾವಿರಕ್ಕೂ ಪ್ರಕರಣಗಳು ಗೋಚರಿಸಿದ್ದವು.

ಬಳಿಕ ಆಗಸ್ಟ್ 1ರಂದು 54,736 ಪ್ರಕರಣಗಳು, ಆಗಸ್ಟ್ 2ರಂದು 52,972 ಪ್ರಕರಣಗಳು, ಆಗಸ್ಟ್ 3ರಂದು 52,050 ಪ್ರಕರಣಗಳು, ಆಗಸ್ಟ್ 4ರಂದು 52,509 ಪ್ರಕರಣಗಳು ಮತ್ತು ಆಗಸ್ಟ್ 5ರಂದು 56,282 ಕಾಣಿಸಿಕೊಂಡಿದ್ದವು.‌ ನಂತರ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿ ಆಗಸ್ಟ್ 6ರಂದು 62,538, ಆಗಸ್ಟ್ 7ರಂದು 61,537 ಪ್ರಕರಣಗಳು, ಆಗಸ್ಟ್ 8ರಂದು 64,399 ಪ್ರಕರಣಗಳು, ಆಗಸ್ಟ್ 9ರಂದು 62,064 ಪ್ರಕರಣಗಳು, ಆಗಸ್ಟ್ 10ರಂದು 53,601 ಕೊರೊನಾ ಪ್ರಕರಣಗಳು ಆಗಸ್ಟ್ 11ರಂದು 60,963 ಪ್ರಕರಣಗಳು, ಆಗಸ್ಟ್ 12ರಂದು 66,999 ಪ್ರಕರಣಗಳು, ಆಗಸ್ಟ್ 13ರಂದು 64,553 ಪ್ರಕರಣಗಳು, ಆಗಸ್ಟ್ 14ರಂದು 65,002 ಪ್ರಕರಣಗಳು, ಆಗಸ್ಟ್ 15ರಂದು 63,489 ಪ್ರಕರಣಗಳು, ಆಗಸ್ಟ್ 16ರಂದು 57,982 ಪ್ರಕರಣಗಳು, ಆಗಸ್ಟ್ 17ರಂದು 55,079 ಪ್ರಕರಣಗಳು ಹಾಗೂ ಆಗಸ್ಟ್‌ 18ರಂದು 64,531 ಪ್ರಕರಣಗಳು ವರದಿಯಾಗಿದ್ದವು. ಆಗಸ್ಟ್‌ 19ರಂದು 69,652 ಪ್ರಕರಣಗಳು ಪತ್ತೆಯಾಗಿದ್ದು ದೇಶದ ಕೊರೊನಾ ಪೀಡಿತರ ಸಂಖ್ಯೆ 28,36,926ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: Karnataka Dam Water Level: ಕರಾವಳಿಯಲ್ಲಿ ಮಳೆ ಹೆಚ್ಚಳ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಕೊರೋನಾದಿಂದ ಬುಧವಾರ 977 ಮಂದಿ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 53 ಸಾವಿರದ ಗಡಿ‌ ದಾಟಿದ್ದು 53,866ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 20,96,665 ಜನ ಮಾತ್ರ. ದೇಶದಲ್ಲಿ ಇನ್ನೂ 6,86,395 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜುಲೈ 1ರಂದು 19,148, ಜುಲೈ 2ರಂದು 20,903, ಜುಲೈ 3 ರಂದು 22,771, ಜುಲೈ 4ರಂದು 24,850, ಜುಲೈ 5 ರಂದು 24,248, ಜುಲೈ 6ರಂದು 22,252, ಜುಲೈ 7ರಂದು 22,752, ಜುಲೈ 8ರಂದು 24,879, ಜುಲೈ 9ರಂದು 26,506, ಜುಲೈ 10ರಂದು 27,114, ಜುಲೈ 11ರಂದು 28,637, ಜುಲೈ 12ರಂದು‌ 28,701, ಜುಲೈ 13ರಂದು 28,498, ಜುಲೈ 14ರಂದು 29,429, ಜುಲೈ 15ರಂದು 32,695, ಜುಲೈ 16ರಂದು‌ 34,956, ಜುಲೈ 17ರಂದು 34,884, ಜುಲೈ 18ರಂದು 38,902, ಜುಲೈ 19ರಂದು 40,425, ಜುಲೈ 20ರಂದು 37,148, ಜುಲೈ 21ರಂದು 37,724, ಜುಲೈ 22ರಂದು 45,720, ಜುಲೈ 23ರಂದು 49,310, ಜುಲೈ 24ರಂದು 48,916,‌ ಜುಲೈ 25ರಂದು 48,661, ಜುಲೈ 26ರಂದು 49,931, ಜುಲೈ 27ರಂದು 47,704, ಜುಲೈ 28ರಂದು 48,512 ಹಾಗೂ ಜುಲೈ 29ರಂದು 52,123, ಜುಲೈ 30ರಂದು 55,079, ಜುಲೈ‌ 31ರಂದು 57,117, ಆಗಸ್ಟ್ 1ರಂದು 54,736, ಆಗಸ್ಟ್ 2ರಂದು 52,972, ಆಗಸ್ಟ್ 3ರಂದು 52,050, ಆಗಸ್ಟ್ 4ರಂದು 52,509, ಆಗಸ್ಟ್ 5ರಂದು 56,282, ಆಗಸ್ಟ್ 6ರಂದು 62,538, ಆಗಸ್ಟ್ 7ರಂದು 61,537, ಆಗಸ್ಟ್ 8ರಂದು 64,399, ಆಗಸ್ಟ್ 9ರಂದು 62,064, ಆಗಸ್ಟ್ 10ರಂದು  53,601, ಆಗಸ್ಟ್ 11ರಂದು 60,963, ಆಗಸ್ಟ್ 12ರಂದು 66,999, ಆಗಸ್ಟ್ 13ರಂದು 64,553, ಆಗಸ್ಟ್ 14ರಂದು 65,002, ಆಗಸ್ಟ್ 15ರಂದು 63,489, ಆಗಸ್ಟ್ 16ರಂದು 57,982, ಆಗಸ್ಟ್ 17ರಂದು 55,079, ಆಗಸ್ಟ್ 18ರಂದು 64,531 ಹಾಗೂ ಆಗಸ್ಟ್ 19ರಂದು 69,652 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by:Sushma Chakre
First published: