ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ನಿಯಂತ್ರಣಕ್ಕೆ ಸಿಗದ ಕೊರೋನಾ; ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಕೈದಿಗಳ ಚಿಕಿತ್ಸೆಗೆ ಸ್ಥಳಾವಕಾಶ ಸಿಗದೆ ಪರದಾಡುತ್ತಿದ್ದು, ಹೊಸದಾಗಿ ದಾಖಲಾಗುವ ಆರೋಪಿಗಳ ಪ್ರತಿಯೊಬ್ಬರದ್ದು ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಕ್ವಾರಂಟೈನ್ ಸ್ಥಳದಲ್ಲಿ ನಿಯಮ ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸಿರುವುದೇ ಸೋಂಕಿಗೆ ಕಾರಣ ಎನ್ನಲಾಗಿದೆ.

news18-kannada
Updated:August 4, 2020, 3:01 PM IST
ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ನಿಯಂತ್ರಣಕ್ಕೆ ಸಿಗದ ಕೊರೋನಾ; ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಪರಪ್ಪನ ಅಗ್ರಹಾರ ಜೈಲು
  • Share this:
ಬೆಂಗಳೂರು; ಸೆಂಟ್ರಲ್‌ ಜೈಲಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಸಿಗದೆ, ದಿನದಿಂದ ದಿನಕ್ಕೆ ಪರಪ್ಪನ ಅಗ್ರಹಾರದಲ್ಲಿ ಪಾಸಿಟಿವ್ ಕೇಸ್‌ ಹೆಚ್ಚಾಗುತ್ತಿವೆ. ಕೇಂದ್ರ ಕಾರಾಗೃಹದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಈಗ ನೂರರ ಗಡಿ ದಾಟಿದೆ.

ಪರಪ್ಪನ ಅಗ್ರಹಾರದಲ್ಲಿ ಇದುವರೆಗೂ 102 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. 102‌ ಪಾಸಿಟಿವ್ ಕೇಸ್​ಗಳಲ್ಲಿ 14 ಮಂದಿ ಜೈಲು ಸಿಬ್ಬಂದಿಗೂ  ಪತ್ತೆಯಾಗಿದೆ. ಅತಿ ಹೆಚ್ಚು ವಿಚಾರಣಾಧೀನಾ‌ ಕೈದಿಗಳಲ್ಲೇ ಕಾಣಿಸಿಕೊಳ್ಳುತ್ತಿದೆ. ಸ್ಟೇಷನ್​ನಿಂದ‌ ಕರೆತಂದಾಗ ನೆಗೆಟಿವ್, ಒಂದು ವಾರದಲ್ಲಿ‌ ತಪಾಸಣೆ ಮಾಡಿಸಿದರೆ ಪಾಸಿಟಿವ್ ಬರುತ್ತಿದೆ. ಮೂವತೈದು ವರ್ಷದಿಂದ ನಲವತ್ತು ವರ್ಷದ ಕೈದಿಗಳಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.

14 ದಿನ ಕ್ವಾರಂಟೈನ್ ಇಡುವ ಮಹಿಳಾ ಜೈಲಿನಲ್ಲಿ ಸೋಂಕು ಹರಡಿದೆ. ಪೆರೋಲ್ ಮೇಲೆ ಹೋಗಿ ಬಂದಿದ್ದ ಒಟ್ಟು 11 ಮಂದಿಗೂ ಪಾಸಿಟಿವ್ ಪತ್ತೆಯಾಗಿದ್ದು, ಜೈಲಾಧಿಕಾರಿಗಳಲ್ಲಿ ಆತಂಕ ಉಂಟಾಗಿದೆ. ಮೊದಲು ಆರೋಪಿಗಳಿಗೆ ನೆಗೆಟಿವ್ ರಿಪೋರ್ಟ್ ಎಂದು ಜೈಲಿಗೆ ಆರೋಪಿಗಳು ಬಂದಿದ್ದು, ವಾರದ ಬಳಿಕ ತಪಾಸಣೆ ಮಾಡಿಸಿದರೆ ಪಾಸಿಟಿವ್ ರಿಪೋರ್ಟ್ ಬರುತ್ತಿದೆ. ವಿಚಾರಣಾಧಿನಾ ಕೈದಿಗಳಲ್ಲಿ ಸೋಂಕು ಹೆಚ್ಚಾದಂತೆ  ಜೈಲಾಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. 87 ಮಂದಿ ಪುರುಷ ವಿಚಾರಣಾಧೀನಾ ಕೈದಿಗಳಿಗೆ ಸೋಂಕು ಕಾಣಿಸಿಕೊಂಡರೆ, ಒಬ್ಬ ಮಹಿಳಾ ಕೈದಿಗೆ ಮಾತ್ರ ಪಾಸಿಟಿವ್ ಪತ್ತೆಯಾಗಿದೆ. ಒಟ್ಟು ಕ್ವಾರಂಟೈನ್ ಸ್ಥಳದಲ್ಲಿ ನಿಯೋಜನೆಗೊಂಡಿದ್ದ 14 ಮಂದಿ ಜೈಲು ಸಿಬ್ಬಂದಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.

ಇದನ್ನು ಓದಿ: ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ, ಮೈಸೂರು ಪ್ರವಾಸ; ಇಲ್ಲಿದೆ ಸಿದ್ದರಾಮಯ್ಯ ಟ್ರಾವೆಲ್​ ಹಿಸ್ಟರಿ

ಅತಿ ಹೆಚ್ಚು ಪುರುಷ ವಿಚಾರಣಾಧೀನಾ ಕೈದಿಗಳಲ್ಲೇ ಸೋಂಕು ಪತ್ತೆಯಾಗಿದೆ. ಕ್ವಾರಂಟೈನ್ ಇಡುವ ಮಹಿಳಾ ವಿಶೇಷ ಬ್ಯಾರಕ್ ಬಳಿ ಭದ್ರತೆಗೆ ನಿಯೋಜನೆಗೊಳ್ಳಲು  ಸಿಬ್ಬಂದಿ ಭಯಪಡ್ತಿದ್ದಾರೆ. ಮತ್ತೊಂದು ಕಡೆ ಕುಟುಂಬಸ್ಥರ ಭೇಟಿಗೆ ನಿರಾಕರಿಸಲಾಗಿದೆ. ಪರಪ್ಪನ ಅಗ್ರಹಾರ ಕೈದಿಗಳ ಯೋಗಕ್ಷೇಮ, ಭೇಟಿಗೆ ಅವಕಾಶ ನಿಲ್ಲಿಸಲಾಗಿದೆ. ಪ್ರತಿನಿತ್ಯ ಮಹಿಳಾ ವಿಶೇಷ ಬ್ಯಾರಕ್​ನಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಜೊತೆಗೆ ಹೊಸದಾಗಿ ಬಂದಿರುವ  300 ಮಂದಿ ವಿಚಾರಣಾಧೀನಾ ಕೈದಿಗಳ ತಪಾಸಣೆಗೆ ಸಿದ್ದತೆ ನಡೆಸಲಾಗಿದೆ. ಕೈದಿಗಳ ಚಿಕಿತ್ಸೆಗೆ ಸ್ಥಳಾವಕಾಶ ಸಿಗದೆ ಪರದಾಡುತ್ತಿದ್ದು, ಹೊಸದಾಗಿ ದಾಖಲಾಗುವ ಆರೋಪಿಗಳ ಪ್ರತಿಯೊಬ್ಬರದ್ದು ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಕ್ವಾರಂಟೈನ್ ಸ್ಥಳದಲ್ಲಿ ನಿಯಮ ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸಿರುವುದೇ ಸೋಂಕಿಗೆ ಕಾರಣ ಎನ್ನಲಾಗಿದೆ.
Published by: HR Ramesh
First published: August 4, 2020, 3:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading