• Home
  • »
  • News
  • »
  • coronavirus-latest-news
  • »
  • ಇರಾನ್​ನಲ್ಲಿ ಕೊರೋನಾ ಸಾವಿನ ಸಂಖ್ಯೆ ಹೆಚ್ಚಳ; ಭಾರತೀಯರ ಸಹಾಯಕ್ಕೆ ತೆರಳಿದ ವೈದ್ಯರ ತಂಡ

ಇರಾನ್​ನಲ್ಲಿ ಕೊರೋನಾ ಸಾವಿನ ಸಂಖ್ಯೆ ಹೆಚ್ಚಳ; ಭಾರತೀಯರ ಸಹಾಯಕ್ಕೆ ತೆರಳಿದ ವೈದ್ಯರ ತಂಡ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮ ದೇಶದ ತಜ್ಞ ವೈದ್ಯರ ತಂಡ ಇಂದು ಇರಾನ್​ನತ್ತ ತೆರಳಿದೆ. ಕೊರೋನಾ ವೈರಸ್​ ಸ್ಕ್ರೀನಿಂಗ್​ಗಾಗಿ ಕೋಮ್​ನಲ್ಲಿ ಇಂದು ಸಂಜೆ ಭಾರತ ಮೊದಲ ಕ್ಲಿನಿಕ್ ತೆರೆಯಲಿದ್ದು, ತಪಾಸಣೆ ಬಳಿಕ ಅಲ್ಲಿರುವ ಭಾರತೀಯರನ್ನು ವಾಪಾಸ್ ಕರೆತರಲಾಗುವುದು.

  • Share this:

ನವದೆಹಲಿ (ಮಾ. 5): ಚೀನಾವನ್ನು ಹೊರತುಪಡಿಸಿದರೆ ಅತಿಹೆಚ್ಚು ಕೊರೋನಾ ವೈರಸ್​ ದಾಳಿಗೆ ಬಲಿಯಾಗಿರುವ ದೇಶವೆಂದರೆ ಇರಾನ್. ಇರಾನ್​ನಲ್ಲಿ ಈಗಾಗಲೇ 92 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿರುವ 2,922 ಜನರಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ಇರಾನ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಇರಾನ್​ನಲ್ಲಿರುವ ಭಾರತೀಯರ ಸಹಾಯಕ್ಕೆ ಭಾರತದ ವೈದ್ಯರ ತಂಡವೊಂದು ಧಾವಿಸಿದೆ.

ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್​. ಜೈಶಂಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇರಾನ್​ನಲ್ಲಿರುವ ಭಾರತೀಯರು ಆತಂಕಕ್ಕೆ ಒಳಗಾಗಬೇಡಿ. ನಿಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ನಾವು ಬದ್ಧರಾಗಿದ್ದೇವೆ. ನಮ್ಮ ದೇಶದ ತಜ್ಞ ವೈದ್ಯರ ತಂಡ ಇಂದು ಇರಾನ್​ನತ್ತ ಆಗಮಿಸುತ್ತಿದೆ. ಕೊರೋನಾ ವೈರಸ್​ ಸ್ಕ್ರೀನಿಂಗ್​ಗಾಗಿ ಕೋಮ್​​ನಲ್ಲಿ ನಾವು ಇಂದು ಸಂಜೆ ಭಾರತದ ಮೊದಲ ಕ್ಲಿನಿಕ್ ತೆರೆಯಲಿದ್ದೇವೆ. ತಕ್ಷಣದಿಂದಲೇ ಸ್ಕ್ರೀನಿಂಗ್ ಶುರುವಾಗಲಿದೆ. ಈ ಬಗ್ಗೆ ಇರಾನ್​ ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: CoronaVirus Cases: ಪೇಟಿಎಂ ಉದ್ಯೋಗಿಗೆ ಕೊರೋನಾ; ವಿಪ್ರೋ, ಟಿಸಿಎಸ್, ಎಚ್​ಸಿಎಲ್​ ಕಂಪನಿಗಳಲ್ಲೂ ಹೈ ಅಲರ್ಟ್​

'ಯಾವುದೇ ಕಾರಣಕ್ಕೂ ನಂಬಿಕೆ ಕಳೆದುಕೊಳ್ಳಬೇಡಿ. ನಮ್ಮ ಸಚಿವರು ಕೊರೋನಾ ವೈರಸ್​ ತೀವ್ರತೆಯ ಬಗ್ಗೆ ಗಮನವಿಟ್ಟಿದ್ದಾರೆ. ನಿಮ್ಮ ಕುಟುಂಬದವರ ಕಾಳಜಿಯನ್ನು ನಾವು ಕೂಡ ಅರ್ಥ ಮಾಡಿಕೊಂಡಿದ್ದೇವೆ' ಎಂದು ಕೂಡ ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಇರಾನ್​ಗೆ ತೆರಳಿರುವ ವೈದ್ಯರ ತಂಡ ಅಲ್ಲಿರುವ ಭಾರತೀಯರನ್ನು ತಪಾಸಣೆಗೊಳಪಡಿಸಿ, ವಾಪಾಸ್​ ಕರೆತರಲಾಗುವುದು.


ಇರಾನ್​ನಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್​ನಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಇರಾನ್​ನಲ್ಲಿ ಮಸೀದಿಗೆ ತೆರಳಿ ನಮಾಜ್ ಮಾಡದಂತೆ ಸೂಚನೆ ನೀಡಲಾಗಿದೆ. ಮಸೀದಿಗಳಲ್ಲಿ ನಮಾಜ್​ಗಾಗಿ ಸಾಕಷ್ಟು ಜನ ಸೇರುವುದರಿಂದ ಕೊರೋನಾ ವೈರಸ್ ಹರಡುವ ಅಪಾಯವಿದೆ ಎಂಬ ಕಾರಣಕ್ಕೆ ಅಲ್ಲಿನ ಸರ್ಕಾರ ಈ ಆದೇಶ ನೀಡಿದೆ.

First published: