HOME » NEWS » Coronavirus-latest-news » CORONAVIRUS UPDATES COVID 19 ANOTHER VACCINATION MAY DELAY INDIA ADMINISTRATED 7 CRORE COVID 19 VACCINE DOSES SCT DBDEL

Coronavirus Updates: ಭಾರತಕ್ಕೆ ಮತ್ತೊಂದು ಕೊರೋನಾ ಲಸಿಕೆ ಸಿಗಲು ವಿಳಂಬ ಸಾಧ್ಯತೆ

Coronavirus India: ಸ್ಪುಟ್ನಿಕ್ ಲಸಿಕಾ ಸಂಸ್ಥೆಯ ಮನವಿ ಆಧರಿಸಿ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ನಡೆಸಿದ ಸಭೆಯ ಎದುರು ಸಂಸ್ಥೆಯು ಮೂರನೇ ಹಂತದಲ್ಲಿ ನಡೆಸಿದ ಪ್ರಯೋಗದ ವರದಿ ಸಲ್ಲಿಕೆ ಮಾಡಿತ್ತು. ಲಸಿಕೆ ಪಡೆದವರ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಬಗ್ಗೆ ಡೇಟಾ ಸಲ್ಲಿಕೆ ಮಾಡಿತ್ತು.

news18-kannada
Updated:April 3, 2021, 8:44 AM IST
Coronavirus Updates: ಭಾರತಕ್ಕೆ ಮತ್ತೊಂದು ಕೊರೋನಾ ಲಸಿಕೆ ಸಿಗಲು ವಿಳಂಬ ಸಾಧ್ಯತೆ
ಕೋವಿಶೀಲ್ಡ್​- ಕೋವ್ಯಾಕ್ಸಿನ್ ಲಸಿಕೆ
  • Share this:
ನವದೆಹಲಿ, (ಏ. 3): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಕಳೆದ ಗುರುವಾರ 81,466 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದಲ್ಲದೆ ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡುವ ಅಭಿಯಾನವನ್ನೂ ಕೈಗೆತ್ತಿಕೊಳ್ಳಲಾಗಿದೆ. ಕೆಲ ರಾಜ್ಯಗಳು ಇನ್ನೂ ಹೆಚ್ಚಿನ‌ ಕೊರೋನಾ ಲಸಿಕೆ ಕೊಡಿ ಎಂದು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ದೇಶಕ್ಕೆ ಮತ್ತೊಂದು ಕೊರೋನಾ ಲಸಿಕೆ ಅಗತ್ಯ ಇದೆ ಎಂದು ಹೇಳಲಾಗುತ್ತಿತ್ತು.‌ ಆದರೆ, ಈಗ ಭಾರತಕ್ಕೆ ಮತ್ತೊಂದು ಕೊರೊನಾ ಲಸಿಕೆ ಸಿಗುವುದು ತಡವಾಗುವ ಸಾಧ್ಯತೆ ಕಂಡು ಬರುತ್ತಿದೆ.

ರಷ್ಯಾದಲ್ಲಿ ಸಿದ್ದವಾಗಿರುವ ಸ್ಪುಟ್ನಿಕ್ ಸಂಸ್ಥೆಯ ಲಸಿಕೆಗಳನ್ನು ಭಾರತದಲ್ಲಿ ಪ್ರಯೋಗ ಮಾಡಲಾಗಿತ್ತು. ಹೈದರಾಬಾದ್ ನಲ್ಲಿರುವ ಡಾ. ರೆಡ್ಡಿಸ್ ಲ್ಯಾಬ್ಸ್ ನಿಂದ ಇದರ ಪ್ರಯೋಗ ನಡೆದಿದ್ದು, ಸ್ಪುಟ್ನಿಕ್ ಸಂಸ್ಥೆಯು ಈಗ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಪೆಷಲ್ ಎಕ್ಸಫರ್ಟ್ ಕಮಿಟಿ (SEC) ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) ಮುಂದೆ ಮನವಿ ಮಾಡಿತ್ತು.

ಇದನ್ನೂ ಓದಿ: ಇಂದು ಕೂಡ ಸಿಡಿ ಸಂತ್ರಸ್ತೆಯ ವಿಚಾರಣೆ; ಕ್ವಾರಂಟೈನ್ ನೆಪದಲ್ಲಿ ರಮೇಶ್ ಜಾರಕಿಹೊಳಿ ಹಾಜರಾಗೋದು ಅನುಮಾನ

ಸ್ಪುಟ್ನಿಕ್ ಲಸಿಕಾ ಸಂಸ್ಥೆಯ ಮನವಿ ಆಧರಿಸಿ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ನಡೆಸಿದ ಸಭೆಯ ಎದುರು ಸಂಸ್ಥೆಯು ಮೂರನೇ ಹಂತದಲ್ಲಿ ನಡೆಸಿದ ಪ್ರಯೋಗದ ವರದಿ ಸಲ್ಲಿಕೆ ಮಾಡಿತ್ತು. ಲಸಿಕೆ ಪಡೆದವರ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಬಗ್ಗೆ ಡೇಟಾ ಸಲ್ಲಿಕೆ ಮಾಡಿತ್ತು. ಈಗ ತಿಳಿದುಬರುತ್ತಿರುವ ಮಾಹಿತಿಗಳ ಪ್ರಕಾರ ಸ್ಪುಟ್ನಿಕ್ ಲಸಿಕಾ ಸಂಸ್ಥೆ ಸಲ್ಲಿಸಿರುವ ಡೆಟಾಗಳ ಬಗ್ಗೆ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅತೃಪ್ತಿ ವ್ಯಕ್ತಪಡಿಸಿವೆ ಎನ್ನಲಾಗಿದೆ.

ಸ್ಪುಟಿಕ್ ಲಸಿಕಾ ಸಂಸ್ಥೆಯಿಂದ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಇನ್ನೂ ಹೆಚ್ಚಿನ ಡೆಟಾ ಕೇಳಿದ್ದು ಅವುಗಳ ಸಲ್ಲಿಕೆಯಾದ ಬಗ್ಗೆ ಪರಿಶೀಲನೆ ನಡೆಸಿ ಸ್ಪುಟ್ನಿಕ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬೇಕೋ ಬೇಡವೋ ಎಂಬ ಅಂತಿಮ ತಿರ್ಮಾನ ಕೈಗೊಳ್ಳಲಾಗುತ್ತದೆ.

ಸ್ಪುಟಿಕ್ ಲಸಿಕಾ ತಯಾರಿಕೆ ಸಂಸ್ಥೆ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಕೇಳಿರುವ ಹೆಚ್ಚಿನ‌ ಡೆಟಾ ಸಲ್ಲಿಸಲು ಇನ್ನು ಎಷ್ಟೊ ದಿನಗಳ ಸಮಯಾವಕಾಶ ಪಡೆಯುತ್ತದೆಯೋ? ಜೊತೆಗೆ ಹೆಚ್ಚಿನ ಮಾಹಿತಿಗಳು ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ಗೆ ಸಮಾಧಾನ ತಂದು ಲಸಿಕೆಗಳ ಬಳಕೆಗೆ ಅನುಮತಿ ಸಿಗುತ್ತದೆಯೋ ಎಂಬುದನ್ನು ಕಾದುನೋಡಬೇಕು. ಅಲ್ಲಿಯವರೆಗೆ ದೇಶದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಬಳಕೆಯಷ್ಟೇ ಇರುತ್ತದೆ.
Published by: Sushma Chakre
First published: April 3, 2021, 8:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories