• Home
  • »
  • News
  • »
  • coronavirus-latest-news
  • »
  • ಮಂಡ್ಯ, ಕೋಲಾರದಲ್ಲಿ ಹೊಸ ಕೋವಿಡ್​​-19 ಟೆಸ್ಟಿಂಗ್​​​ ಲ್ಯಾಬ್​​ ಆರಂಭ

ಮಂಡ್ಯ, ಕೋಲಾರದಲ್ಲಿ ಹೊಸ ಕೋವಿಡ್​​-19 ಟೆಸ್ಟಿಂಗ್​​​ ಲ್ಯಾಬ್​​ ಆರಂಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು ಏಮ್ಸ್ ಆಸ್ಪತ್ರೆಯಲ್ಲಿನ ಕೋವಿಡ್ ಟೆಸ್ಟಿಂಗ್ ಪ್ರಯೋಗಾಲಯದ ಉದ್ಘಾಟನೆಗೆ ಸಚಿವ ನಾರಾಯಣಗೌಡ ಮತ್ತು ಜಿಲ್ಲಾಡಳಿತದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಆಗಮಿಸಿದರು.

  • Share this:

ಮಂಡ್ಯ/ಕೋಲಾರ(ಜೂ.03): ಮಂಡ್ಯ ಜಿಲ್ಲೆಯಲ್ಲಿ ಕಳೆದ 10-15  ದಿನಗಳ ಹಿಂದೆ ಮಹಾರಾಷ್ಟ್ರ ಜನರು ಹೆಚ್ಚಿನ ಸಂಖ್ಯೆ ಆಗಮಿಸಿದ್ದರು. ಈ ವೇಳೆ ಅವರನ್ನೆಲ್ಲಾ ಕ್ವಾರೆಂಟೈನ್ ಮಾಡಲಾಗಿತ್ತು. ಇವರೊಂದಿಗೆ ಬಂದಂತಹ ಸಾವಿರಾರು‌ ಸಂಖ್ಯೆ ವಲಸಿಗರನ್ನು ಕೋವಿಡ್ ಟೆಸ್ಟ್ ಮಾಡಿಸೋದು ಜಿಲ್ಲಾಡಳಿತಕ್ಕೆ ತಲೆ ನೋವಾಗಿತ್ತು.‌ ಹೀಗಾಗಿ ಕೋವಿಡ್-19 ಟೆಸ್ಟ್ ಹೆಚ್ಚಿನ ಸಂಖ್ಯೆಯಲ್ಲಿ ಮಾಡಲು ಮಿಮ್ಸ್ ಆಸ್ಪತ್ರೆ ಮತ್ತು ಏಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್​​ ಶುರು ಮಾಡುವಂತೆ ಮನವಿ ಮಾಡಿತ್ತು.


ಈಗ ಜಿಲ್ಲಾಡಳಿತ ಮನವಿ ಮೇರೆಗೆ ಸರ್ಕಾರವೂ ಹೆಚ್ಚಿನ ವಲಸಿಗರನ್ನು ಪರೀಕ್ಷೆ ಮಾಡಲು ಮಿಮ್ಸ್ ಆಸ್ಪತ್ರೆ ಜತೆಗೆ ಏಮ್ಸ್ ಆಸ್ಪತ್ರೆಯಲ್ಲೂ ಕೂಡ ಕೋವಿಡ್ ಟೆಸ್ಟಿಂಗ್ ಮಾಡುವ ಉಪಕರಣ ಹಾಕಿಸಿದೆ. ನಾಗಮಂಗಲ ತಾಲೂಕಿನ ಬೆಳ್ಳೂರು ಬಳಿ ಇರುವ ಚುಂಚನಗಿರಿ ಕ್ಷೇತ್ರದ ‌ಏಮ್ಸ್ ಆಸ್ಪತ್ರೆಗೆ ಸರ್ಕಾರದ ವೆಚ್ಚದಲ್ಲಿ‌ ಕೋವಿಡ್ ಟೆಸ್ಟ್ ಉಪಕರಣ ಅಳವಡಿಸಿದೆ. ಇಂದು ಚುಂಚನಗಿರಿಯ ಚಂಚಶ್ರೀಗಳಾದ ಶ್ರೀ ನಿರ್ಮಾಲಾನಂದ ಸ್ವಾಮೀಜಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಲೋಕಾರ್ಪಣೆ  ಮಾಡಿದರು. ಬಳಿಕ ಮಾತನಾಡಿ  ಹೊಸ ಲ್ಯಾಬ್ ನಿಂದ ಕನಿಷ್ಟ ದಿನಕ್ಕೆ 500 ವರದಿ ಪಡೆಯ ಬಹುದಾಗಿದೆ. ನಾವು ಇನ್ನುಂದೆ ಕೊರೊನಾ ಜೊತೆ ಬದುಕಬೇಕಾಗಿದೆ ಮುಂದೆ ಎಚ್ಚರಿಕೆ ವಹಿಸಬೇಕಿದೆ ಎಂದರು.

ಇನ್ನು ಏಮ್ಸ್ ಆಸ್ಪತ್ರೆಯಲ್ಲಿನ ಕೋವಿಡ್ ಟೆಸ್ಟಿಂಗ್ ಪ್ರಯೋಗಾಲಯದ ಉದ್ಘಾಟನೆಗೆ ಸಚಿವ ನಾರಾಯಣಗೌಡ ಮತ್ತು  ಜಿಲ್ಲಾಡಳಿತದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಆಗಮಿಸಿದರು.

ಇದನ್ನೂ ಓದಿ: ನಿಸರ್ಗ ಚಂಡಮಾರುತದ ಅಬ್ಬರ; ಮಹಾರಾಷ್ಟ್ರದಲ್ಲಿ ಭಾರೀ ಗಾಳಿ-ಮಳೆ

ಇನ್ನೊಂದೆಡೆ ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಪರೀಕ್ಷಾ ಕೇಂದ್ರ ಆರಂಭವಾಗಿದೆ. ಕೋಲಾರ ನಗರದಲ್ಲಿನ ಎಸ್​ಎನ್​​ಆರ್ ಆಸ್ಪತ್ರೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಅನುದಾನದಿಂದ ಲ್ಯಾಬ್ ನಿರ್ಮಾಣ ಮಾಡಲಾಗಿದೆ. ನೂತನ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್ ನಾಗೇಶ್, ಡಿಸಿ ಸಿ ಸತ್ಯಭಾಮ ಚಾಲನೆ ನೀಡಿದರು.

ಲ್ಯಾಬ್​ ಉದ್ಘಾಟಿಸಿ ಮಾತಾಡಿದ ಸಚಿವ ನಾಗೇಶ್​, ಈ ಹಿಂದೆ ಕೊರೋನಾ ವರದಿಗೆ ಒಂದು‌ ಹಾಗು ಎರಡು ದಿನ ಕಾಯಬೇಕಿತ್ತು‌. ಆದರೆ ಇನ್ಮುಂದೆ ಒಂದು ದಿನಕ್ಕೆ 150 ಮಾದರಿಗಳ ಪರೀಕ್ಷೆ ವರದಿ ಇಲ್ಲೆ ಸಿಗಲಿದೆ. ಗಂಟೆಗೆ 12 ವರದಿಗಳನ್ನ ನೀಡುವ ಸಾಮರ್ಥ್ಯ ಇದೆ. ಹೀಗಾಗಿ ಸೋಂಕಿತರು ಪತ್ತೆಯಾದಲ್ಲಿ ಅತಿವೇಗವಾಗಿ ಸಂಪರ್ಕಿತರ ವರದಿಗಳನ್ನ ತರಿಸಿಕೊಂಡು ರೋಗ ಹರಡುವಿಕೆ ತಡೆಗಟ್ಟಲು ಇದು ಸಹಕಾರಿಯಾಗುತ್ತದೆ ಎಂದರು.


 

First published: