Coronavirus Updates: ದೇಶದಲ್ಲಿ ಕೊರೋನಾ ಮಹಾಸ್ಫೋಟ : ನಿನ್ನೆ ಒಂದೇ ದಿನ 38,902 ಹೊಸ ಪ್ರಕರಣಗಳು ಪತ್ತೆ

ಶನಿವಾರ 543 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 26 ಸಾವಿರದ ಗಡಿ‌ ದಾಟಿದ್ದು 26,816ಕ್ಕೆ ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ನವದೆಹಲಿ(ಜುಲೈ.19): ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿದ್ದರೂ ಲಾಕ್​​ಡೌನ್​​ ನಿಯಮಗಳನ್ನು ಸಡಿಲಿಸಿ ಅನ್ ಲಾಕ್ 1 ಮತ್ತು 2 ಅನ್ನು ಜಾರಿ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಲೇ ಇದೆ. ಪರಿಣಾಮವಾಗಿ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 10 ಲಕ್ಷದ  ಗಡಿ ದಾಟಿದೆ. ಅದೂ ಅಲ್ಲದೆ ಈಗ ಪ್ರತಿನಿತ್ಯ ಸುಮಾರು 39 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗತೊಡಗಿವೆ.

ಭಾರತದಲ್ಲಿ ಜುಲೈ 1 ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 2ರಂದು 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜುಲೈ 3 ರಂದು 22  ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 4 ರಿಂದ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 9ರಂದು 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 11 ರಿಂದ 28 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 14 ರಂದು 29 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 15 ರಂದು 32 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 16 ರಿಂದ 34 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು.

ಜುಲೈ 17ರಂದು ಕೂಡ 34 ಸಾವಿರಕ್ಕೂ ಹೆಚ್ಚು ಪ್ರಕರಣಗಳೇ ಪತ್ತೆಯಾಗಿದ್ದವು. ಆದರೆ ಒಂದೇ ದಿನದ ಅಂತರದಲ್ಲಿ ಸುಮಾರು 5 ಸಾವಿರ ಪ್ರಕರಣಗಳು ಹೆಚ್ಚಾಗಿವೆ. ಜುಲೈ 18ರಂದು 38,902 ಪ್ರಕರಣಗಳು ಪತ್ತೆಯಾಗಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 10,77,618ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಶನಿವಾರ 543 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 26 ಸಾವಿರದ ಗಡಿ‌ ದಾಟಿದ್ದು 26,816ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 6,77,423 ಜನ ಮಾತ್ರ. ದೇಶದಲ್ಲಿ ಇನ್ನೂ 3,73,379 ಜನರಲ್ಲಿ ಕೊರೋನಾ ಸಕ್ರೀಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ : ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲ : ಸಿಎಂ ಯಡಿಯೂರಪ್ಪ ಮೇಲೆ ಹೈಕಮಾಂಡ್ ಗರಂ

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜೂನ್ 11ರಂದು 10,956, ಜೂನ್ 12 ರಂದು 11,458, ಜೂನ್ 13ರಂದು 11,929, ಜೂನ್ 14ರಂದು 11,502, ಜೂನ್ 15ರಂದು 10,667, ಜೂನ್ 16ರಂದು 10,974, ಜೂನ್ 17 ರಂದು 12,881, ಜೂನ್ 18ರಂದು 13,586, ಜೂನ್ 19ರಂದು 14,516, ಜೂನ್ 20 ರಂದು 15,413, ಜೂನ್ 21 ರಂದು 14,821, ಜೂನ್ 22 ರಂದು 14,933, ಜೂನ್ 23 ರಂದು 15,968, ಜೂನ್ 24 ರಂದು 16,922, ಜೂನ್ 25 ರಂದು 17,296, ಜೂನ್ 26 ರಂದು 18,552, ಜೂನ್ 27ರಂದು 19,906, ಜೂನ್ 28 ರಂದು 19,459, ಜೂನ್ 29 ರಂದು 18,522, ಜೂನ್ 30 ರಂದು 18,653, ಜುಲೈ 1 ರಂದು 19,148.

ಜುಲೈ 2 ರಂದು 20,903, ಜುಲೈ 3 ರಂದು 22,771, ಜುಲೈ 4 ರಂದು 24,850, ಜುಲೈ 5 ರಂದು 24,248, ಜುಲೈ 6 ರಂದು 22,252, ಜುಲೈ 7 ರಂದು 22,752, ಜುಲೈ 8 ರಂದು 24,879, ಜುಲೈ 9 ರಂದು 26,506, ಜುಲೈ 10ರಂದು 27,114, ಜುಲೈ 11 ರಂದು 28,637, ಜುಲೈ 12 ರಂದು‌ 28,701, ಜುಲೈ 13 ರಂದು 28,498, ಜುಲೈ 14 ರಂದು 29,429, ಜುಲೈ 15 ರಂದು 32,695, ಜುಲೈ 16 ರಂದು‌ 34,956, ಜುಲೈ 17 ರಂದು 34,884 ಹಾಗೂ ಜುಲೈ 18 ರಂದು 38,902 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by:G Hareeshkumar
First published: