ಸಾವಿನ ಭೀತಿ ಹೆಚ್ಚಿಸಿದ ದೆಹಲಿ ಧಾರ್ಮಿಕ ಸಭೆ; ಕಾರ್ಯಕ್ರಮದಲ್ಲಿದ್ದ 10 ಜನ ಕೊರೋನಾಗೆ ಬಲಿ, 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಸಭೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಕೆಲವರನ್ನು ಈಗಾಗಲೇ ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಭಾನುವಾರದಿಂದ 800ಕ್ಕೂ ಹೆಚ್ಚು ಜನರ ತಪಾಸಣೆ ಮಾಡಲಾಗಿದೆ.

ದೆಹಲಿಯ ಸಭೆಯಲ್ಲಿ ಪಾಲ್ಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಅಧಿಕಾರಿಗಳು

ದೆಹಲಿಯ ಸಭೆಯಲ್ಲಿ ಪಾಲ್ಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಅಧಿಕಾರಿಗಳು

  • Share this:
ನವದೆಹಲಿ (ಮಾ. 31): ಒಬ್ಬರಿಂದ ಒಬ್ಬರಿಗೆ ಹರಡುವ ಕೊರೋನಾ ಸೋಂಕಿನ ಬಗ್ಗೆ ವಿಶ್ವಾದ್ಯಂತ ಆತಂಕ ಹೆಚ್ಚಾಗುತ್ತಿದೆ. ಈಗಾಗಲೇ ಭಾರತದಲ್ಲಿ ಕೊರೋನಾಗೆ 32 ಜನ ಕೊರೋನಾಗೆ ಬಲಿಯಾಗಿದ್ದಾರೆ. ಇದೀಗ ದೆಹಲಿಯ ತಬ್ಲೀಘೀ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ 10 ಜನ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಮಾ. 13ರಿಂದ 15ರವರೆಗೆ ದೆಹಲಿಯ ನಿಜಾಮುದ್ದೀನ್​ನಲ್ಲಿ ಧಾರ್ಮಿಕ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ ವಿದೇಶೀಯರು ಕೂಡ ಭಾಗವಹಿಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ತೆಲಂಗಾಣದ 6 ಜನರು ಸೇರಿದಂತೆ ಒಟ್ಟು 10 ಸಾವನ್ನಪ್ಪಿದ್ದಾರೆ. 300ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಒಂದೇ ಜಾಗದಿಂದ ದೊಡ್ಡ ಪ್ರಮಾಣದಲ್ಲಿ ಹರಡಿದ ಸೋಂಕಿನಿಂದಾಗಿ ಆರೋಗ್ಯಾಧಿಕಾರಿಗಳು ಚಿಂತೆಗೀಡಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಈ ಸಭೆಯಲ್ಲಿ ಜನರು ಪಾಲ್ಗೊಂಡಿದ್ದರು. ಅವರನ್ನು ಗುರುತಿಸಿ, ಐಸೋಲೇಷನ್​ನಲ್ಲಿ ಇರಿಸುವುದು ಸುಲಭದ ಮಾತಲ್ಲ. ಈಗಾಗಲೇ 10 ಜನ ಸಾವನ್ನಪ್ಪಿರುವುದು ಕೊರೋನಾ ಸೋಂಕಿನಿಂದಲೇ ಎಂಬುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಸೋಂಕು ಹರಡಿರುವ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಸೋಮವಾರ ಒಂದೇ ದಿನ ಭಾರತದಲ್ಲಿ 227 ಹೊಸ ಕೊರೋನಾ ಪ್ರಕರಣ; 32ಕ್ಕೆ ಏರಿದ ಸಾವಿನ ಸಂಖ್ಯೆ

ಈ ಸಮಾರಂಭಕ್ಕೆ ದೇಶದ ಬೇರೆ ಬೇರೆ ಭಾಗಗಳಿಂದ ಜನ ಆಗಮಿಸಿದ್ದರು. ಮಾ. 13ರಿಂದ 15ರವರೆಗೆ 5ರಿಂದ 6 ಫ್ಲೋರ್ ಬಿಲ್ಡಿಂಗ್ ನಲ್ಲಿ ನಡೆದಿದ್ದ ಸಭೆ ಇದಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಕೆಲವರನ್ನು ಈಗಾಗಲೇ ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಭಾನುವಾರದಿಂದ 800ಕ್ಕೂ ಹೆಚ್ಚು ಜನರ ತಪಾಸಣೆ ಮಾಡಲಾಗಿದೆ. ಸಭೆ ವೇಳೆ ಇದ್ದವರು, ಅವರ ಸಂಪರ್ಕದಲ್ಲಿದ್ದವರ ತಪಾಸಣೆ ನಡೆಸಲಾಗಿದೆ. ದೇಶಾದ್ಯಂತ ಲಾಕ್​ಡೌನ್​ ಘೋಷಿಸಿರುವುದರಿಂದ ಕೊರೋನಾ ನಿಯಂತ್ರಿಸುವ ಬಗ್ಗೆ ಆಶಾಭಾವನೆ ಹೊಂದಿದ್ದ ಆರೋಗ್ಯ ಇಲಾಖೆಗೆ ತಬ್ಲೀಘಿ ಘಟನೆಯಿಂದ ಮತ್ತೊಂದು ರೀತಿಯ ಆತಂಕ ಎದುರಾಗಿದೆ.

ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್​​​: ಮಗನ ಅಂತ್ಯಸಂಸ್ಕಾರ ಮಾಡಲು 88 ಕಿ.ಮೀ.ನಡೆದ ಅಪ್ಪ

ಈ ಸಭೆಯಲ್ಲಿ ನೂರಾರು ವಿದೇಶೀಯರು ಪಾಲ್ಗೊಂಡಿದ್ದರು. ಆ ವಿದೇಶೀಯರಿಂದಲೇ ಕೊರೋನಾ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಾಗಿದೆ. ಈ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದವರಲ್ಲಿ 6 ಮಂದಿ ತೆಲಂಗಾಣದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಆರೋಗ್ಯಾಧಿಕಾರಿಗಳನ್ನು ಕೂಡಲೇ ಸಂಪರ್ಕಿಸಬೇಕೆಂದು ತೆಲಂಗಾಣ ಸರ್ಕಾರ ಮನವಿ ಮಾಡಿದೆ. ಸಭೆಯಲ್ಲಿ ಭಾಗವಹಿಸಿದ್ದವರಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡಲಿದೆ. ದಯವಿಟ್ಟು ಈ ಸೋಂಕು ಬೇರೆಯವರಿಗೆ ಹರಡದಂತೆ ಎಚ್ಚರ ವಹಿಸಿ, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸರ್ಕಾರ ಮನವಿ ಮಾಡಿದೆ.
First published: