ಫಿಲಿಫೈನ್ಸ್​​ನಲ್ಲಿ 8 ಕರ್ನಾಟಕ ವಿದ್ಯಾರ್ಥಿಗಳು; ತವರಿಗೆ ಮರಳಲು ಹಾತೊರೆಯುತ್ತಿರುವ ಕನ್ನಡಿಗರು

Coronavirus latest News Updates: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ಪ್ರತೀಕ ಬಿದರಿ, ಚಿತ್ರದುರ್ಗ ಜಿಲ್ಲೆಯ ನಿಶ್ಚಿತ್​, ಚಂದನಾ​, ನಿಖಿತಾ, ತುಮಕೂರು ಜಿಲ್ಲೆಯ ರಕ್ಷತ್, ಬೆಂಗಳೂರಿನ ಜಿತೇಂದ್ರ, ಮಂಥನ್, ಮೇಘನಾ, ಹಾವೇರಿಯ ನಿತೇಶ್,ಗದಗನ ಮನೋಜ್, ಬೆಳಗಾವಿಯ ಆದಿತ್ಯ, ಶಿವಮೊಗ್ಗದ ಅನುಶ್ರೀ ಗೃಹ ಬಂಧನದಲ್ಲಿರುವ ವಿದ್ಯಾರ್ಥಿಗಳು.

ಕರ್ನಾಟಕದ ವಿದ್ಯಾರ್ಥಿಗಳು

ಕರ್ನಾಟಕದ ವಿದ್ಯಾರ್ಥಿಗಳು

 • Share this:
  ದಾವಣಗೆರೆ(ಮಾ.19): ವಿಶ್ವಾದ್ಯಂತ ಕೊರೋನಾ ಆರ್ಭಟ ಹೆಚ್ಚಾಗಿದ್ದು, ಈವರೆಗೆ ಸುಮಾರು 8 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 170 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಮೂರು ಮಂದಿ ಬಲಿಯಾಗಿದ್ದಾರೆ. ಇನ್ನು ಅನೇಕ ಸಂಖ್ಯೆಯ ಭಾರತೀಯರು ವಿದೇಶಗಳಲ್ಲಿ ಇದ್ದು, ಅವರು ಆತಂಕಕ್ಕೀಡಾಗಿದ್ದಾರೆ. ಫಿಲಿಫೈನ್ಸ್​​​ನಲ್ಲಿ ಕರ್ನಾಟಕದ ಎಂಟು ಜನ ವೈದ್ಯಕೀಯ ವಿದ್ಯಾರ್ಥಿಗಳು ಗೃಹ ಬಂಧನದಲ್ಲಿ ಸಿಲುಕಿಕೊಂಡಿದ್ದಾರೆ. 

  ಹೌದು, ಕೊರೋನಾ ಭೀತಿ ಹಿನ್ನೆಲೆ, ಫಿಲಿಫೈನ್ಸ್​​​ನಲ್ಲಿರುವ ಕರ್ನಾಟಕದ 8 ಮಂದಿ ವಿದ್ಯಾರ್ಥಿಗಳನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ಪ್ರತೀಕ ಬಿದರಿ, ಚಿತ್ರದುರ್ಗ ಜಿಲ್ಲೆಯ ನಿಶ್ಚಿತ್​, ಚಂದನಾ​, ನಿಖಿತಾ, ತುಮಕೂರು ಜಿಲ್ಲೆಯ ರಕ್ಷತ್, ಬೆಂಗಳೂರಿನ ಜಿತೇಂದ್ರ, ಮಂಥನ್, ಮೇಘನಾ, ಹಾವೇರಿಯ ನಿತೇಶ್,ಗದಗನ ಮನೋಜ್, ಬೆಳಗಾವಿಯ ಆದಿತ್ಯ, ಶಿವಮೊಗ್ಗದ ಅನುಶ್ರೀ ಗೃಹ ಬಂಧನದಲ್ಲಿರುವ ವಿದ್ಯಾರ್ಥಿಗಳು.

  ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆ; ವಿಶ್ವಾದ್ಯಂತ 8,000ಕ್ಕೂ ಹೆಚ್ಚು ಬಲಿ

  ಸದ್ಯ ಗೃಹ ಬಂಧನದಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳು ಸ್ವದೇಶಕ್ಕೆ ಬರಲು ವಿಮಾನವಿಲ್ಲದೇ ಪರದಾಡುತ್ತಿದ್ದಾರೆ. ನಾಲ್ಕು ಜನ ಯುವತಿಯರು ಮತ್ತು ನಾಲ್ಕು ಜನ ಯುವಕರು ಕೊರೋನಾ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

  ಈ ಎಂಟು ಜನ ವಿದ್ಯಾರ್ಥಿಗಳು ಕಳೆದ ಎರಡು ತಿಂಗಳ ಹಿಂದೆ ಎಂಬಿಬಿಎಸ್ ಗೆ ಪ್ರವೇಶ ಪಡೆದಿದ್ದರು. ಈಗ ಎಲ್ಲೆಡೆ ಕೊರೋನಾ ಭೀತಿ ಹೆಚ್ಚಾದ ಹಿನ್ನೆಲೆ, ಅವರನ್ನು ಒಂದು ಕೊಠಡಿಯಲ್ಲಿ ಇರಿಸಲಾಗಿದೆ. ಹೊರಗೆ ಬಿಡುತ್ತಿಲ್ಲವಾದ್ದರಿಂದ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ.

  ಬೆಂಗಳೂರಿಗೆ ಇಂದಿನಿಂದ ಅಂತಾರಾಷ್ಟ್ರೀಯ ವಿಮಾನಗಳಿಗೆ ಪ್ರವೇಶ ನಿಷೇಧ?

  ಇನ್ನು, ಇತ್ತ ಕಡೆ ವಿದ್ಯಾರ್ಥಿಗಳ ಪೋಷಕರು ಮತ್ತು ಸಂಬಂಧಿಕರು ಆತಂಕಕ್ಕೊಳಗಾಗಿದ್ದಾರೆ. ತಮ್ಮ ಮಕ್ಕಳು ಬರುವ ದಾರಿಯನ್ನೇ ಕಾದು ಕುಳಿತಿದ್ದಾರೆ. ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿ ಎಂದು ವಿದ್ಯಾರ್ಥಿಗಳು ವಿಡಿಯೋ ಮಾಡಿ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
  First published: