ಕೊರೋನಾ ರೋಗಿಗಳಿಗೆ ಬೆಡ್​ ನೀಡದ 2 ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಚಾಟಿ

ಬೆಂಗಳೂರಿನ ಎರಡು ಪ್ರಮುಖ ಆಸ್ಪತ್ರೆಗಳು ಆದೇಶ ಬಂದು ವಾರ ಕಳೆದರೂ ಕೋವಿಡ್ ಚಿಕಿತ್ಸೆಗೆ ಹಾಸಿಗೆಗಳನ್ನು ಹಸ್ತಾಂತರ ಮಾಡಿರಲೇ ಇಲ್ಲ. ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ ಗೂಳೂರು ಶ್ರೀನಿವಾಸ್ ಆದೇಶ ಪಾಲಿಸದ ವಿಕ್ರಂ ಆಸ್ಪತ್ರೆ ಮತ್ತು ಜಯನಗರದ ಅಪೊಲೋ ಆಸ್ಪತ್ರೆಗೆ ನೋಟಿಸ್ ನೀಡಿದ್ದರು. ಆ ನೋಟೀಸ್ ಗೂ ಸೂಕ್ತ ಉತ್ತರ ನೀಡದಿದ್ದಾಗ 48 ಗಂಟೆಗಳ ಕಾಲ ಆಸ್ಪತ್ರೆಗಳ ಒಪಿಡಿ ಮುಚ್ಚಿ ಆದೇಶಿಸಿದ್ದರು.

news18-kannada
Updated:July 15, 2020, 10:18 PM IST
ಕೊರೋನಾ ರೋಗಿಗಳಿಗೆ ಬೆಡ್​ ನೀಡದ 2 ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಚಾಟಿ
ಸಾಂದರ್ಭಿ ಚಿತ್ರ
  • Share this:
ಬೆಂಗಳೂರು(ಜು.15): ಖಾಸಗಿ ಆಸ್ಪತ್ರೆಗಳು ಕೊರೋನಾ ರೋಗಿಗಳ ಪಾಲಿನ ಅತಿ ದೊಡ್ಡ ವಿಲನ್ ಎನ್ನುವಂತಾಗಿಬಿಟ್ಟಿವೆ.‌ ರೋಗಿಗಳು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆಯೋದು, ಖಾಸಗಿ ಆಸ್ಪತ್ರೆಗಳು ಬೆಡ್ ಖಾಲಿ ಇಲ್ಲ ಅನ್ನೋದು ಎಲ್ಲವೂ ಸಾಕಷ್ಟು ಆಗಿದೆ. ಹಾಗಾದರೆ ನಿಜಕ್ಕೂ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಸ್ಥಿತಿಗತಿ ಏನಿದೆ. ಇಲ್ಲಿದೆ ಅದರ ಸಂಪೂರ್ಣ ಮಾಹಿತಿ.

384 ಖಾಸಗಿ ಆಸ್ಪತ್ರೆಗಳು, 10,500 ಹಾಸಿಗೆಗಳು

ಇದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ನೀಡಿರುವ ಲೆಕ್ಕ. ಕೊರೋನಾ ಚಿಕಿತ್ಸೆಯ ಸೌಲಭ್ಯ ಇರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಶೇಕಡಾ 50ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳ ಶುಶ್ರೂಷೆಗೆ ಕಡ್ಡಾಯವಾಗಿ ನೀಡಬೇಕು ಎನ್ನುವುದು ಸರ್ಕಾರದ ನಿಯಮ. ಈ ಬಗ್ಗೆ ಖುದ್ದು ಸಿಎಂ‌ಬಿ ಎಸ್ ಯಡಿಯೂರಪ್ಪ‌ ಖಾಸಗಿ ಆಸ್ಪತ್ರೆಗಳ ಜೊತೆಗೆ ಅನೇಕ ಹಂತಗಳಲ್ಲಿ ಸಭೆ ನಡೆಸಿ ಆದೇಶ ಹೊರಡಿಸಿದ್ದಾರೆ.‌ ಇದಕ್ಕಾಗಿ ಖಾಸಗಿ ಆಸ್ಪತ್ರೆಗಳ‌ ದರವನ್ನು ಕೂಡಾ ಅವರನ್ನೇ ಕೇಳಿ ನಿರ್ಧರಿಸಲಾಗಿತ್ತು.

ಇಷ್ಟೆಲ್ಲಾ ಆದರೂ ಬೆಂಗಳೂರಿನ ಎರಡು ಪ್ರಮುಖ ಆಸ್ಪತ್ರೆಗಳು ಆದೇಶ ಬಂದು ವಾರ ಕಳೆದರೂ ಕೋವಿಡ್ ಚಿಕಿತ್ಸೆಗೆ ಹಾಸಿಗೆಗಳನ್ನು ಹಸ್ತಾಂತರ ಮಾಡಿರಲೇ ಇಲ್ಲ. ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ ಗೂಳೂರು ಶ್ರೀನಿವಾಸ್ ಆದೇಶ ಪಾಲಿಸದ ವಿಕ್ರಂ ಆಸ್ಪತ್ರೆ ಮತ್ತು ಜಯನಗರದ ಅಪೊಲೋ ಆಸ್ಪತ್ರೆಗೆ ನೋಟಿಸ್ ನೀಡಿದ್ದರು. ಆ ನೋಟೀಸ್ ಗೂ ಸೂಕ್ತ ಉತ್ತರ ನೀಡದಿದ್ದಾಗ 48 ಗಂಟೆಗಳ ಕಾಲ ಆಸ್ಪತ್ರೆಗಳ ಒಪಿಡಿ ಮುಚ್ಚಿ ಆದೇಶಿಸಿದ್ದರು.

ಕಳೆದ 3 ತಿಂಗಳಿಗಿಂತ ದುಪ್ಪಟ್ಟು ವೇಗದಲ್ಲಿ ಸ್ಯಾಂಪಲ್ ಟೆಸ್ಟಿಂಗ್ ಗುರಿ ಹೊಂದಿರುವ ರಾಜ್ಯ ಸರ್ಕಾರ

ಆಗಲೂ ಬಗ್ಗದಿದ್ರೆ ಆಸ್ಪತ್ರೆ ಲೈಸೆನ್ಸ್ ಕ್ಯಾನ್ಸಲ್ ಮಾಡುವುದಾಗಿ ಎಚ್ಚರಿಸಿದ್ದರು.ಇಷ್ಟೆಲ್ಲಾ ಆದಮೇಲೆ ಅಪೊಲೋ ಆಸ್ಪತ್ರೆ ದಾರಿಗೆ ಬಂತು. 100 ಹಾಸಿಗೆಗಳ ಈ ಆಸ್ಪತ್ರೆ ಸಂಪೂರ್ಣ ಕೋವಿಡ್ ಆಸ್ಪತ್ರೆ ಎಂದು ಆಡಳಿತ ಮಂಡಳಿಯೇ ಘೋಷಿಸಿತು. ‌ಅರ್ಧದಷ್ಟು ಹಾಸಿಗೆಗಳನ್ನು ಈಗಾಗಲೇ ಕೋವಿಡ್ ರೋಗಿಗಳ ಚಿಕಿತ್ಸೆಗೆ ಕೂಡ ಹಸ್ತಾಂತರ ಮಾಡಲಾಗಿದೆ. ವಿಕ್ರಂ ಆಸ್ಪತ್ರೆ ಕೂಡಾ ತನ್ನಲ್ಲಿರುವ ಶೇಕಡಾ ‌50ರಷ್ಟು ಹಾಸಿಗೆಗಳನ್ನು ಹಸ್ತಾಂತರಿಸಿದೆ.
ಈ ಎರಡು ಆಸ್ಪತ್ರೆ ಮೇಲೆ ತೆಗೆದುಕೊಳ್ಳಲಾದ ಖಡಕ್ ಕ್ರಮಗಳಿಂದ ಉಳಿದ ಆಸ್ಪತ್ರೆಗಳೂ ನಿಯಮಗಳಿಗೆ ಬಾಗಿವೆ. ಹಾಗಾಗಿ ರೋಗಿಗಳಿಗೆ ಇನ್ಮುಂದೆ ಹಾಸಿಗೆಗಳ ಕೊರತೆ ಉಂಟಾಗುವುದಿಲ್ಲ ಎನ್ನುವ ಆಲೋಚನೆ ರಾಜ್ಯ ಸರ್ಕಾರದ್ದು.
Published by: Latha CG
First published: July 15, 2020, 10:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading