Coronavirus Updates: ದೇಶದಲ್ಲಿ ಮುಂದುವರಿದ ಕೊರೋನಾ ಆರ್ಭಟ; ಒಂದೇ ದಿನ 93,249 ಹೊಸ ಕೇಸ್​ಗಳು ಪತ್ತೆ 

Coronavirus India: ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಶನಿವಾರ 93,249 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 60,048 ಜನ ಮಾತ್ರ.

ಕೊರೋನಾ ಲಸಿಕೆ.

ಕೊರೋನಾ ಲಸಿಕೆ.

  • Share this:
ನವದೆಹಲಿ (ಏ.‌ 4): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಶನಿವಾರ 93,249 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಶನಿವಾರ 93,249 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 60,048 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,24,85,509ಕ್ಕೆ ಏರಿಕೆ ಆಗಿದೆ.‌ ಶನಿವಾರ ಒಂದೇ ದಿನ ಕೊರೋನಾಗೆ 513 ಜನರು ಸಾವಿಗೀಡಾಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 1,64,623ಕ್ಕೆ ಏರಿಕೆ ಆಗಿದೆ.

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಗಳನ್ನು ಹಾಕುವ ಕೆಲಸವನ್ನು ಕೂಡ ಹಂತ ಹಂತವಾಗಿ ತೀವ್ರಗೊಳಿಸಲಾಗುತ್ತದೆ. ಈವರೆಗೆ ದೇಶಾದ್ಯಂತ ಒಟ್ಟು 7,59,79,651 ಜನರಿಗೆ ಲಸಿಕೆ ಹಾಕಲಾಗಿದೆ. ಏಪ್ರಿಲ್ 1ರಿಂದ 45 ವರ್ಷದ ಮೇಲಿನ ಎಲ್ಲರಿಗೂ ಕೊರೋನಾ ಲಸಿಕೆ ಹಾಕಲಾಗುತ್ತಿದೆ.

ದೇಶದ ಒಟ್ಟು ಕೊರೋನಾ ಸೋಂಕು ಪೀಡಿತರ ಪೈಕಿ ಶೇಕಡಾ 81.42ರಷ್ಟು ಕೇವಲ ಎಂಟು ರಾಜ್ಯಗಳಲ್ಲಿ ಕಂಡುಬರುತ್ತಿದೆ. ಅವು ಯಾವ್ಯಾವು ಎಂದರೆ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್ಗಢ ಮತ್ತು ಪಂಜಾಬ್. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು.

ಇದನ್ನೂ ಓದಿ: Belagavi Bypolls 2021: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬೆಳಗಾವಿ ಉಪ ಚುನಾವಣಾ ಕಣದಲ್ಲಿ ಠುಸ್ ಪಟಾಕಿ ಆಗಿದ್ದೇಕೆ?

ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಮಾರಕ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ ಮಾರ್ಚ್ 28ರಿಂದ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ವಿಧಿಸಿದೆ. ರಾತ್ರಿ ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿಗಳು ಏಪ್ರಿಲ್ 15ರ ಮಧ್ಯರಾತ್ರಿವರೆಗೆ ಜಾರಿಯಲ್ಲಿರಲಿವೆ. ಒಂದು ವೇಳೆ ಸರ್ಕಾರದ ಈ ನಿಯಮಗಳನ್ನು ಯಾರಾದರೂ ಮೀರಿದರೆ ಸಾರ್ವಜನಿಕರಿಗೆ ದಂಡ ವಿಧಿಸಲಾಗುವುದು ಎಂದು ಕೂಡ ಎಚ್ಚರಿಕೆ ನೀಡಲಾಗಿದೆ.

ಮಹಾರಾಷ್ಟ್ರ ಬಿಟ್ಟರೆ ಕೊರೋನಾ ವೇಗವಾಗಿ ಹರಡುತ್ತಿರುವುದು ಕರ್ನಾಟಕದಲ್ಲಿ. ರಾಜಧಾನಿ ಬೆಂಗಳೂರಿನಲ್ಲಂತೂ ಕೊರೋನಾ ಆರ್ಭಟ ಜೋರಾಗಿದ್ದು ಪ್ರತಿ ದಿನ‌ ದಾಖಲಾಗುವ ಪ್ರಕರಣಗಳ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಂದಿನ 15 ದಿನ ರಾಜ್ಯದಲ್ಲಿ ಯಾವುದೇ ರೀತಿಯ ಸತ್ಯಾಗ್ರಹ ನಡೆಸಲು ಅನುಮತಿ ನೀಡಬಾರದು ಎಂದು ನಿರ್ಧರಿಸಲಾಗಿದೆ.

ಗುಜರಾತಿನಲ್ಲಿ ಕೂಡ ಕೊರೋನಾ ತೀವ್ರವಾಗಿ ಹೆಚ್ಚಾಗುತ್ತಿದ್ದು ಅಲ್ಲಿನ  ಅಹಮದಾಬಾದ್, ಸೂರತ್, ಬರೋಡಾ ಮತ್ತು ರಾಜಕೋಟ್ ಗಳಲ್ಲಿ ವಿಧಿಸಿದ್ದ ರಾತ್ರಿ‌ ಕರ್ಫ್ಯೂ‌ ಅನ್ನು ಏಪ್ರಿಲ್ 15ರವರೆಗೂ ಮುಂದುವರೆಸಲು ನಿರ್ಧರಿಸಲಾಗಿದೆ‌. ಬಾಂಗ್ಲಾದೇಶದಲ್ಲಿ ವಾರದ ಮಟ್ಟಿಗೆ ಲಾಕ್ಡೌನ್ ಅನ್ನು ಕೂಡ ಘೋಷಣೆ ಮಾಡಲಾಗಿದೆ.
Published by:Sushma Chakre
First published: