HOME » NEWS » Coronavirus-latest-news » CORONAVIRUS UPDATES BELOW 10 YEAR OLD CHILDREN HAVE STRONGER ANTIBODY RESPONSE TO COVID 19 SAYS STUDY SCT STG

ಕೊರೊನಾ ನಿಯಂತ್ರಿಸುವ ಪ್ರತಿಕಾಯಗಳು ವಯಸ್ಕರಿಗಿಂತ 10 ವರ್ಷದೊಳಗಿನವರಲ್ಲಿ ಹೆಚ್ಚು; ಸಂಶೋಧನೆಯಲ್ಲಿ ಬಯಲು

ಇಮ್ಯೂನೋಗ್ಲೋಬಿನ್ ಪ್ರತಿಕಾಯಗಳು ಒಂದರಿಂದ 10 ವರ್ಷದೊಳಗಿನ ಮಕ್ಕಳಲ್ಲಿ 11 ರಿಂದ 18 ವರ್ಷದವರಿಗಿಂತ ದುಪ್ಪಟ್ಟು ಇರುತ್ತದೆ.

news18-kannada
Updated:March 24, 2021, 12:59 PM IST
ಕೊರೊನಾ ನಿಯಂತ್ರಿಸುವ ಪ್ರತಿಕಾಯಗಳು ವಯಸ್ಕರಿಗಿಂತ 10 ವರ್ಷದೊಳಗಿನವರಲ್ಲಿ ಹೆಚ್ಚು; ಸಂಶೋಧನೆಯಲ್ಲಿ ಬಯಲು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಮಾ. 24): ಕೊರೊನಾ ಮಹಾಮಾರಿ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಇದು ಜನರ ಬದುಕನ್ನು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಹೈರಾಣಗೊಳಿಸಿದೆ. 2020ರಲ್ಲಂತೂ ಎಷ್ಟೋ ಮಂದಿಗೆ ತುತ್ತು ಅನ್ನಕ್ಕೂ ಸಂಕಷ್ಟ ತಂದ ಕಾಲ ಎಂದು ಹೇಳಿದರೆ ತಪ್ಪಾಗಲಾರದು. ಇಷ್ಟೊಂದು ಸಂಕಷ್ಟದ ನಡುವೆಯೂ ಇನ್ನೇನು ದೇಶ ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲೇ ಕೊರೊನಾ ಎರಡನೇ ಅಲೆ ಮತ್ತೆ ಒಕ್ಕರಿಸಿ ಜನರನ್ನು ಆತಂಕಕ್ಕೆ ದೂಡಿದೆ.

ಈ ಕೊರೊನಾ ಯಾಕೆ ಬರುತ್ತದೆ? ಕೊರೊನಾ ಬಂದರೆ ಏನಾಗುತ್ತದೆ? ಯಾವ ವಯಸ್ಸಿನವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ? ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸಿದ್ದವು. ನಂತರ ಕಾಲಕ್ರಮೇಣ ಯಾವ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೋ ಅಂತಹವರಿಗೆ ಕೊರೋನಾ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಚಿಕ್ಕಮಕ್ಕಳು, ಹಿರಿಯ ನಾಗರೀಕರು ಎಚ್ಚರದಿಂದಿರಿ ಎಂಬ ಎಚ್ಚರಿಕೆಯು ಸಹ ಸರ್ಕಾರದಿಂದ ಹೊರಬಿತ್ತು. ಕೊರೊನಾ ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚರಿಕೆ ಕ್ರಮಗಳನ್ನು ಸಹ ಸರ್ಕಾರ ತಿಳಿಸಿತು.

ಆದರೆ ಕೊರೊನಾ ನಿಯಂತ್ರಿಸುವ ಪ್ರತಿಕಾಯಗಳು ಅಥವಾ ಆ್ಯಂಟಿಬಾಡಿಗಳು ವಯಸ್ಕರಿಗಿಂತ ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ಇದ್ದು, ಇವು ಕೊರೋನಾ ಸೋಂಕಿಗೆ ತಡೆಯೊಡ್ಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಇದನ್ನೂ ಓದಿ: Coronavirus Vaccine: ನಿಮಗೆ 45 ವರ್ಷ ದಾಟಿದೆಯಾ?; ಹಾಗಿದ್ದರೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ!

ಜಮ ನೆಟ್‌ವರ್ಕ್ ಓಪನ್ ಅವರು ಹೇಳುವಂತೆ ಕೊರೊನಾ ವೈರಸ್‌ಗೆ ಪ್ರತಿರೋಧವೊಡ್ಡುವ ಪ್ರತಿಕಾಯಗಳು ವಯಸ್ಕರಿಗಿಂತ ಸಣ್ಣ ಮಕ್ಕಳಲ್ಲಿ ಹೆಚ್ಚು ಚಟುವಟಿಕೆಯಿಂದ ಕೂಡಿರುವ ಕಾರಣ ಕೋವಿಡ್ - 19 ವೈರಸ್ ವಿರುದ್ಧ ಸುಲಭವಾಗಿ ಹೋರಾಡಲು ಸಾಧ್ಯವಾಗುತ್ತದೆ.

ಅಮೆರಿಕದ ನ್ಯೂಯಾರ್ಕ್‌ನ ವೇಯ್ಲ್ ಕಾರ್ನಲ್ ಮೆಡಿಸಿನ್‌ ಕಾಲೇಜಿನಲ್ಲಿನ ಸಂಶೋಧನಕಾರರು ಏಪ್ರಿಲ್‌ನಿಂದ ಆಗಸ್ಟ್ 2020 ನಡುವೆ ಸುಮಾರು 1200 ಚಿಕ್ಕ ಮಕ್ಕಳು ಹಾಗೂ 30,000 ವಯಸ್ಕರ ಪ್ರತಿಕಾಯಗಳನ್ನು ಪರೀಕ್ಷೆಗೊಳಪಡಿಸಿದಾಗ ಶೇ. 17ರಷ್ಟು ಮಕ್ಕಳಲ್ಲಿ ಹಾಗೂ ಶೇ. 19ರಷ್ಟು ವಯಸ್ಕರಲ್ಲಿ ಸೋಂಕು ತಗುಲುವ ಲಕ್ಷಣಗಳು ಕಂಡು ಬಂದವು. ನಂತರ ಕೋವಿಡ್ ಪಾಸಿಟಿವ್ ಕಂಡು ಬಂದ 85 ಮಕ್ಕಳು ಹಾಗೂ 3,648 ವಯಸ್ಕರನ್ನು ಪರೀಕ್ಷಿಸಿದಾಗ ಕೋವಿಡ್ ತಗುಲುವ ಮೊದಲು ಹಾಗೂ ನಂತರ ದೇಹದಲ್ಲಿ ಪ್ರತಿಕಾಯಗಳು ಯಾವ ಹಂತದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತೋರಿಸಿಕೊಟ್ಟಿತು.

ಇಮ್ಯೂನೋಗ್ಲೋಬಿನ್ ಪ್ರತಿಕಾಯಗಳು ಒಂದರಿಂದ 10 ವರ್ಷದೊಳಗಿನ ಮಕ್ಕಳಲ್ಲಿ 11 ರಿಂದ 18 ವರ್ಷದವರಿಗಿಂತ ದುಪ್ಪಟ್ಟು ಇರುತ್ತದೆ. ಇನ್ನು 11 ರಿಂದ 18 ವರ್ಷದವರಿಗೂ ಕೂಡ 19 ರಿಂದ 24 ವರ್ಷದೊಳಗಿನವರಿಗಿಂತ ದುಪ್ಪಟ್ಟು ಪ್ರತಿಕಾಯಗಳು ಇರುತ್ತದೆ ಎಂದು ಅಧ್ಯಯನವೊಂದು ಪ್ರಯೋಗಾಕತ್ಮವಾಗಿ ತೋರಿಸಿತು.ನೇಚರ್ ಕಮ್ಯೂನಿಕೇಶನ್ ಪತ್ರಿಕೆ ಹಾಗೂ ಇನ್ನಿತರ ಸಂಶೋಧನೆಗಳ ಪ್ರಕಾರ ಪ್ರತಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಕೊರೊನಾ ವೈರಸ್‌ಗೆ ಪ್ರತಿರೋಧ ಒಡ್ಡುವ ಪ್ರತಿಕಾಯಗಳು ಹೆಚ್ಚು ಕ್ರಿಯಾಶೀಲವಾಗಿರುವುದರಿಂದ ಕೊರೋನಾ ವೈರಸ್ ವಿರುದ್ಧ ಹೋರಾಡಲು ಅನುಕೂಲವಾಗಿದೆ ಎಂದು ತಿಳಿಸಿಕೊಟ್ಟಿದೆ.

ಆದರೂ ಇವೆಲ್ಲದರ ನಡುವೆಯೂ ಕೊರೊನಾ ಬಗ್ಗೆ 10 ವರ್ಷಕ್ಕಿಂತ ಚಿಕ್ಕ ಮಕ್ಕಳು ಸಹ ನಿರ್ಲಕ್ಷ್ಯ ವಹಿಸದೆ ಎಚ್ಚರದಿಂದ ಇರುವುದು ಮುಖ್ಯ.
Published by: Sushma Chakre
First published: March 24, 2021, 12:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories