ಸಕ್ಕರೆನಾಡಲ್ಲೂ ಕರೋನಾ ಆತಂಕ, ಮಂಡ್ಯ ಮಿಮ್ಸ್ ನಲ್ಲಿ ಕೊರೋನಾಗೆ ವಿಶೇಷ ವಾರ್ಡ್ ಆರಂಭ

Coronavirus: ಮಂಡ್ಯ ಮೂಲದ ಚೀನಾ ವಿದ್ಯಾರ್ಥಿನಿ ಮಂಡ್ಯಕ್ಕೆ ವಾಪಸ್ಸು ಬಂದ ಬೆನ್ನಲ್ಲಿ  ಇದೀಗ ಜಿಲ್ಲೆಯ ಮಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಪ್ರಕರಣಕ್ಕಾಗಿಯೇ ವಿಶೇಷ ವಾರ್ಡ್ ತೆರೆಯಲಾಗಿದೆ.‌ ಈ ವಾರ್ಡ್​ನಲ್ಲಿ 5 ಹಾಸಿಗೆ ಮೀಸಲಿಡಲಾಗಿದ್ದು ಬೇಕಾದ ಅಗತ್ಯ ಸಿದ್ದತೆ‌ ಮಾಡಿಕೊಳ್ಳಲಾಗಿದೆ.

news18-kannada
Updated:February 4, 2020, 5:41 PM IST
ಸಕ್ಕರೆನಾಡಲ್ಲೂ ಕರೋನಾ ಆತಂಕ, ಮಂಡ್ಯ ಮಿಮ್ಸ್ ನಲ್ಲಿ ಕೊರೋನಾಗೆ ವಿಶೇಷ ವಾರ್ಡ್ ಆರಂಭ
ಮಂಡ್ಯ ಜಿಲ್ಲೆಯ ಸಾಂದರ್ಭಿಕ ಚಿತ್ರ
  • Share this:
ಮಂಡ್ಯ: ಚೀನಾದಲ್ಲಿ ಮಹಾಮಾರಿಯಾಗಿ ಆತಂಕ ಉಂಟು ಮಾಡ್ತಿರೋ ಕೊರೋನಾ ವೈರಸ್ ಇದೀಗ ಪ್ರಪಂಚದಾದ್ಯಂತ‌ ಆತಂಕ ಸೃಷ್ಟಿ ಮಾಡಿದೆ. ಚೀನಾದಿಂದ ಹರಡುತ್ತಿದೆ ಎನ್ನಲಾದ ಈ ವೈರಸ್ ಬಗ್ಗೆ ವಿಶ್ವದ ಎಲ್ಲಾ ದೇಶಗಳು ಅಲರ್ಟ್ ಆಗಿದೆ. ಇದರ ನಡುವೆ ಭಾರತದಲ್ಲೂ ಕೂಡ ಹಲವೆಡೆ ಈ ವೈರಸ್ ಪ್ರಕರಣ ಕಂಡು ಬಂದಿದ್ದು, ಭಾರತದಲ್ಲೂ ಆತಂಕ ಸೃಷ್ಟಿಯಾಗಿದೆ. ಈ ನಡುವೆ ಸಕ್ಕರೆ ಜಿಲ್ಲೆ ಮಂಡ್ಯದಲ್ಲೂ ಕೂಡ ಚೀನಾದ  ಕೊರೋನಾ ವೈರಸ್​ನ ಆತಂಕ ಮೂಡಿದೆ.

ಸಕ್ಕರೆನಾಡು ಮಂಡ್ಯದಲ್ಲೂ ಕೂಡ ಜನರು ಇದೀಗ ಕೊರೋನಾ ವೈರಸ್ ನ ಆತಂಕದಲ್ಲಿದ್ದಾರೆ. ಚೈನಾದಲ್ಲಿ ಮೆಡಿಕ ಲ್ ಓದುತ್ತಿದ್ದ ಮಂಡ್ಯ ಮೂಲದ ಯುವತಿ ಇದೀಗ ಅಲ್ಲಿನ‌ ವಾತಾವರಣ ನೋಡಿ ಮಂಡ್ಯಕ್ಕೆ ವಾಪಸ್ಸು ಬಂದಿದ್ದಾಳೆ. ವಾಪಸ್ಸು ಬಂದ ಆ ವಿದ್ಯಾರ್ಥಿನಿಗೆ ಸಾಕಷ್ಟು ಪರೀಕ್ಷೆ ಮಾಡಿ ಇಲ್ಲಿಗೆ ಕಳಿಸಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದೆ. ಇದರಂತೆ ಮಂಡ್ಯ ಜಿಲ್ಲಾ ಆರೋಗ್ಯ ಇಲಾಖೆಗೆ ಆ ವಿದ್ಯಾರ್ಥಿನಿಯ ಮೇಲೆ ನಿಗಾ ಇರಿಸಿದ್ದು ಪರೀಕ್ಷೆ ಮಾಡಿ ೧೫ ದಿನ‌ಮನೆಯಿಂದ ಹೊರ ಬರದಂತೆ ತಿಳಿಸಿ ಕಳಿಸಿದೆ.

ಅಲ್ಲದೇ ಆಕೆಗೆ ಆ ತರಹ ದ ಯಾವುದೇ ಸೋಂಕು ತಗುಲಿಲ್ಲ, ಯಾರು  ಆತಂಕ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆದರೂ ಜನರಲ್ಲಿ ಮಾತ್ರ ಇನ್ನೂ ಆತಂಕ ಮುಂದುವರೆದಿದ್ದು, ಜಿಲ್ಲಾಡಳಿತ ಜನರಿಗೆ ಆತಂಕಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದೆ.

ಇನ್ನು ಮಂಡ್ಯ ಮೂಲದ ಚೀನಾ ವಿದ್ಯಾರ್ಥಿನಿ ಮಂಡ್ಯಕ್ಕೆ ವಾಪಸ್ಸು ಬಂದ ಬೆನ್ನಲ್ಲಿ  ಇದೀಗ ಜಿಲ್ಲೆಯ ಮಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಪ್ರಕರಣಕ್ಕಾಗಿಯೇ ವಿಶೇಷ ವಾರ್ಡ್ ತೆರೆಯಲಾಗಿದೆ.‌ ಈ ವಾರ್ಡ್​ನಲ್ಲಿ 5 ಹಾಸಿಗೆ ಮೀಸಲಿಡಲಾಗಿದ್ದು ಬೇಕಾದ ಅಗತ್ಯ ಸಿದ್ದತೆ‌ ಮಾಡಿಕೊಳ್ಳಲಾಗಿದೆ.

ಓರ್ವ ನರ್ಸ್, ಓರ್ವ ವೈದ್ಯರನ್ನು ತುರ್ತು ಚಿಕಿತ್ಸೆಗೆ ನಿಯೋಜನೆ ಕೂಡ ಮಾಡಿಲಾಗಿದೆ. ಕೊರೋನಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಡ್ಯದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಸಿದ್ದು ಸರ್ಕಾರ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು‌, ಏರ್ಪೋರ್ಟ್ ಸೇರಿದಂತೆ ಬಂದರು‌ ಬಳಿ‌ ಹೊರಗಿನಿಂದ ಬಂದವರ ತಪಾಸಣೆ ಮಾಡ್ತಿರೋದಾಗಿ‌ ತಿಳಿಸಿದ್ದಾರೆ.

ಇದನ್ನೂ ಓದಿ: ಚೀನಾ ದೇಶವೊಂದನ್ನೇ ಅಲ್ಲ ರಾಜ್ಯದ ಮೆಣಸಿನಕಾಯಿ ಬೆಳೆಗಾರರನ್ನೂ ಕಾಡುತ್ತಿದೆ ಕೊರೋನಾ ವೈರಸ್​

ಸದ್ಯ 44 ಸೋಂಕಿನ‌ ಪ್ರಕರಣಗಳು ಬೆಳಕಿಗೆ ಬಂದಿದೆ. ಇದರಲ್ಲಿ 26 ಜನರಿಗೆ ನೆಗೆಟೀವ್ ಬಂದಿದೆ. ಉಳಿದವರ ಮಾಹಿತಿ‌ ಪಡೆದುಕೊಳ್ತಿದ್ದು ಯಾವುದೇ ಪಾಸಿಟೀವ್ ಪ್ರಕರಣ ಬಂದಿಲ್ಲ‌ ಎಂದು ಶ್ರೀರಾಮುಲು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನಾಗೆ ವಿಶೇಷ ವಾರ್ಡ್ ತೆರೆಯಲು ರಾಮುಲು ಸೂಚಿಸಿದ್ದಾರೆ.ಇದನ್ನೂ ಓದಿ: ಕೊರೋನಾ ವೈರಸ್​ ಹರಡುವುದು ಹೇಗೆ, ಇದರ ಲಕ್ಷಣಗಳೇನು?; ಇಲ್ಲಿದೆ ಸಂಪೂರ್ಣ ಮಾಹಿತಿ

ಒಟ್ಟಾರೆ ಸಕ್ಕರೆನಾಡು ಮಂಡ್ಯದಲ್ಲೂ ಇದೀಗ ಕೊರೋನಾ ವೈರಸ್ ನ ಆತಂಕ ಜನರಲ್ಲಿ ಮನೆ ಮಾಡಿದೆ.‌ ಇದುವರೆಗೂ ಯಾವುದೇ ಅಂತಹ ಪ್ರಕರಣ ಪತ್ತೆಯಾಗಿಲ್ಲದಿರೋದು ಒಂದುಕಡೆ ಜನರಲ್ಲಿ ಕೊಂಚ ಆತಂಕ ಕಡಿಮೆ ಮಾಡಿದ್ರೆ, ಚೀನಾದಿಂದ ಮಂಡ್ಯಕ್ಕೆ ವಿದ್ಯಾರ್ಥಿನಿಯ ಆಗಮನ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ವಿಶೇಷ ವಾರ್ಡ್ ತೆರೆಯುವಿಕೆ ಸಹಜವಾಗಿಯೆ ಜನರಲ್ಲಿ ಆತಂಕ ಸೃಷ್ಟಿಸಿರೋದು ಸುಳ್ಳಲ್ಲ.
First published:February 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading