ದೇಶದಲ್ಲಿ ಮಿತಿಮೀರುತ್ತಿದೆ ಕೊರೋನಾ; ಸೆಪ್ಟೆಂಬರ್ ವೇಳೆಗೆ 35 ಲಕ್ಷ ಪ್ರಕರಣ; ಐಐಎಸ್​ಸಿ ವರದಿ

ಕೋವಿಡ್ ಕುರಿತು ಅಂಕಿಸಂಖ್ಯೆಗಳ ಮೇಲೆ ಗಣಿತಶಾಸ್ತ್ರದ ಮಾದರಿ ಮೂಲಕ ವಿವಿಧ ಮಾನದಂಡದ ಆಧಾರದ ಮೇಲೆ ಇಷ್ಟು ಸಂಖ್ಯೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿ ಪ್ರೊ.ಶಶಿಕುಮಾರ್ ಜಿ ಅಭಿಪ್ರಾಯಪಡುತ್ತಾರೆ‌.

news18-kannada
Updated:July 17, 2020, 6:17 PM IST
ದೇಶದಲ್ಲಿ ಮಿತಿಮೀರುತ್ತಿದೆ ಕೊರೋನಾ; ಸೆಪ್ಟೆಂಬರ್ ವೇಳೆಗೆ 35 ಲಕ್ಷ ಪ್ರಕರಣ; ಐಐಎಸ್​ಸಿ ವರದಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ದೇಶದಲ್ಲಿ ಕೊರೋನಾ ರುದ್ರ ನರ್ತನ ನಿಲ್ಲುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಕೊರೋನಾ ಸಂಖ್ಯೆ ರಾಕೆಟ್ ನಂತೆ ಏರಲಿದೆ. ಈ ಕುರಿತು ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿಗಳ ತಂಡ ವರದಿ ಸಲ್ಲಿಸಿದೆ ಮಂಡಿಸಿದೆ.

ಈ ವರದಿಯ ಪ್ರಕಾರ, ಸೆಪ್ಟೆಂಬರ್ ವೇಳೆಗೆ ದೇಶದಲ್ಲಿ 35 ಲಕ್ಷ ಪ್ರಕರಣಗಳು ಹಾಗೂ  ರಾಜ್ಯದಲ್ಲಿ 2 ಲಕ್ಷ ಪ್ರಕರಣಗಳು ದಾಖಲಾಗಲಿವೆ. ಮುಂದಿನ ಮಾರ್ಚ್ ವೇಳೆಗೆ ಆರು ಕೋಟಿ ಕೊರೋನಾ ಪ್ರಕರಣ, 28 ಲಕ್ಷ ಜರನ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಕಳವಳಕಾರಿ ಅಂಶ ಹೊರಹಾಕಲಾಗಿದೆ.

ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿಗಳಾದ ಪ್ರೊ.ಜಿ. ಶಶಿಕುಮಾರ್, ಪ್ರೊ. ದೀಪಕ್ ಎಸ್ ಮತ್ತು ಅವರ ತಂಡದಿಂದ ವರದಿ ಮಂಡಿಸಿದೆ. ವಿಜ್ಞಾನಿಗಳು ಮಂಡಿಸಿದ ವರದಿ ಸಾಕಷ್ಟು ಅಘಾತಕಾರಿ ವಿಷಯಗಳನ್ನು ಹೊರಹಾಕಲಾಗಿಇದೆ. ಸೆಪ್ಟೆಂಬರ್ 1ರ ವೇಳೆಗೆ ದೇಶದಲ್ಲಿ 35 ಲಕ್ಷ ಕೊರೋನಾ ಪ್ರಕರಣ ದಾಖಲಾಗಲಿದೆ. ಇದರಲ್ಲಿ 10 ಲಕ್ಷ ಸಕ್ರಿಯ ಕೊರೋನಾ ಕೇಸ್ ಇರಲಿದ್ದು, ಕರ್ನಾಟಕದಲ್ಲಿ 2.1 ಲಕ್ಷ ಪ್ರಕರಣಗಳಲ್ಲಿ 71,000  ಸಕ್ರಿಯ ಪ್ರಕರಣಗಳು ಇರಲಿದೆಯಂತೆ. ಈ ಪೈಕಿ ಮಹಾರಾಷ್ಟ್ರದಿಂದ 25,000, ದೆಹಲಿ 9,700, ಕರ್ನಾಟಕದಿಂದ 8,500, ತಮಿಳುನಾಡಿನಿಂದ 6,300, ಗುಜರಾತ್ ನಿಂದ 7,300 ಮಂದಿ ಮೃತಪಡಲಿದ್ದಾರೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಅದೇ ರೀತಿ ಸೆಪ್ಟೆಂಬರ್ 2ನೇ ವಾರದಲ್ಲಿ 4.8 ಲಕ್ಷ ಕೊರೋನಾ ಪ್ರಕರಣ ದಾಖಲಾಗಿದೆ. ಇದರಲ್ಲಿ 1.4 ಲಕ್ಷ ಸಕ್ರಿಯ ಕೊರೋನಾ ಕೇಸ್ ಇರಲಿದೆ. ಇನ್ನು ನವೆಂಬರ್ 1ರ ವೇಳೆಗೆ ಭಾರತದಲ್ಲಿ 1.2 ಕೋಟಿ ಪ್ರಕರಣಗಳು ಇರಲಿವೆ‌‌. 30.2 ಲಕ್ಷ ಸಕ್ರಿಯ ಪ್ರಕರಣಗಳಾಗಲಿವೆ. ಅಂದಾಜು 5 ಲಕ್ಷ ಸಾವುಗಳು ಸಂಭವಿಸಲಿವೆ ಎಂದು ಹೇಳಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ 7.2 ಲಕ್ಷ ಪ್ರಕರಣಗಳಲ್ಲಿ 1.9 ಲಕ್ಷ ಸಕ್ರಿಯ ಪ್ರಕರಣಗಳು ಇರಲಿದ್ದು, 30,400 ಸಾವುಗಳು ಸಂಭವಿಸಲಿದೆ ಎಂದು ವರದಿಯಲ್ಲಿ ಅಂದಾಜಿಸಿದ್ದಾರೆ‌.

ಜನವರಿ 1ರ ವೇಳೆಗೆ ಈ ಸಂಖ್ಯೆ 2.9 ಕೋಟಿಗೆ ಏರಿಕೆಯಾಗಲಿದ್ದು, ಇದರಲ್ಲಿ 60 ಲಕ್ಷ ಸಕ್ರಿಯ ಕೇಸು ಇರಲಿದೆ. ಕರ್ನಾಟಕದಲ್ಲಿ ಈ ಸಂಖ್ಯೆ 10.8 ಲಕ್ಷ ಇರಲದ್ದು, ಸಕ್ರಿಯ 3.7 ಲಕ್ಷ ಮತ್ತು 78,900 ಸಾವು ಸಂಭವಿಸಲಿದೆ. ಇನ್ನು ಇದೇ ಪರಿಸ್ಥಿತಿ ಮುಂದುವರೆದರೆ ಮಾರ್ಚ್ 2021 ಅಂತ್ಯದ ವೇಳೆ ದೇಶದಲ್ಲಿ ಬರೋಬ್ಬರಿ 6.18 ಕೋಟಿ ಪ್ರಕರಣ ದಾಖಲಾಗಲಿದೆಯಂತೆ. ಇದರಲ್ಲಿ 82 ಲಕ್ಷ‌ ಸಕ್ರಿಯ ಕೊರೊನಾ ಕೇಸ್ ಇರಲಿದ್ದು, ಕಳವಳಕಾರಿ ವಿಚಾರವೆಂದರೆ 28 ಲಕ್ಷ ಜ‌ನ ಕೊರೋನಾದಿಂದ ಸಾಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಆ ಸಂದರ್ಭದಲ್ಲಿನ ರಾಜ್ಯವಾರು ಪರಿಸ್ಥಿತಿ ನೋಡುವುದಾದರೆ ಮಹಾರಾಷ್ಟ್ರದಲ್ಲಿ 6.3 ಲಕ್ಷ ಕೊರೋನಾ ಪ್ರಕರಣ ದಾಖಲಾಗಲಿದೆ. 2.1 ಲಕ್ಷ ಸಕ್ರಿಯ ಪ್ರಕರಣಗಳು ಇರಲಿದೆ. ದೆಹಲಿಯಲ್ಲಿ 2.4 ಲಕ್ಷ ಮತ್ತು ಸಕ್ರಿಯ 81 ಸಾವಿರ, ತಮಿಳುನಾಡಿನಲ್ಲಿ 1.6 ಲಕ್ಷ, ಸಕ್ರಿಯ 53 ಸಾವಿರ, ಗುಜರಾತ್ ನಲ್ಲಿ 1.8 ಲಕ್ಷ, ಸಕ್ರಿಯ 61 ಸಾವಿರ ಪ್ರಕರಣಗಳು ಇರಲಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಯ ತಂಡ ತನ್ನದೇ ಆದ ಗಣಿತಶಾಸ್ತ್ರದ ಮಾದರಿ ಮಾನದಂಡಗಳ ಮೂಲಕ ಅಭಿಪ್ರಾಯಪಡುತ್ತಿದೆ.

ಅಷ್ಟಕ್ಕೂ ಕೋವಿಡ್ ಕೇಸ್ ಲೆಕ್ಕಾಚಾರ ಅಂದಾಜಿಸಲಾಗಿದೆ‌. ರಾಷ್ಟ್ರೀಯ ಮಾನದಂಡಗಳ ಮೂಲಕ ಲೆಕ್ಕಾಚಾರ ಮಾಡಲಾಗಿದೆ. ರಾಜ್ಯದಲ್ಲಿನ ಪ್ರಸ್ತುತ ಪ್ರವೃತ್ತಿಗಳನ್ನು ಆಧರಿಸಿ ಸಲಹೆ ಪಡೆಯಲಾಗಿದೆ. ಬೇರೆ ಬೇರೆ ರಾಜ್ಯದಲ್ಲಿ ಬೇರೆ ಸಮಯದಲ್ಲಿ ಪೀಕ್ ಸ್ಥಿತಿ ತಲುಪುತ್ತದೆ. ಇದರ ಹಿನ್ನೆಲೆ ರಾಜ್ಯದ ನೈಜ ದತ್ತಾಂಶ ರಾಷ್ಟ್ರೀಯ ಪ್ರವೃತ್ತಿಯೊಂದಿಗೆ ಹೋಲಿಕೆ ಮಾಡಲಾಗಿದೆ. ರಾಜ್ಯದಲ್ಲಿನ ಕೋವಿಡ್ ಸಂಖ್ಯೆಗಳನ್ನು ರಾಷ್ಟ್ರೀಯ ಮಾನದಂಡಗಳೊಂದಿಗೆ ಲೆಕ್ಕ ಹಾಕಿ ಅಂದಾಜಿಸಲಾಗಿದೆ. ರಾಜ್ಯ ಹಾಗೂ ದೇಶದಲ್ಲಿ ಕೋವಿಡ್ ಸಂಖ್ಯೆ ಗಣನೀಯವಾಗಿ ಏರುತ್ತಿದೆ.ಇದನ್ನು ಓದಿ: ಜನಸಂಖ್ಯೆ ಕೋಟಿಗೂ ಹೆಚ್ಚು; ವೆಂಟಿಲೇಟರ್ಸ್ 500, ಆಕ್ಸಿಜನ್ ಬೆಡ್ ಸಾವಿರ; ಇದು ಬೆಂಗಳೂರು ದುರವಸ್ಥೆ

ಸದ್ಯ ಅತ್ಯಂತ ಕೆಟ್ಟದಾದ ದುಸ್ಥಿತಿಯ ಕೊರೋನಾ ಕಾಲವಿದು. ಇಂತಹ ಸಮಯದಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆಯಿರದೇ ಇರುವುದು, ಮುಂಜಾಗ್ರತೆ ತೆಗೆದುಕೊಳ್ಳದೇ ಇರುವುದು ಹೆಚ್ಚಾಗಿ ಕಂಡುಬರುತ್ತಿದೆ. ಕೋವಿಡ್ ಕುರಿತು ಅಂಕಿಸಂಖ್ಯೆಗಳ ಮೇಲೆ ಗಣಿತಶಾಸ್ತ್ರದ ಮಾದರಿ ಮೂಲಕ ವಿವಿಧ ಮಾನದಂಡದ ಆಧಾರದ ಮೇಲೆ ಇಷ್ಟು ಸಂಖ್ಯೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿ ಪ್ರೊ.ಶಶಿಕುಮಾರ್ ಜಿ ಅಭಿಪ್ರಾಯಪಡುತ್ತಾರೆ‌.
Published by: HR Ramesh
First published: July 17, 2020, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading