ವಿಶ್ವದ 60 ದೇಶಗಳಲ್ಲಿ ಕೊರೊನಾ ವೈರಸ್ ಪತ್ತೆ; ಅಮೆರಿಕ, ಆಸ್ಟ್ರೇಲಿಯದಲ್ಲಿ ಮೊದಲ ಸಾವು

ಕೊರೊನಾ ವೈರಸ್ ಸುಮಾರು 60 ದೇಶಗಳಿಗೆ ವ್ಯಾಪಿಸಿದ್ದು ಇದುವರೆಗೆ 29 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 85,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ತಗುಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ (ಮಾ. 1): ಚೀನಾದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್​ ಈಗ ಜಗತ್ತಿನಾದ್ಯಂತ ಸಾವಿನ ಭೀತಿಯನ್ನು ಸೃಷ್ಟಿಸಿದೆ. ಅಮೆರಿಕ, ಆಸ್ಟ್ರೇಲಿಯದಲ್ಲಿ ಕೊರೊನಾ ವೈರಸ್​ನಿಂದ ಸಾವನ್ನಪ್ಪಿರುವ ಮೊದಲ ಕೇಸುಗಳು ಪತ್ತೆಯಾಗುವ ಮೂಲಕ ವಿಶ್ವದ 60 ದೇಶಗಳಲ್ಲಿ ಈ ಮಾರಣಾಂತಿಕ ವೈರಸ್​ ಪ್ರಕರಣಗಳು ದಾಖಲಾಗಿವೆ.

ಚೀನಾದ ಬಳಿಕ ಜಪಾನ್, ಇಟಲಿ, ಕೆನಡಾ, ದಕ್ಷಿಣ ಕೊರಿಯಾದಲ್ಲಿ ಕೊರೊನಾ ವೈರಸ್​ನಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಅಮೆರಿಕದಲ್ಲೂ ಮೊದಲ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಪ್ರಕರಣ ದಾಖಲಾಗಿದೆ. ಅಮೆರಿಕದ ವಾಷಿಂಗ್ಟನ್ ಸ್ಟೇಟ್​ ಇದನ್ನು ಖಾತರಿ ಪಡಿಸಿದ್ದು, ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದ್ದರೂ ಯಾವ ರೀತಿಯಲ್ಲಿ ಅಲ್ಲಿನ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ ಎಂಬುದು ಪತ್ತೆಯಾಗಿಲ್ಲ.

ಇದನ್ನೂ ಓದಿ: ಏನಿದು ಕೊರೊನಾ ವೈರಸ್​, ಇದಕ್ಕೆ ಔಷಧ ಕಂಡು ಹಿಡಿಯೋಕೆ ಎಷ್ಟು ಸಮಯ ಬೇಕು?; ಇಲ್ಲಿದೆ ಮಾಹಿತಿ

ಅಮೆರಿಕದಲ್ಲಿ ಕೊರೊನಾ ವೈರಾಣು ಸೋಂಕು ತಗುಲಿದ ವ್ಯಕ್ತಿ ಯಾರು ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ. ಈ ಕುರಿತು ಎವರ್​ಗ್ರೀನ್ ಹೆಲ್ತ್​ ಮೆಡಿಕಲ್ ಸೆಂಟರ್​ನ ಕಯ್ಸೆ ದಹ್ಲ್​ ಹೇಳಿಕೆ ನೀಡಿದ್ದು, ಕಿರ್ಕ್​ಲ್ಯಾಂಡ್​ನ ಉಪನಗರ ಸೀಟೆಲ್​ನಲ್ಲಿರುವ ವ್ಯಕ್ತಿ ಸಾವನ್ನಪ್ಪಿದ್ದು, ಆತನ ಬಗ್ಗೆ ಶೀಘ್ರದಲ್ಲೇ ಮಾಹಿತಿ ಬಹಿರಂಗಪಡಿಸುತ್ತೇವೆ ಎಂದಿದ್ದಾರೆ. ಇನ್ನೂ ಅನೇಕರಿಗೆ ಚಿಕಿತ್ಸೆ ಮುಂದುವರಿದಿದೆ. ಹಾಗೇ, ಕೊರೊನಾ ವೈರಸ್​ ಪ್ರಕರಣಗಳು ಹೆಚ್ಚಾಗಿರುವ ಚೀನಾ, ದಕ್ಷಿಣ ಕೊರಿಯಾ, ಜಪಾನ್​ ದೇಶಗಳಿಗೆ ಪ್ರಯಾಣ ನಿರ್ಬಂಧವನ್ನು ಇನ್ನಷ್ಟು ಬಿಗಿಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ವೈರಸ್​; ಜಪಾನ್​ನಿಂದ ಕನ್ನಡಿಗ ಅಭಿಷೇಕ್ ಸೇರಿ 119 ಭಾರತೀಯರು ತಾಯ್ನಾಡಿಗೆ ವಾಪಾಸ್​

ಕೊರೊನಾ ವೈರಸ್ ಸುಮಾರು 60 ದೇಶಗಳಿಗೆ ವ್ಯಾಪಿಸಿದ್ದು ಇದುವರೆಗೆ 29 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 85,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ತಗುಲಿದೆ. ಜೊತೆಗೆ, ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಸಹ ಮೊದಲ ಕೊರೊನಾ ವೈರಸ್ ಸೋಂಕಿನಿಂದ ರೋಗಿಗಳು ಮೃತಪಟ್ಟ ಮೊದಲ ಪ್ರಕರಣ ವರದಿಯಾಗಿದೆ.

ಜಪಾನ್​ನಲ್ಲಿ ಕೊರೊನಾ ವೈರಸ್​​ನಿಂದ ಸಾವನ್ನಪ್ಪಿದವರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಕುವೈತ್​ನಲ್ಲಿ 45 ಕೊರೊನಾ ಕೇಸುಗಳು ಪತ್ತೆಯಾಗಿವೆ. ದಕ್ಷಿಣ ಕೊರಿಯಾದಲ್ಲಿ ಸೋಂಕಿನಿಂದಾಗಿ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

 
First published: