ಹರಿಯಾಣದಲ್ಲಿ ಆಸ್ಪತ್ರೆಯಿಂದ ತಪ್ಪಸಿಕೊಳ್ಳಲು ಹೋಗಿ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು

ಇಂದು ಮುಂಜಾನೆ ಅವರು ತಪ್ಪಿಸಿಕೊಳ್ಳಲು ಯತ್ನಿಸಿ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಕರ್ನಾಲ್​ನ ಪೊಲೀಸ್ ಇನ್ಸ್‌ಪೆಕ್ಟರ್ ಸಂಜೀವ್ ಗೌರ್ ತಿಳಿಸಿದರು.

news18-kannada
Updated:April 6, 2020, 5:06 PM IST
ಹರಿಯಾಣದಲ್ಲಿ ಆಸ್ಪತ್ರೆಯಿಂದ ತಪ್ಪಸಿಕೊಳ್ಳಲು ಹೋಗಿ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ವೈರಸ್​​ ಸೋಂಕು ತಗುಲಿರಬಹುದು ಎನ್ನುವ ಅನುಮಾನಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ 55 ವರ್ಷದ ವ್ಯಕ್ತಿಯೊಬ್ಬಯೊಬ್ಬ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಆಸ್ಪತ್ರೆಯ ಆರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಇಂದು  ಹರಿಯಾಣದ ಕಲ್ಪನಾ ಚಾವ್ಲಾ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಣಿಪತ್‌ ಜಿಲ್ಲೆಯ ಈತ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಿಂದ ತಪ್ಪಿಸಿಕೊಳ್ಳಲು ಬೆಡ್​ಶೀಟ್, ಪಾಲಿಥೀನ್ ಶೀಟ್, ಶರ್ಟ್ ಇತ್ಯಾದಿಗಳನ್ನು ಕಟ್ಟಿ ಹಗ್ಗದ ರೀತಿ ಮಾಡಿಕೊಂಡಿದ್ದನೆನ್ನಲಾಗಿದೆ. ಆದರೆ, ಆತ ಕೆಳಗಿಳಿಯುವಾಗ ಗಂಟು ಬಿಚ್ಚಿಕೊಂಡು ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

ಕೊರೋನಾ ಸೋಂಕಿನ ಅನುಮಾನದ ಮೇಲೆ ವ್ಯಕ್ತಿಯನ್ನು ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ಅವರು ತಪ್ಪಿಸಿಕೊಳ್ಳಲು ಯತ್ನಿಸಿ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಕರ್ನಾಲ್​ನ ಪೊಲೀಸ್ ಇನ್ಸ್‌ಪೆಕ್ಟರ್ ಸಂಜೀವ್ ಗೌರ್ ತಿಳಿಸಿದರು.

ವ್ಯಕ್ತಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದನ್ನು ಆಸ್ಪತ್ರೆಯ ಸಿಬ್ಬಂದಿ ಯಾರೂ ಗಮನಿಸಲಿಲ್ಲವೇ ಎಂದು ಕೇಳಿದಾಗ, ಪೊಲೀಸ್ ಅಧಿಕಾರಿ, ಪ್ರತ್ಯೇಕ ವಾರ್ಡ್‌ನಲ್ಲಿ, ಅವರನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿತ್ತು ಮತ್ತು ಆ ಸಮಯದಲ್ಲಿ ಅವರು ಏನು ಮಾಡುತ್ತಿದ್ದಾರೆಂದು ಯಾರೂ ಗಮನಿಸಲಿಲ್ಲ ಎಂದರು.

ಇದನ್ನೂ ಓದಿ :  LY Suhas - ಯೋಗಿ ನಾಡಲ್ಲಿ ಕನ್ನಡಿಗನ ಪ್ರತಾಪ; ಡಿಸಿಯಾಗಿಯೂ ಸೈ, ಕೊರೋನಾ ಬೇಟೆಗೂ ಜೈ

ಮೃತ ವ್ಯಕ್ತಿಯ ಕೊರೋನಾ ವೈರಸ್ ಪರೀಕ್ಷಾ ವರದಿ ಬಂದಿದೆಯೇ ಎಂದು ಕೇಳಿದಾಗ, ಗೌರ್ ಅವರು ಪ್ರಾಥಮಿಕ ವರದಿ ನೆಗೆಟಿವ್​ ಬಂದಿತ್ತು ಆದರೆ, ಅಂತಿಮ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದರು.
First published: April 6, 2020, 5:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading