Coronavirus: ರಿಚರ್ಡಸನ್ ಬೆನ್ನಲ್ಲೆ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನಿಗೆ ಅಂಟಿದ ಕೊರೋನಾ?

Australia vs New Zealand: ಸದ್ಯ ಫರ್ಗ್ಯೂಸನ್ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ವರದಿ ಬರಬೇಕಿದೆ. ಪ್ರೇಕ್ಷಕರಿಲ್ಲದೆ ನಡೆದಿದ್ದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯದಲ್ಲಿ ಫರ್ಗ್ಯೂಸನ್ ಉತ್ತಮ ಪ್ರದರ್ಶನ ನೀಡಿದ್ದರು.

ನ್ಯೂಜಿಲೆಂಡ್ ತಂಡದ ಆಟಗಾರರು.

ನ್ಯೂಜಿಲೆಂಡ್ ತಂಡದ ಆಟಗಾರರು.

  • Share this:
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ ವೇಗಿ, ಐಪಿಎಲ್​​ನಲ್ಲಿ ಆರ್​ಸಿಬಿ ತಂಡದ ಆಟಗಾರ ಕೇನ್ ರಿಚರ್ಡ್​ಸನ್​ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಸದ್ಯ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ನೆಗೆಟಿವ್ ರಿಸಲ್ಟ್ ಬಂದಿದ್ದು, ರಿಚರ್ಡ್​ಸನ್​ಗೆ ಕೊರೊನಾ ಸೋಂಕು ಇಲ್ಲದಿರುವುದು ಧೃಡಪಟ್ಟಿದೆ.

Coronavirus newsfile: Lockie Ferguson undergoes coronavirus test after reporting sore throat
ಲ್ಯೂಕಿ ಫರ್ಗ್ಯೂಸನ್, ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ.


ಇದರ ಬೆನ್ನಲ್ಲೆ ನ್ಯೂಜಿಲೆಂಡ್ ತಂಡದ ಸ್ಟಾರ್ ಬೌಲರ್ ಲ್ಯೂಕಿ ಫರ್ಗ್ಯೂಸನ್ ಅವರಿಗೆ ಕೊರೋನಾ ಸೋಂಕು ತಗುಲಿದೆಯಾ ಎಂಬ ಸಂಶಯ ಮೂಡಿದೆ. ನಿನ್ನೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ಮುಗಿದ ಬಳಿಕ ಫರ್ಗ್ಯೂಸನ್ ಅವರಿಗೆ ಗಂಟಲು ನೋವು, ಕೆಮ್ಮು ಕಾಣಿಸಿಕೊಂಡಿದೆ.

IPL 2020: ಐಪಿಎಲ್ 13ನೇ ಆವೃತ್ತಿ ಏಪ್ರಿಲ್ 15ಕ್ಕೆ ಮುಂದೂಡಿಕೆ

ಸದ್ಯ ಫರ್ಗ್ಯೂಸನ್ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ವರದಿ ಬರಬೇಕಿದೆ. ಪ್ರೇಕ್ಷಕರಿಲ್ಲದೆ ನಡೆದಿದ್ದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯದಲ್ಲಿ ಫರ್ಗ್ಯೂಸನ್ ಉತ್ತಮ ಪ್ರದರ್ಶನ ನೀಡಿದ್ದರು. ಕಾಂಗರೂ ಪಡೆಯ ಎರಡು ಪ್ರಮುಖ ವಿಕೆಟ್ ಕಿತ್ತಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ನಾಯಕ ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಶೇನ್ ಅವರ ಅರ್ಧಶತಕದ ನೆರವಿನಿಂದ 50 ಓವರ್​ನಲ್ಲಿ 258 ರನ್ ಗಳಿಸಿತ್ತು.

ಆರ್​ಸಿಬಿಯ ಸ್ಟಾರ್ ಆಟಗಾರನಿಗೆ ಅಂಟಿದ ಕೊರೋನಾ?; ಸ್ಪೆಷಲ್ ವಾರ್ಡ್​ನಲ್ಲಿ ಚಿಕಿತ್ಸೆ!

ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆಸೀಸ್ ಬೌಲರ್​ಗಳ ಸಂಘಟಿತ ಹೋರಾಟಕ್ಕೆ ತಲೆಬಾಗಿ ಕೇವಲ 187 ರನ್​ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ 71 ರನ್​ಗಳ ಭರ್ಜರಿ ಜಯ ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಮಾರಕ ಕೊರೋನಾ ವೈರಸ್ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಈವರೆಗೂ ಜಗತ್ತಿನಾದ್ಯಂತ 5 ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಭಾರತದಲ್ಲೂ 81 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.

First published: