ಕೊರೋನಾ ವೈರಸ್​ಗೆ ಜೀವವೇ ಇಲ್ಲ, ಹೀಗಾಗಿ ಅದನ್ನು ಕೊಲ್ಲೋದು ಕಷ್ಟ!; ಸಂಶೋಧನೆಯಲ್ಲಿ ಬಯಲಾಯ್ತು ಶಾಕಿಂಗ್​ ವಿಚಾರ

Coronavirus Outbreak: ಕೊರೋನಾ ವೈರಸ್​ ಒಮ್ಮೆ ಮನುಷ್ಯರ ದೇಹವನ್ನು ಹೊಕ್ಕರೆ ಒಂದೇ ಒಂದು ಗಂಟೆಯೊಳಗೆ 10 ಸಾವಿರ ವೈರಸ್​ಗಳನ್ನು ಸೃಷ್ಟಿಸುತ್ತದೆ. ಕೊರೋನಾ ವೈರಸ್​ಗಳು ನಮ್ಮ ದೇಹದ ಮೇಲ್ಭಾಗದಲ್ಲಿ 3 ಗಂಟೆ ಜೀವಂತವಾಗಿರುತ್ತವೆ

Sushma Chakre | news18-kannada
Updated:March 24, 2020, 10:05 AM IST
ಕೊರೋನಾ ವೈರಸ್​ಗೆ ಜೀವವೇ ಇಲ್ಲ, ಹೀಗಾಗಿ ಅದನ್ನು ಕೊಲ್ಲೋದು ಕಷ್ಟ!; ಸಂಶೋಧನೆಯಲ್ಲಿ ಬಯಲಾಯ್ತು ಶಾಕಿಂಗ್​ ವಿಚಾರ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ (ಮಾ. 24): ವಿಶ್ವದೆಲ್ಲೆಡೆ ಸಾವಿನ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ದಾಳಿಗೆ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಚೀನಾ, ಇಟಲಿ, ಇರಾನ್, ಜರ್ಮನಿ, ಅಮೆರಿಕ, ಭಾರತದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಈ ಕೊರೋನಾ ವೈರಸ್​ ಬಗ್ಗೆ ನಿಮಗೆಷ್ಟು ಗೊತ್ತು?

ವೈರಸ್​​ಗಳಲ್ಲಿ ಎರಡು ವಿಧಗಳಿರುತ್ತವೆ. ಕೆಲವು ವೈರಸ್​ಗೆ ಜೀವ ಇರುತ್ತದೆ. ಆ ವೈರಾಣುಗಳನ್ನು ಕೊಲ್ಲುವುದು ಕಷ್ಟವೇನಲ್ಲ. ಔಷಧಗಳಿಂದಲೇ ಆ ವೈರಸ್​ಗಳನ್ನು ನಾಶ ಮಾಡಬಹುದು. ಆದರೆ, ಇನ್ನು ಕೆಲವು ವೈರಸ್​ಗಳಿಗೆ ಜೀವ ಇರುವುದಿಲ್ಲ. ಅವುಗಳು ದೇಹವನ್ನು ಹೊಕ್ಕರೆ ನಾಶ ಮಾಡುವುದು ಕಷ್ಟ. ಈ ಕೊರೋನಾ ವೈರಸ್​ 2ನೇ ವರ್ಗಕ್ಕೆ ಸೇರಿದ ವೈರಾಣು.

ಕೊರೋನಾ ವೈರಸ್​ನಂತಹ ನಿರ್ಜೀವ ವೈರಸ್​ಗಳು ಮನುಷ್ಯರ ದೇಹದೊಳಗೆ ಹೊಕ್ಕ ಕೂಡಲೆ ತನ್ನ ಪ್ರಭಾವವನ್ನು ಅಲ್ಲಿ ಬಿತ್ತಿ, ಬೇರೊಬ್ಬರ ದೇಹವನ್ನು ಸೇರಲು ಸಿದ್ಧವಾಗಿರುತ್ತದೆ. ಇದರಿಂದಲೇ ಈ ಸಾಂಕ್ರಾಮಿಕ ರೋಗದಿಂದ ಸಮಸ್ಯೆಗಳು ಜಾಸ್ತಿ. ಇದು ಸರಪಳಿಯಂತೆ ಇರುವುದರಿಂದ ಒಬ್ಬರಿಂದ ಒಬ್ಬರಿಗೆ ಬಹಳ ಬೇಗ ಹರಡುತ್ತದೆ ಎಂದು ವಾಷಿಂಗ್ಟನ್​ ಪೋಸ್ಟ್​ ವರದಿ ಮಾಡಿದೆ.

ಇದನ್ನೂ ಓದಿ: ಒಂದಷ್ಟು ಮಂದಿ ಊರಿಗೆ ಹೊರಟರು, ಇಲ್ಲಿದ್ದವರು ಹಬ್ಬಕ್ಕೆ ಶಾಪಿಂಗ್ ಮಾಡಿದರು; ಕೊರೋನಾ ಬಗ್ಗೆ ಎಚ್ಚೆತ್ತಿಲ್ಲವೇ ಕರ್ನಾಟಕ?

ಈ ನಿರ್ಜೀವ ವೈರಸ್​ಗಳಿಗೆ ಸಂಶೋಧಕರು ಔಷಧ ಮತ್ತು ಚಿಕಿತ್ಸೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಲೇ ಇದ್ದಾರೆ. ಕೊರೋನಾ ವೈರಸ್​ ಈಗಾಗಲೇ 15 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 2002-2003ರಲ್ಲಿ ಸಾರ್ಸ್​ ಹೆಸರಿನ ವೈರಸ್ 650 ಜನರನ್ನು ಬಲಿ ತೆಗೆದುಕೊಂಡಿತ್ತು. ಅದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಕೊರೋನಾ ವೈರಸ್ ಜಗತ್ತಿನಲ್ಲಿ ಸಾವಿನ ಆತಂಕವನ್ನು ಸೃಷ್ಟಿಸಿದೆ.

ಶ್ವಾಸಕೋಶಕ್ಕೆ ದಾಳಿಯಿಟ್ಟರೆ ಕತೆ ಮುಗಿದಂತೆ:

ಕೊರೋನಾ ವೈರಸ್​ ಇರುವ ವ್ಯಕ್ತಿ ಕೆಮ್ಮುವುದರಿಂದ, ಸೀನುವುದರಿಂದ ಸುಲಭವಾಗಿ ಬೇರೊಬ್ಬರಿಗೆ ಹರಡುತ್ತದೆ. ಆದರೆ, ಕೆಲವು ರೋಗಿಗಳಲ್ಲಿ ಕೆಮ್ಮು ಅಥವಾ ಸೀನು, ನೆಗಡಿ ಕಾಣಿಸಿಕೊಳ್ಳುವುದಿಲ್ಲ. ಅಥವಾ ಈ ಲಕ್ಷಣಗಳು ಕಾಣಿಸಿಕೊಂಡರೂ ವೈರಸ್​ ನೇರವಾಗಿ ಶ್ವಾಸಕೋಶಕ್ಕೆ ದಾಳಿ ನಡೆಸುತ್ತದೆ. ಹೀಗಾದಾಗ, ಆ ವ್ಯಕ್ತಿ ಬದುಕುವ ಸಾಧ್ಯತೆಯೇ ಇಲ್ಲ. ಈ ಕಾರಣದಿಂದಲೇ ಈ ವೈರಸ್​ ಬಹಳ ಅಪಾಯಕಾರಿ ಎನ್ನಲಾಗುತ್ತಿದೆ.ಇದನ್ನೂ ಓದಿ: ಸರ್ಕಾರಿ ಬಂಗಲೆಯನ್ನೇ ಕ್ವಾರಂಟೈನ್​ಗೆ ಬಿಟ್ಟುಕೊಟ್ಟ ಬಿಹಾರದ ವಿಪಕ್ಷ ನಾಯಕ ತೇಜಸ್ವಿ ಯಾದವ್

ಕಳೆದ 100 ವರ್ಷಗಳಲ್ಲಿ ಕಾಣಿಸಿಕೊಂಡ ವೈರಸ್​ಗಳಲ್ಲಿ ಕೊರೋನಾ ವೈರಸ್​ ಅತ್ಯಂತ ಅಪಾಯಕಾರಿಯಾಗಿದೆ. 1918, 1957, 1968ರಲ್ಲಿ ಇದೇ ರೀತಿಯ ವೈರಸ್​ ಕಾಣಿಸಿಕೊಂಡಿದ್ದವು. ಆದರೆ, ಅವುಗಳು ಇಷ್ಟೊಂದು ಜನರನ್ನು ಬಲಿ ಪಡೆದಿರಲಿಲ್ಲ. ಸಾರ್ಸ್​, ಮೆರ್ಸ್​ ಮತ್ತು ಎಲೋಬಾ ವೈರಸ್​ಗಳು ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಡೆಡ್ಲಿ ವೈರಸ್​ಗಳಾಗಿದ್ದವು. ಆದರೆ, ಕೊರೋನಾ ಆ ಎಲ್ಲ ವೈರಸ್​ಗಳನ್ನೂ ಮೀರಿ ಅಪಾಯ ತಂದೊಡ್ಡಿದೆ.

ಪ್ರಾಣಿಗಳಿಂದಲೇ ಪತ್ತೆಯಾದ ವೈರಸ್​ಗಳಿವು:

ಈ ಎಲ್ಲ ವೈರಸ್​ಗಳಲ್ಲೂ ಒಂದು ಸಾಮಾನ್ಯ ಅಂಶವಿದೆ. ಅದೇನೆಂದರೆ, ಈ ವೈರಸ್​ಗಳೆಲ್ಲವೂ ಮೊದಲು ಪ್ರಾಣಿಗಳ ದೇಹದಲ್ಲಿ ಪತ್ತೆಯಾಗಿ, ನಂತರ ಮನುಷ್ಯರಲ್ಲಿ ಕಾಣಿಸಿಕೊಂಡಿವೆ. ಸಾರ್ಸ್​ ವೈರಸ್​ ಬಾವಲಿಯಿಂದ ಬಂದದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೊರೋನಾ ವೈರಸ್​ ಕೂಡ ಸತ್ತ ಬಾವಲಿಯ ದೇಹದಿಂದಲೇ ಉತ್ಪತ್ತಿಯಾಗಿರುವುದನ್ನು ವೈದ್ಯಲೋಕ ಖಚಿತಪಡಿಸಿದೆ.

ಕೊರೋನಾ ವೈರಸ್ ವಿರುದ್ಧ ಜಾಗತಿಕ ಮಟ್ಟದ ಹೋರಾಟ ಮುಂದುವರೆದಿದ್ದು, ಸಾರ್ಸ್-ಸಿಒವಿ-2, ಕೊರೋನಾ ವೈರಸ್​ಗಳು ನಮ್ಮ ದೇಹದ ಮೇಲ್ಭಾಗದಲ್ಲಿ (ಮುಖ, ಕೈಗಳ ಮೇಲೆ) 3 ಗಂಟೆಗಳವರೆಗೂ ಜೀವಂತವಾಗಿರುತ್ತವೆ. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಲಾಸ್ ಏಂಜಲಿಸ್ ಸಂಶೋಧಕರೂ ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದು, ಸಾರ್ಸ್-ಸಿಒವಿ-2 ತಾಮ್ರದ ಮೇಲೆ 4 ಗಂಟೆಗಳ ಕಾಲ ಜೀವಂತವಿರುತ್ತದೆ. ಹಲಗೆಯ ಮೇಲೆ 24 ಗಂಟೆ ಜೀವಂತವಿರುತ್ತವೆ. ಪ್ಲಾಸ್ಟಿಕ್ ಹಾಗೂ ಉಕ್ಕಿನ ಮೇಲೆ 2-3 ದಿನಗಳ ಕಾಲ ಸ್ಥಿರವಾಗಿರುತ್ತವೆ ಎಂಬುದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ವರದಿಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಕೊರೋನಾ ಆತಂಕ; ಒಂದೇ ಆಸ್ಪತ್ರೆಯಲ್ಲಿದ್ದರೂ ಸಾಯುವ ಮುನ್ನ ಅಪ್ಪನ ಮುಖ ನೋಡಲಾಗಲಿಲ್ಲ!

ವಿಜ್ಞಾನಿಗಳ ಪ್ರಕಾರ ಕೋವಿಡ್-19, ಸಾರ್ಸ್ ವೈರಾಣುಗಳ ಸೋಂಕು ತಗುಲಿದ ವ್ಯಕ್ತಿಗೆ ರೋಗ ಲಕ್ಷಣಗಳು ಗೋಚರಿಸುವ ಮುನ್ನವೇ ಆತನಿಂದ ಬೇರೆಯವರಿಗೂ ಹರಡುವ ಸಾಧ್ಯತೆ ಇರುತ್ತವೆ. ವೈರಸ್ ಸಾಮೂಹಿಕವಾಗಿ ಹರಡುವ ಕುರಿತಾಗಿ ಹೊಸ ಮಾಹಿತಿಗಳನ್ನು ಅಧ್ಯಯನ ಒಂದು ಬಹಿರಂಗಪಡಿಸಿದ್ದು ಈ ವರದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್​ನಲ್ಲಿ (NEJM) ಪ್ರಕಟವಾಗಿದೆ.

ಇಲ್ಲಿದೆ ಶಾಕಿಂಗ್ ವಿಷಯ!:

ಕೊರೋನಾ ವೈರಸ್​ ಒಮ್ಮೆ ಮನುಷ್ಯರ ದೇಹವನ್ನು ಹೊಕ್ಕರೆ ಒಂದೇ ಒಂದು ಗಂಟೆಯೊಳಗೆ 10 ಸಾವಿರ ವೈರಸ್​ಗಳನ್ನು ಸೃಷ್ಟಿಸುತ್ತದೆ. ಅದಾಗಿ ಕೆಲವೇ ದಿನಗಳಲ್ಲಿ ಸೋಂಕಿತ ವ್ಯಕ್ತಿಯ ದೇಹದಲ್ಲಿರುವ ರಕ್ತದಲ್ಲಿ ಈ ವೈರಸ್​ ಲಕ್ಷಾಂತರ ವೈರಸ್​ಗಳಾಗಿ ಪರಿವರ್ತನೆಯಾಗುತ್ತದೆ. ಆ ವೇಳೆ ಸೋಂಕಿತನ ದೇಹದಲ್ಲಿ ಜ್ವರ, ಕೆಮ್ಮು, ಉಸಿರಾಟದ ತೊಂದರೆಗಳು ಶುರುವಾಗುತ್ತವೆ. ಈ ವೈರಸ್​ ದೇಹದಲ್ಲಿನ ಬಿಳಿ ರಕ್ತಕಣಗಳನ್ನು ನಾಶ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಕೆಲವು ವೈದ್ಯರ ಪ್ರಕಾರ, ವೈರಸ್​ಗಳು ನಮ್ಮನ್ನು ಕೊಲ್ಲಲು ನಮ್ಮ ದೇಹದೊಳಗೆ ಸೇರಿಕೊಳ್ಳುವುದಿಲ್ಲ. ಅವುಗಳ ಸಂತಾನವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ದೇಹದೊಳಗೆ ಪ್ರವೇಶ ಮಾಡುತ್ತವೆ. ಹೀಗಾಗಿ, ಬಹಳ ಹೊತ್ತು ಕುಳಿತಲ್ಲೇ ಕೆಲಸ ಮಾಡುವುದಕ್ಕಿಂತ ಅಥವಾ ಒಂದೇ ಕಡೆ ಕುಳಿತಿರುವುದಕ್ಕಿಂತ ಆಗಾಗ ಎದ್ದು ಓಡಾಡುತ್ತಿದ್ದರೆ ಆರೋಗ್ಯವಾಗಿರಬಹುದು. ಯಾವುದೇ ಚಟುವಟಿಕೆಗಳು ಇಲ್ಲದೆ ದೇಹದಲ್ಲಿ ವೈರಸ್​ಗಳು ವಾಸ್ತವ್ಯ ಹೂಡುವುದು ಹೆಚ್ಚು ಎಂದು ಅಮೆರಿಕದ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಇಟಲಿಯಿಂದ 263 ಭಾರತೀಯರನ್ನು ಕರೆತಂದ ಮಹಿಳಾ ಪೈಲಟ್; ಸ್ವಾತಿ ರಾವಲ್​ಗೆ ಮೆಚ್ಚುಗೆಯ ಸುರಿಮಳೆ

 
First published: March 24, 2020, 10:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading