HOME » NEWS » Coronavirus-latest-news » CORONAVIRUS UPDATES DELHI CM KEJRIWAL ANNOUNCES WEEKEND CURFEW SPAS GYMS MALLS SHUT NO DINE IN AT RESTAURANTS LG

Coronavirus Updates: ದೆಹಲಿಯಲ್ಲಿ ನಾಳೆ ರಾತ್ರಿಯಿಂದ ವೀಕೆಂಡ್​ ಕರ್ಫ್ಯೂ ಜಾರಿ; ಮಾಲ್, ಜಿಮ್ ಬಂದ್

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ವೇಳೆ ಮಾಲ್​, ಜಿಮ್, ಥಿಯೇಟರ್​ ಹಾಗೂ ಸ್ಪಾಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿರುತ್ತದೆ. ಆದರೆ ಮಾರ್ಕೆಟ್​ಗಳನ್ನು ಮುಚ್ಚುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅಗತ್ಯ ಸೇವೆಗಳಿಗೆ ಯಾವುದೇ ನಿಷೇಧ ಹೇರದೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.

news18-kannada
Updated:April 15, 2021, 2:15 PM IST
Coronavirus Updates: ದೆಹಲಿಯಲ್ಲಿ ನಾಳೆ ರಾತ್ರಿಯಿಂದ ವೀಕೆಂಡ್​ ಕರ್ಫ್ಯೂ ಜಾರಿ; ಮಾಲ್, ಜಿಮ್ ಬಂದ್
ಅರವಿಂದ್ ಕೇಜ್ರಿವಾಲ್.
  • Share this:
ನವದೆಹಲಿ(ಏ.15): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊರೋನಾ ಸೋಂಕನ್ನು ನಿಯಂತ್ರಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​​ ಅವರು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮಹಾಮಾರಿ ಕೊರೋನಾವನ್ನು ಕಟ್ಟಿಹಾಕಲು ರಾಜ್ಯಾದ್ಯಂತ ವೀಕೆಂಡ್​ ಕರ್ಫ್ಯೂವನ್ನು ಜಾರಿ ಮಾಡಿದ್ದಾರೆ. ನಾಳೆಯಿಂದ ಅಂದರೆ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಈ ವೀಕೆಂಡ್​ ಕರ್ಫ್ಯೂ ಜಾರಿಯಲ್ಲಿರಲಿದೆ.

ಇನ್ನು, ದೆಹಲಿಯಲ್ಲಿ ನಾಳೆ ರಾತ್ರಿಯಿಂದ ವೀಕೆಂಡ್​ ಕರ್ಫ್ಯೂ ಜಾರಿಯಾಗುತ್ತಿರುವ ಹಿನ್ನೆಲೆ, ಸ್ಪಾಗಳು, ಸಭಾಂಗಣಗಳು, ಮಾಲ್​ಗಳು ಹಾಗೂ ಜಿಮ್​ಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ವೇಳೆ ಮಾಲ್​, ಜಿಮ್, ಥಿಯೇಟರ್​ ಹಾಗೂ ಸ್ಪಾಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿರುತ್ತದೆ. ಆದರೆ ಮಾರ್ಕೆಟ್​ಗಳನ್ನು ಮುಚ್ಚುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅಗತ್ಯ ಸೇವೆಗಳಿಗೆ ಯಾವುದೇ ನಿಷೇಧ ಹೇರದೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತೆರೆಗೆ ಬರಲಿದೆ ZOMBIE ಸಿನಿಮಾ..!

ಇನ್ನು, ಈ ವೀಕೆಂಡ್​ ಕರ್ಫ್ಯೂ ವೇಳೆ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಪಾಸ್​ ಹೊಂದಿರಲೇಬೇಕು. ಆ ಪಾಸ್​ಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಇದರ ಜೊತೆಗೆ ರೆಸ್ಟೋರೆಂಟ್​​ಗಳಲ್ಲಿ ಕೂತು ತಿನ್ನಲು ಅವಕಾಶವಿರುವುದಿಲ್ಲ. ಪಾರ್ಸಲ್​​ಗೆ ಮಾತ್ರ ಅವಕಾಶವಿರುತ್ತದೆ ಎಂದರು.

ಇದರ ಜೊತೆಗೆ, ಸಿನಿಮಾ ಧಿಯೇಟರ್​​ಗಳಲ್ಲಿ ಶೇ.30ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ಇರುತ್ತದೆ. ಹೋಮ್ ಡೆಲಿವರಿ ಫುಡ್​ಗೆ ಅವಕಾಶ ಇರುತ್ತದೆ. ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ ನಿಯಮಗಳು ಅನ್ವಯವಾಗುತ್ತವೆ. ಎಲ್ಲಾ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಸಮಾರಂಭಗಳನ್ನು ಈ ವೀಕೆಂಡ್ ಕರ್ಫ್ಯೂನಲ್ಲಿ ನಿಷೇಧಿಸಲಾಗಿದೆ.

ಮದುವೆ ಸಮಾರಂಭಗಳಿಗೆ ಕೇವಲ 50 ಮಂದಿಗಷ್ಟೇ ಅವಕಾಶವಿರುತ್ತದೆ. ಜೊತೆಗ ಅಂತ್ಯಕ್ರಿಯೆಯಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಸಿಎಂ ಅರವಿಂದ್ ಕೇಜ್ರಿವಾಲ್​  ಹೇಳಿದ್ದಾರೆ.

ದೆಹಲಿಯಲ್ಲಿ ಕೊರೋನಾ ತನ್ನ ಆರ್ಭಟವನ್ನು ಮುಂದುವರೆಸಿದೆ. ಬುಧವಾರ ಒಂದೇ ದಿನ ದೆಹಲಿಯಲ್ಲಿ 17,282 ಕೊರೋನಾ ಕೇಸ್​​ಗಳು ಪತ್ತೆಯಾಗಿವೆ. 100 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಕುರಿತಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಲೆ.ಗವರ್ನರ್​ ಅನಿಲ್ ಜೈಜಲ್​ ಜೊತೆ ಸಭೆ ನಡೆಸಿದ್ದಾರೆ.
Published by: Latha CG
First published: April 15, 2021, 2:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories