• Home
  • »
  • News
  • »
  • coronavirus-latest-news
  • »
  • ಕೊರೊನಾ ವೈರಸ್​; ಜಪಾನ್​ನಿಂದ ಕನ್ನಡಿಗ ಅಭಿಷೇಕ್ ಸೇರಿ 119 ಭಾರತೀಯರು ತಾಯ್ನಾಡಿಗೆ ವಾಪಾಸ್​

ಕೊರೊನಾ ವೈರಸ್​; ಜಪಾನ್​ನಿಂದ ಕನ್ನಡಿಗ ಅಭಿಷೇಕ್ ಸೇರಿ 119 ಭಾರತೀಯರು ತಾಯ್ನಾಡಿಗೆ ವಾಪಾಸ್​

ಜಪಾನ್​ನಿಂದ ವಿಮಾನದಲ್ಲಿ ಭಾರತಕ್ಕೆ ಮರಳಿದ ಭಾರತೀಯರ ಸೆಲ್ಫೀ

ಜಪಾನ್​ನಿಂದ ವಿಮಾನದಲ್ಲಿ ಭಾರತಕ್ಕೆ ಮರಳಿದ ಭಾರತೀಯರ ಸೆಲ್ಫೀ

Coronavirus: ಕೊರೋನಾ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಜಪಾನ್​ನ ಹಡಗಿನಲ್ಲಿದ್ದ ಕನ್ನಡಿಗ ಅಭಿಷೇಕ್ ಸೇರಿ 119 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಇಂದು ಮುಂಜಾನೆ ಅವರೆಲ್ಲರೂ ದೆಹಲಿಗೆ ಬಂದಿಳಿದಿದ್ದಾರೆ.

  • Share this:

ನವದೆಹಲಿ (ಫೆ. 27): ಮಾರಣಾಂತಿಕ ಕೊರೊನಾ ವೈರಸ್ ಭೀತಿ ವಿಶ್ವದ ಅನೇಕ ದೇಶಗಳನ್ನು ಆವರಿಸಿದೆ. ಜಪಾನ್​ನ ಡೈಮಂಡ್​ ಪ್ರಿನ್ಸೆಸ್​ ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿ, ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಜಪಾನಿನ ಯುಕೋಮಾದಲ್ಲಿ ಹಡಗನ್ನು ತಡೆಹಿಡಿಯಲಾಗಿತ್ತು. ಈ ಹಡಗಿನಲ್ಲಿದ್ದ ಕನ್ನಡಿಗ ಅಭಿಷೇಕ್ ಸೇರಿ 119 ಭಾರತೀಯರನ್ನು ಜಪಾನ್ ಸರ್ಕಾರ ಬಿಡುಗಡೆ ಮಾಡಿದೆ. ಇಂದು ಬೆಳಗ್ಗೆ 119 ಮಂದಿ ದೆಹಲಿಗೆ ಆಗಮಿಸಿದ್ದಾರೆ.


ಜಪಾನ್​ನ ಡೈಮಂಡ್​ ಪ್ರಿನ್ಸಸ್​ ಹಡಗಿನಲ್ಲಿ 138 ಭಾರತೀಯರು ಸೇರಿ ಒಟ್ಟು 3,700 ಜನ ಪ್ರಯಾಣಿಸುತ್ತಿದ್ದರು. ಈ ಹಡಗಿನಲ್ಲಿದ್ದ 119 ಭಾರತೀಯರು ಹಾಗೂ ಶ್ರೀಲಂಕನ್ನರು, ನೇಪಾಳೀಯರು, ದಕ್ಷಿಣ ಆಫ್ರಿಕಾ, ಪೆರುವಿನ ಐವರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂಬುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವಾಪಾಸ್ ಸ್ವದೇಶಕ್ಕೆ ಕಳುಹಿಸಲಾಗಿದೆ.ಈ ಹಡಗಿನಲ್ಲಿದ್ದ ಕೆಲವರಿಗೆ ಕೊರೊನಾ ಸೋಂಕು ತಗುಲಿತ್ತು. ಹಡಗಿನ ಎಲ್ಲ ಪ್ರಯಾಣಿಕರಿಗೂ ಕೊರೊನಾ ಸೋಂಕು ತಗುಲುವ ಭೀತಿ ಎದುರಾಗಿದ್ದರಿಂದ ಆದಷ್ಟು ಬೇಗ ತಮ್ಮನ್ನು ಅಲ್ಲಿಂದ ಕರೆದುಕೊಂಡು ಹೋಗುವಂತೆ ಪ್ರಯಾಣಿಕರು ಪಟ್ಟು ಹಿಡಿದಿದ್ದರು. ಅದರಂತೆ ಕೊನೆಗೂ 119 ಭಾರತೀಯರು ಸುರಕ್ಷಿತವಾಗಿ ತಾಯ್ನಾಡನ್ನು ತಲುಪಿದ್ದಾರೆ.


ಕಾರವಾರದ ಪದ್ಮನಾಭನಗರದ ಅಭಿಷೇಕ್ ಕೂಡ ಕೊರೊನಾ ವೈರಸ್​ ಪೀಡಿತ ಹಡಗಿನಲ್ಲಿದ್ದರು. ಅಭಿಷೇಕ್ ಕೂಡ ಸುರಕ್ಷಿತವಾಗಿ ಜಪಾನ್​ನಿಂದ ವಾಪಾಸಾಗಿದ್ದು, 5 ದಿನಗಳ ನಂತರ ಕಾರವಾರಕ್ಕೆ ಆಗಮಿಸಲಿದ್ದಾರೆ. ಕಾರವಾರದ ಅಭಿಷೇಕ್ ಕಳೆದ 3 ತಿಂಗಳಿಂದ ಡೈಮಂಡ್​ ಪ್ರಿನ್ಸಸ್​ ಹಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ದೆಹಲಿಗೆ ಬಂದಿಳಿದ 119 ಭಾರತೀಯರನ್ನು ವೈದ್ಯಕೀಯ ಪರೀಕ್ಷೆಗಾಗಿ ಹರಿಯಾಣಕ್ಕೆ ಕರೆದೊಯ್ಯಲಾಗುವುದು. ಅಲ್ಲಿಂದ 5 ದಿನಗಳ ಬಳಿಕ ಎಲ್ಲರೂ ತಮ್ಮ ಮನೆಗೆ ವಾಪಾಸಾಗಲಿದ್ದಾರೆ.


ಇದನ್ನೂ ಓದಿ: ಎಚ್​.ಎಸ್. ದೊರೆಸ್ವಾಮಿ ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆಂದು ಗೊತ್ತಿದೆ; ಫೇಸ್​ಬುಕ್​ನಲ್ಲಿ ಯತ್ನಾಳ್ ವಾಗ್ದಾಳಿ


ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರದ ವಿದೇಶಾಂಗ ಸಚಿವ ಎಸ್​. ಜೈಶಂಕರ್, 'ಕೆಲವು ನಿಮಿಷಗಳ ಹಿಂದಷ್ಟೇ ಟೋಕಿಯೋದಿಂದ ಏರ್ ಇಂಡಿಯಾ ವಿಮಾನದಲ್ಲಿ 119 ಭಾರತೀಯರು ದೆಹಲಿಗೆ ಬಂದಿಳಿದಿದ್ದಾರೆ. ಅವರ ಜೊತೆಗೆ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ, ಪೆರುವಿನ ಐವರು ಕೂಡ ಬಂದಿಳಿದಿದ್ದಾರೆ. ಅವರೆಲ್ಲರನ್ನೂ ಸುರಕ್ಷಿತವಾಗಿ ವಾಪಾಸ್ ಕಳುಹಿಸಿದ ಜಪಾನ್​ನ ಅಧಿಕಾರಿಗಳಿಗೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ.ಕೊರೋನಾ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಹಡಗಿನಲ್ಲಿದ್ದ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಹಾಗೂ ಪೆರು ರಾಷ್ಟ್ರಗಳ ಐವರು ವಿದೇಶಿಯರು ಹಾಗೂ 119 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾಗಿರುವ ಎಲ್ಲ ಭಾರತೀಯರು ಇಂದು ಬೆಳಿಗ್ಗೆ 4.30ರ ಸುಮಾರಿಗೆ ರಾಜಧಾನಿ ದೆಹಲಿಗೆ ಬಂದಿಳಿದಿದ್ದಾರೆ.


ಇದನ್ನೂ ಓದಿ: ಕೊರೊನಾ ಎಫೆಕ್ಟ್​; ಮಾರಕ ವೈರಸ್​ ಎಷ್ಟೆಲ್ಲಾ ದೇಶಗಳಲ್ಲಿ ಹಬ್ಬಿದೆ ಮತ್ತು ಇದರಿಂದ ಭಾರತಕ್ಕೇನು ಲಾಭ? ಏನು ನಷ್ಟ?


ಚೀನಾದಲ್ಲಿ ಹೊಸದಾಗಿ 29 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 2,744ಕ್ಕೆ ಏರಿಕೆಯಾಗಿದೆ. ಇದುವರೆಗೂ ಒಟ್ಟಾರೆ 78,500 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇಟಲಿ, ಕೆನಡಾ, ದಕ್ಷಿಣ ಕೊರಿಯಾ ಸೇರಿ ಅನೇಕ ದೇಶಗಳಲ್ಲಿ ಕೊರೊನಾ ವೈರಸ್​ನ ಭೀತಿ ಹೆಚ್ಚಾಗಿದೆ.

Published by:Sushma Chakre
First published: