ತುಮಕೂರಿನಲ್ಲೇ ಕೊರೋನಾ ಟೆಸ್ಟಿಂಗ್​​​ ಲ್ಯಾಬ್​​ ಆರಂಭ - ಇನ್ಮುಂದೆ ಕೋವಿಡ್​​-19 ವರದಿಗಾಗಿ ಮೂರು ದಿನ ಕಾಯಬೇಕಿಲ್ಲ

ಮೂರು ದಿನಗಳಿಂದ ನಿರಂತರವಾಗಿ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಐಸಿಎಂಆರ್​ನಿಂದ ಅನುಮೋದನೆಗೊಂಡ ಕೋವಿಡ್-19 ಟೆಸ್ಟಿಂಗ್ ಲ್ಯಾಬೋರೇಟರಿಯಲ್ಲಿ ಸರ್ಕಾರದ ಅನುದಾನದಲ್ಲಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ.

news18-kannada
Updated:June 3, 2020, 7:33 AM IST
ತುಮಕೂರಿನಲ್ಲೇ ಕೊರೋನಾ ಟೆಸ್ಟಿಂಗ್​​​ ಲ್ಯಾಬ್​​ ಆರಂಭ - ಇನ್ಮುಂದೆ ಕೋವಿಡ್​​-19 ವರದಿಗಾಗಿ ಮೂರು ದಿನ ಕಾಯಬೇಕಿಲ್ಲ
ಸಾಂದರ್ಭಿಕ ಚಿತ್ರ
  • Share this:
ತುಮಕೂರು(ಜೂ.03): ಇಷ್ಟು ದಿನ ಕೊರೋನಾ ಸೋಂಕಿನ ಪರೀಕ್ಷಾ ವರದಿಗಾಗಿ 2-3 ದಿನ ಕಾಯಬೇಕಿದ್ದ ತುಮಕೂರು ಜಿಲ್ಲೆಯ ಜನತೆಗೆ ತುಸು ನೆಮ್ಮದಿ ಸಿಕ್ಕಿದೆ. ಯಾಕಂದರೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲೇ ಕೋವಿಡ್ 19 ಪರೀಕ್ಷಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಪರೀಕ್ಷಾ ವರದಿ ಒಂದೇ ದಿನದಲ್ಲಿ ಕೈ ಸೇರುತಿದ್ದು ಬೇಗ ಚಿಕಿತ್ಸೆ ನೀಡಲು ಸಹಕಾರಿಯಾಗುತಿದೆ.

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲೇ ಕೊರೋನಾ ಸೋಂಕು ಪರೀಕ್ಷಾ ಕೇಂದ್ರ ತಲೆ ಎತ್ತಿದೆ. ಪ್ರತಿನಿತ್ಯ ಈ ಪ್ರಯೋಗಾಲಯವೂ 94 ಕ್ಕೂ ಹೆಚ್ಚು ಟೆಸ್ಟ್ ಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ. ಕರೋನಾ ಪರೀಕ್ಷೆಗೆ ಶಂಕಿತರ ರಕ್ತ, ಗಂಟಲು‌ದ್ರವದ ಮಾದರಿ ಸಂಗ್ರಹಿಸಿ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಿ ಎರಡು ಮೂರು ದಿನ ಕಾಯಬೇಕಾದ ಅನಿವಾರ್ಯತೆ ದೂರವಾಗಿದೆ.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಎಮ್​​ಆರ್​​ಐ, ಸಿಟಿ ಸ್ಕ್ಯಾನ್ ಸೆಂಟರ್ ಮುಂಭಾಗದ ಕಟ್ಟಡದಲ್ಲಿ ಆರಂಭವಾಗಿರುವ ಆರ್.ಟಿ.ಪಿ.ಸಿ.ಆರ್ ಲ್ಯಾಬ್​​ನಲ್ಲಿ ಒಟ್ಟು 5 ಸೇರಿ ಒಬ್ಬರು ವೈದ್ಯರು ಕಾರ್ಯನಿರ್ವಹಿಸುತಿದ್ದಾರೆ. ಇಬ್ಬರು ಮೈಕ್ರೋ ಬಯಾಲೋಜಿಸ್ಟ್ ಗಳು ಇಡೀ ಲ್ಯಾಬ್ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಕೋವಿಡ್-19 ಟೆಸ್ಟಿಂಗ್ ಲ್ಯಾಬೋರೇಟರಿ' ಈಗಾಗಲೇ ಕೆಲಸ ಆರಂಭಿಸಿದ್ದು, ಮೊನ್ನೆ ಒಂದೇ ದಿನ ಸರಿ ಸುಮಾರು 50 ಟೆಸ್ಟಿಂಗ್​​ಗಳ ವರದಿಯನ್ನ ನೀಡಿತ್ತು. ಮೈಕ್ರೋ ಬಯಾಲಜಿಸ್ಟ್ ಮತ್ತು ಟೆಕ್ನಿಷಿಯನ್​​ಗಳು ಕೋವಿಡ್-19 ವರದಿಗಳ 'ಟೆಸ್ಟ್ ರನ್' ಮಾಡುತ್ತಿದ್ದಾರೆ.

ಇದನ್ನೂ ಓದಿ: ಅರಣ್ಯ ಅಧಿಕಾರಿಗಳಿಂದ ನೊಂದ ರೈತರ ಬೆನ್ನಿಗೆ ನಿಂತ ಸಂಸದ ಡಿ ಕೆ ಸುರೇಶ್

ಮೂರು ದಿನಗಳಿಂದ ನಿರಂತರವಾಗಿ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಐಸಿಎಂಆರ್​ನಿಂದ ಅನುಮೋದನೆಗೊಂಡ ಕೋವಿಡ್-19 ಟೆಸ್ಟಿಂಗ್ ಲ್ಯಾಬೋರೇಟರಿಯಲ್ಲಿ ಸರ್ಕಾರದ ಅನುದಾನದಲ್ಲಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ ಪರೀಕ್ಷಾರ್ಥವಾಗಿ 8900 ಮಂದಿಯ ಗಂಟಲು ದ್ರವದ ಮಾದರಿ ಮಾದರಿಗಳನ್ನು ತೆಗೆದು ಟೆಸ್ಟ್​ಗೆ ಕಳುಹಿಸಲಾಗಿದೆ. ಅದರಲ್ಲಿ 8040 ಮಂದಿ ವರದಿಗಳು ನೆಗೆಟಿವ್ ಬಂದಿವೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ತುಮಕೂರಿನಲ್ಲಿ ಕೋವಿಡ್-19 ಪಾಸಿಟಿವ್ ವರದಿಗಳು ಕಡಿಮೆ ಇವೆ.ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತಿದ್ದಂತೆ ಜಿಲ್ಲಾ ಆಸ್ಪತ್ರೆಯನ್ನೇ ಕೋವಿಡ್ 19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ಆದರೆ ಕೊರೊನಾ ಪರೀಕ್ಷೆಗೆ ಬೆಂಗಳೂರು ಹಾಗೂ ಹಾಸನ ಪ್ರಯೋಗಾಲಯವನ್ನೇ ಈ ವರೆಗೆ ಆಶ್ರಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಪ್ರತ್ಯೇಕ ಲ್ಯಾಬ್ ಆರಂಭಿಸುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಕೊಟ್ಟ ಭರವಸೆ ಈಡೇರಿದೆ.

 First published: June 3, 2020, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading