Coronavirus Updates Bangalore: ಕೊರೋನಾ ನಿಯಂತ್ರಿಸುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲ; ಆಕ್ರೋಶ ಹೊರಹಾಕಿದ ದಿನೇಶ್​ ಗುಂಡೂರಾವ್ ಹೆಂಡತಿ

ಇದು ಶಾಸಕ ಮತ್ತು ಮಾಜಿ ಸಚಿವರ ಸ್ಥಿತಿಯಾಗಿದ್ದರೆ, ಇನ್ನು ಜನಸಾಮಾನ್ಯರ ಕಷ್ಟಕ್ಕೆ ಬಿಬಿಎಂಪಿ ಹೇಗೆ ವರ್ತಿಸುತ್ತದೆ? ಎಂದು ತಬು ಗುಂಡೂರಾಬ್​ ಪ್ರಶ್ನಿಸಿದ್ದಾರೆ.  ಅದನ್ನು ಯೋಚಿಸಲು ನಮಗೇ ಭಯವಾಗುತ್ತದೆ. ಕೊರೋನಾ ವಿಚಾರದಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದೆ, ಬೇಜವಾಬ್ದಾರಿತನ ತೋರಿಸುತ್ತಿದೆ ಎಂದು ತಬು ಕಿಡಿಕಾರಿದ್ದಾರೆ.

news18-kannada
Updated:July 10, 2020, 7:03 PM IST
Coronavirus Updates Bangalore: ಕೊರೋನಾ ನಿಯಂತ್ರಿಸುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲ; ಆಕ್ರೋಶ ಹೊರಹಾಕಿದ ದಿನೇಶ್​ ಗುಂಡೂರಾವ್ ಹೆಂಡತಿ
ದಿನೇಶ್ ಗುಂಡೂರಾವ್​ ಹೆಂಡತಿ ತಬು
  • Share this:
ಬೆಂಗಳೂರು(ಜು.10): ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ ಕಾಂಗ್ರೆಸ್ ಶಾಸಕ ದಿನೇಶ್​ ಗುಂಡೂರಾವ್​ ಅವರ ಹೆಂಡತಿ ತಬು ಗುಂಡೂರಾವ್ ಬೆಂಗಳೂರಿನಲ್ಲಿ​​ ಕೊರೋನಾ ನಿಯಂತ್ರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ತಮ್ಮ ಫೇಸ್​ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ತಬು, ಬಿಬಿಎಂಪಿಯ ನಿರ್ಲಕ್ಷ್ಯ, ಬೇಜವಾಬ್ದಾರಿತನ ಪ್ರದರ್ಶನದ ಬಗ್ಗೆ ಕಿಡಿಕಾರಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿದಿನ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.  ಕೊರೋನಾ ನಿಯಂತ್ರಣಕ್ಕಾಗಿ ಬಿಬಿಎಂಪಿ ಸಂಪೂರ್ಣ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ತಬು ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.

Vikas Dubey: ಕಾರು ಅಪಘಾತದಲ್ಲಿ ಎಸ್ಕೇಪ್ ಆಗಲು ಯತ್ನಿಸಿದ ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಪೊಲೀಸರ ಗುಂಡೇಟಿಗೆ ಬಲಿ

ಕೊರೋನಾದಿಂದ ಉಂಟಾದ ತೊಂದರೆ ಬಗ್ಗೆ ನಮಗೆ ಸ್ವತಃ ಅನುಭವವಾಗಿದೆ. ನಮ್ಮ ಸಿಬ್ಬಂದಿಯೊಬ್ಬರಿಗೆ ಮಾರಕ ಕೊರೋನಾ ಸೋಂಕು ದೃಢವಾಗಿತ್ತು. ಆದರೆ ಈ ವೇಳೆ ಬಿಬಿಎಂಪಿ ಸರಿಯಾಗಿ ಸ್ಪಂದಿಸಿಲ್ಲ, ಜೊತೆಗೆ ಬಿಬಿಎಂಪಿಯಿಂದ ಯಾವುದೇ ಕರೆ ಕೂಡ ಬಂದಿಲ್ಲ. ಬಳಿಕ ನಾವೇ ಸಿಬ್ಬಂದಿಯನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಇಲ್ಲಿಯವರೆಗೆ ಬಿಬಿಎಂಪಿ ಸೋಂಕಿತರ ಮನೆಗಳಿಗೆ ಭೇಟಿ ನೀಡಿಲ್ಲ ಎಂದು ತಬು ಗುಂಡೂರಾವ್ ಬಿಬಿಎಂಪಿ ಕಾರ್ಯವೈಖರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರೆದು ಅವರು, ಸೋಂಕಿತರ ಕುಟುಂಬ ಸದಸ್ಯರನ್ನು ಮತ್ತು ನಿಕಟ ಸಂಪರ್ಕಿತರನ್ನು ಬಿಬಿಎಂಪಿ ಸಿಬ್ಬಂದಿ ಕ್ವಾರಂಟೈನ್ ಕೂಡ ಮಾಡಿರಲಿಲ್ಲ. ಕೊನೆಗೆ ನಾವೇ ಯಾರೂ ಸಹ ನಮ್ಮನ್ನು ಭೇಟಿ ಮಾಡದಂತೆ ಫೇಸ್​ಬುಕ್ ಮುಖಾಂತರ ಮನವಿ ಮಾಡಿಕೊಂಡೆವು ಎಂದು ತಮಗಾದ ಅನುಭವವನ್ನು ತಬು ಹೇಳಿಕೊಂಡಿದ್ದಾರೆ.

ಇದು ಶಾಸಕ ಮತ್ತು ಮಾಜಿ ಸಚಿವರ ಸ್ಥಿತಿಯಾಗಿದ್ದರೆ, ಇನ್ನು ಜನಸಾಮಾನ್ಯರ ಕಷ್ಟಕ್ಕೆ ಬಿಬಿಎಂಪಿ ಹೇಗೆ ವರ್ತಿಸುತ್ತದೆ? ಎಂದು ತಬು ಗುಂಡೂರಾವ್​ ಪ್ರಶ್ನಿಸಿದ್ದಾರೆ.  ಅದನ್ನು ಯೋಚಿಸಲು ನಮಗೇ ಭಯವಾಗುತ್ತದೆ. ಕೊರೋನಾ ವಿಚಾರದಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದೆ, ಬೇಜವಾಬ್ದಾರಿತನ ತೋರಿಸುತ್ತಿದೆ ಎಂದು ತಬು ಕಿಡಿಕಾರಿದ್ದಾರೆ.
Published by: Latha CG
First published: July 10, 2020, 9:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading