Coronavirus: ಕೊರೊನಾದಿಂದ ಚೇತರಿಸಿಕೊಂಡ ನಂತರ ಈ ಸಮಸ್ಯೆಗಳು ನಿಮ್ಮನ್ನು ಕಾಡಲಿದೆ..!

ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ಬಹಳ ಸಮಯದ ನಂತರ ಜನರಲ್ಲಿ ಮತ್ತೆ ಈ ರೋಗ ಲಕ್ಷಣಗಳು ಕಂಡು ಬರುವುದನ್ನು ಮತ್ತು ರೋಗ ಮತ್ತೆ ಬರುವ ಸ್ಥಿತಿಯನ್ನು ದೀರ್ಘಕಾಲಿಕ ಕೋವಿಡ್ ಎಂದು ಹೇಳಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಮ್ಮೆ ಕೋವಿಡ್-19 ವೈರಸ್ (Covid-19 virus) ತಗುಲಿದರೆ ಸ್ವಲ್ಪ ದಿನಗಳ ಕಾಲ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂಬ ಮನೋಭಾವನೆಯಿಂದ ಹೊರಗೆ ಅನವಶ್ಯಕವಾಗಿ ತಿರುಗಾಡಬೇಡಿ. ಏಕೆಂದರೆ ಒಬ್ಬ ವ್ಯಕ್ತಿಯು ಸ್ವಲ್ಪ ಕಾಲದವರೆಗೆ ಕೋವಿಡ್‌ನಿಂದ (Infected) ಬಳಲಿ, ನಂತರ ಚೇತರಿಕೆ (Recovery) ಕಂಡರೂ ಸಹ ಕೆಲವು ದೀರ್ಘಕಾಲಿಕ ಅಸ್ವಸ್ಥತೆಗಳು (Chronic Illnesses) ಆ ವ್ಯಕ್ತಿಯನ್ನು ಕಾಡದೆ ಹಾಗೆ ಬಿಡವು ಎಂದು ಹೇಳಲಾಗುತ್ತಿದೆ. SARS-COV-2 ವೈರಸ್‌ನ ಪರಿಣಾಮಗಳು ರೋಗದಿಂದ ನೀವು ಚೇತರಿಸಿಕೊಂಡರೂ ಸಹ ಕೆಲವು ದೀರ್ಘಕಾಲದ ರೋಗಲಕ್ಷಣಗಳು ನಿಮ್ಮ ದೇಹದಲ್ಲಿ ಹಾಗೆ ಉಳಿದುಕೊಂಡಿರುತ್ತವೆ ಮತ್ತು ಅವುಗಳು ಹಾಗೆಯೇ ಮುಂದುವರಿದರೆ ಅನೇಕರು ದೀರ್ಘಕಾಲೀಕ ಆರೋಗ್ಯ ತೊಡಕುಗಳನ್ನು ಸಹ ಬೆಳೆಸಿಕೊಳ್ಳುವ ಅಪಾಯವಿರುತ್ತದೆ.

ಕೆಲವು ಜನರು ಕಡಿಮೆ ಲಕ್ಷಣಗಳು ಮತ್ತು ತೀವ್ರತೆ ಹೊಂದಿರುವ ಕೋವಿಡ್ ಸೋಂಕಿನಿಂದ ಬಳಲಿ, ಚೇತರಿಕೆ ಕಂಡ ಬಳಿಕವೂ ಸ್ವಲ್ಪ ಸಮಯದವರೆಗೆ ರೋಗ ಲಕ್ಷಣಗಳನ್ನು ಅನುಭವಿಸುತ್ತಲೇ ಇರುತ್ತಾರೆ ಎಂದು ಅಧ್ಯಯನಗಳು ಹೇಳಿವೆ.

ನೀವು ಕೋವಿಡ್-19 ವೈರಸ್‌ನಿಂದ ಬಳಲಿದ ನಂತರ ರೋಗಲಕ್ಷಣಗಳು 4 ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿಯಬಹುದು ಎಂದು ತಜ್ಞರು ಹೇಳಿದ್ದಾರೆ. ಓಮೈಕ್ರಾನ್‌ ರೂಪಾಂತರವನ್ನು ಲಘುವಾಗಿ ತೆಗೆದುಕೊಳ್ಳದಂತೆ ವೈದ್ಯರು ಎಚ್ಚರಿಸಿದ್ದಾರೆ. ಏಕೆಂದರೆ ಇದು ದೀರ್ಘ ಕೋವಿಡ್‌ಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Pregnancy Tips: ಗರ್ಭಿಣಿಯಾಗಿ ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಆರೋಗ್ಯದ ಬಗ್ಗೆ ಇರಲಿ ಎಚ್ಚರ

1. ಏನಿದು ದೀರ್ಘಕಾಲಿಕ ಕೋವಿಡ್?
ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ಬಹಳ ಸಮಯದ ನಂತರ ಜನರಲ್ಲಿ ಮತ್ತೆ ಈ ರೋಗ ಲಕ್ಷಣಗಳು ಕಂಡು ಬರುವುದನ್ನು ಮತ್ತು ರೋಗ ಮತ್ತೆ ಬರುವ ಸ್ಥಿತಿಯನ್ನು ದೀರ್ಘಕಾಲಿಕ ಕೋವಿಡ್ ಎಂದು ಹೇಳಲಾಗುತ್ತದೆ.

ಸೋಂಕು ಕಡಿಮೆಯಾದ ವಾರಗಳು ಮತ್ತು ತಿಂಗಳುಗಳ ನಂತರ ಸಹ ವ್ಯಕ್ತಿಗಳಿಗೆ ಈ ರೋಗ ಲಕ್ಷಣಗಳು ಬಾಧಿಸುತ್ತಲೇ ಇರುತ್ತದೆ. ಮಧ್ಯಮ ಅಥವಾ ತೀವ್ರ ರೀತಿಯ ಸೋಂಕನ್ನು ಅನುಭವಿಸಿದ ಕೆಲವು ರೋಗಿಗಳು ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸುವಲ್ಲಿ ಆರೋಗ್ಯದ ವಿಷಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ವಯಸ್ಸಾದವರಲ್ಲಿ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಜನರಲ್ಲಿ ಈ ರೀತಿಯ ಕೋವಿಡ್-19 ರೋಗಲಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಕೆಲವು ಸಾಮಾನ್ಯ ಮತ್ತು ಸಂಬಂಧಿತ ರೋಗ ಲಕ್ಷಣಗಳಲ್ಲಿ ಆಯಾಸ, ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಆತಂಕ ಸೇರಿವೆ. ಕೋವಿಡ್ ನಂತರದ ಸಿಂಡ್ರೋಮ್‌ನಿಂದ ಬಳಲುವ ಜನರಿಗೆ ವೈದ್ಯರು ಸರಿಯಾದ ಆರೈಕೆ ಮತ್ತು ಉತ್ತಮ ಆಹಾರವನ್ನು ಶಿಫಾರಸು ಮಾಡುತ್ತಾರೆ.

2. ತಿಂಗಳುಗಟ್ಟಲೆ ಉಳಿಯಬಹುದಾದ ಕೋವಿಡ್-19 ರೋಗ ಲಕ್ಷಣಗಳು
ಕೋವಿಡ್-19 ಸೋಂಕಿನ ಒಂದು ಮುಖ್ಯ ರೋಗ ಲಕ್ಷಣವೆಂದರೆ ಅದು ವಾಸನೆ ಮತ್ತು ರುಚಿಯ ಪ್ರಜ್ಞೆಯನ್ನು ಕಳೆದುಕೊಳ್ಳುವುದು. ಸೋಂಕಿಗೆ ಒಳಗಾಗುವ ಹೆಚ್ಚಿನ ಜನರು ಮೇಲ್ಭಾಗದ ಉಸಿರಾಟದ ನಾಳದ ಸೋಂಕನ್ನು ಹೊಂದಿರುತ್ತಾರೆ.

ಇದು ವಾಸನೆ ಮತ್ತು ರುಚಿಯ ಪ್ರಜ್ಞೆ ಕಳೆದುಕೊಳ್ಳಲು ಕಾರಣವಾಗುತ್ತದೆ. ಹೆಚ್ಚಿನ ಜನರು ಚೇತರಿಸಿಕೊಳ್ಳಲು ಪ್ರಾರಂಭಿಸಿದಾಗ, ತಮ್ಮ ವಾಸನೆಯ ಪ್ರಜ್ಞೆಯನ್ನು ಪುನಃ ಪಡೆಯುತ್ತಾರೆ. ಕೆಲವರು ಪರೋಸ್ಮಿಯಾ ಎಂದು ಕರೆಯಲ್ಪಡುವ ವಿಕೃತ ವಾಸನೆಯ ಪ್ರಜ್ಞೆಯನ್ನು ಅನುಭವಿಸುತ್ತಾರೆ.

ಪರೋಸ್ಮಿಯಾ ಒಂದು ರೀತಿಯ ವಾಸನೆ ಅಸ್ವಸ್ಥತೆಯಾಗಿದ್ದು, ಜನರಿಗೆ ಮೂಲ ಪರಿಮಳಕ್ಕಿಂತ ವಿಭಿನ್ನ ವಾಸನೆ ಬರಲು ಶುರುವಾಗುತ್ತದೆ. ಒಂದು ಕಾಲದಲ್ಲಿ ಆಹ್ಲಾದಕರ ವಾಸನೆ ಆನಂದಿಸಿದವರಿಗೆ ಪರೋಸ್ಮಿಯಾ ಹೊಂದಿದಾಗ ಬರುವ ಕೆಟ್ಟ ವಾಸನೆ ತುಂಬಾನೇ ಪರಿಣಾಮ ಬೀರಬಹುದು.

ಇದು ಕೋವಿಡ್-19 ರೋಗದ ದೀರ್ಘಕಾಲದ ಪರಿಣಾಮಗಳಲ್ಲಿ ಒಂದಾಗಿರಬಹುದು ಎಂದು ಸಂಶೋಧನೆಗಳು ಸೂಚಿಸಿವೆ. 2021ರ ಜೂನ್‌ನಲ್ಲಿ ನಡೆದ ಅಧ್ಯಯನದಲ್ಲಿ, ದೀರ್ಘ ಕೋವಿಡ್‌ನಿಂದ ಬಳಲುತ್ತಿರುವ 1,299 ಜನರಲ್ಲಿ 140 ಜನರು ತಮ್ಮ ವಾಸನೆಯ ಪ್ರಜ್ಞೆಯಲ್ಲಿ ಬದಲಾವಣೆಯನ್ನು ವರದಿ ಮಾಡಿದ್ದಾರೆ ಎಂದು ವೈದ್ಯರು ಹೇಳುತ್ತಾರೆ.

3. ಇದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಪರೋಸ್ಮಿಯಾದಿಂದ ಬಳಲುತ್ತಿರುವ ಯಾರಿಗಾದರೂ ವಾಸನೆಯ ವಿಕೃತ ಪ್ರಜ್ಞೆ ಕಾಡುತ್ತದೆ. ಈ ಸ್ಥಿತಿಯ ಬಗ್ಗೆ ಅನೇಕರು ಮುಂಚಿತವಾಗಿ ಬಂದು ವರದಿ ಮಾಡಿದ್ದಾರೆ.

ಈ ಸ್ಥಿತಿಯಿಂದ ಅವರಿಗೆ ಯಾವಾಗ ಬಿಡುಗಡೆ ಸಿಗುವುದು ಯಾವಾಗ ಎಂದು ಹೇಳಲು ಸಾಧ್ಯವಿಲ್ಲವಾದರೂ, ಅದೇ ಅಧ್ಯಯನದ ಸಮೀಕ್ಷೆಯಲ್ಲಿ, 49.3 ಪ್ರತಿಶತ ಜನರು ಪರೋಸ್ಮಿಯಾದಿಂದ 3 ತಿಂಗಳೊಳಗೆ ಹೊರ ಬಂದಿದ್ದಾರೆ ಎಂದು ವರದಿ ಮಾಡಿದೆ. ಉಳಿದ 50.7 ಪ್ರತಿಶತ ಜನರು ತಮ್ಮ ಪರೋಸ್ಮಿಯಾ 3 ತಿಂಗಳಿಗೂ ಹೆಚ್ಚು ಕಾಲ ಮುಂದುವರೆದಿದೆ ಎಂದು ಹೇಳಿದರು.

ಪರೋಸ್ಮಿಯಾ ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ಅತ್ಯಂತ ತೀವ್ರವಾದ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಗುರುತಿಸಲಾಗಿದೆ. ನಮ್ಮ ವಾಸನೆಯ ಪ್ರಜ್ಞೆಯು ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ನಮ್ಮನ್ನು ಸಂಪರ್ಕಿಸುವ ವಿಷಯವಾಗಿದೆ. ಆಹಾರ ತಿನ್ನುವಾಗ ವಾಸನೆ ಗ್ರಹಿಸದಿದ್ರೆ ಸಾಮರ್ಥ್ಯವಿಲ್ಲದೆ ನಾವು ನಿಜವಾಗಿಯೂ ನಮ್ಮ ಆಹಾರವನ್ನು ಆನಂದಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: Health tips: ಗಂಟಲು ನೋವಿಗೆ ಮನೆಯಲ್ಲಿಯೇ ಇದೆ ಮದ್ದು

4. ಇದಕ್ಕೆ ಚಿಕಿತ್ಸೆ ಇಲ್ಲವೇ?
ಪರೋಸ್ಮಿಯಾ ಅಥವಾ ಅನೋಸ್ಮಿಯಾ (ವಾಸನೆಯ ಶಾಶ್ವತ ನಷ್ಟ)ದಿಂದ ಬಳಲುತ್ತಿರುವವರು ವಾಸನೆ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ವಿಕೃತ ಅಥವಾ ದುರ್ಬಲ ವಾಸನೆಯ ಪ್ರಜ್ಞೆ ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಇದು ಪರಿಣಾಮಕಾರಿ ನೈಸರ್ಗಿಕ ಪರಿಹಾರ ಎಂದು ಹೇಳಲಾಗುತ್ತದೆ.

ಜನರು 4 ಬಲವಾದ ವಾಸನೆಗಳನ್ನು ಆಗಾಗ್ಗೆ ಮೂಸಿ ನೋಡಬೇಕಾಗುತ್ತದೆ. ನಾವು ಬಳಸುವ ತೈಲಗಳನ್ನು ಕನಿಷ್ಠ 20 ಸೆಕೆಂಡುಗಳ ಕಾಲ ಮೂಸಿ ನೋಡಬೇಕಾಗುತ್ತದೆ.
Published by:vanithasanjevani vanithasanjevani
First published: