• ಹೋಂ
  • »
  • ನ್ಯೂಸ್
  • »
  • Corona
  • »
  • ಬೆಂಗಳೂರಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಸೋಂಕಿತರ ಸಂಖ್ಯೆ; ಪೊಲೀಸರಿಗೆ ತಲೆನೋವಾದ ಹೊರರಾಜ್ಯದ ಪ್ರಯಾಣಿಕರು

ಬೆಂಗಳೂರಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಸೋಂಕಿತರ ಸಂಖ್ಯೆ; ಪೊಲೀಸರಿಗೆ ತಲೆನೋವಾದ ಹೊರರಾಜ್ಯದ ಪ್ರಯಾಣಿಕರು

ದೆಹಲಿಯಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ ಸೋಮವಾರ 20 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ದೆಹಲಿಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 4,131ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ ಸೋಮವಾರ 20 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ದೆಹಲಿಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 4,131ಕ್ಕೆ ಏರಿಕೆಯಾಗಿದೆ.

ಮುಂಬೈ ಬಿಟ್ಟು ದೆಹಲಿ ಮತ್ತು ಇತರೆ ರಾಜ್ಯಗಳಿಂದ‌ ಬಂದವರಿಂದಲೂ ನಿಯಮ ಉಲ್ಲಂಘನೆಯಾಗಿದೆ. ಕ್ವಾರಂಟೈನ್‌ ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸಿದವರ ಬಗ್ಗೆ ಬಿಬಿಎಂಪಿ ನಿಗಾ ವಹಿಸುತ್ತಿಲ್ಲ. ಕ್ವಾರಂಟೈನ್ ಸಂಬಂಧ ಯಾವೊಬ್ಬ ಪ್ರಯಾಣಿಕರ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ.

  • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ‌ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಹೊರ ರಾಜ್ಯದಿಂದ ಬಂದವರಿಂದಲೇ ಕೊರೋನಾ‌ ಹರಡುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಮಹಾರಾಷ್ಟ್ರದಿಂದ ಬಂದವರು ಪೊಲೀಸ್ ಇಲಾಖೆಗೆ ತಲೆನೋವಾಗಿದ್ದಾರೆ.


ಹೌದು, ಮಹಾರಾಷ್ಷ್ರದಿಂದ‌ ನಗರಕ್ಕೆ ಬರೋಬ್ಭರಿ 10,426 ಪ್ರಯಾಣಿಕರು ಬಂದಿದ್ದು, ಪ್ರತಿದಿನ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ 500ಕ್ಕೂ ಹೆಚ್ಚು ಮಂದಿ ಆಗಮಿಸುತ್ತಿದ್ದಾರೆ. ಇಷ್ಟು ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಿ ನೋಡಿಕೊಳ್ಳುವುದೇ ಪೊಲೀಸರಿಗೆ ಸವಾಲಿನ ಕೆಲಸ  ಆಗಿದೆ. ಏಳು ದಿನ ಸಾಂಸ್ಥಿಕ‌ ಕ್ವಾರಂಟೈನ್ ಮುಗಿಸಿ, ಹೋಮ್ ಕ್ವಾರಂಟೈನ್​ನಲ್ಲಿ ಇರದ ಪ್ರಯಾಣಿಕರು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ.


ಪ್ರತಿ ಪ್ರಯಾಣಿಕರ ವಾಸಸ್ಥಳ ಪತ್ತೆ ಹಚ್ಚಿ, ಮನೆಗೆ ಹೋಗಿ ಪೊಲೀಸರು ಎಚ್ಚರಿಕೆ ನೀಡಿ ಬರುತ್ತಿದ್ದಾರೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದವವರ ಮೇಲೂ ಪ್ರಕರಣ ಕೂಡ ದಾಖಲಿಸಲಾಗುತ್ತಿದೆ. ಇನ್ನು ಮುಂಬೈ ಬಿಟ್ಟು ದೆಹಲಿ ಮತ್ತು ಇತರೆ ರಾಜ್ಯಗಳಿಂದ‌ ಬಂದವರಿಂದಲೂ ನಿಯಮ ಉಲ್ಲಂಘನೆಯಾಗಿದೆ. ಕ್ವಾರಂಟೈನ್‌ ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸಿದವರ ಬಗ್ಗೆ ಬಿಬಿಎಂಪಿ ನಿಗಾ ವಹಿಸುತ್ತಿಲ್ಲ. ಕ್ವಾರಂಟೈನ್ ಸಂಬಂಧ ಯಾವೊಬ್ಬ ಪ್ರಯಾಣಿಕರ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ.


ಇದನ್ನು ಓದಿ: ಕೊರೋನಾ ಆತಂಕವಿಲ್ಲದೇ, ಗುಂಪಾಗಿ ಕುಳಿತು ಸಭೆ ನಡೆಸಿದ ರಾಜ್ಯ ಕಾಂಗ್ರೆಸ್​ ನಾಯಕರು


ಒಮ್ಮೆಲೇ ರಾಜಧಾನಿಗೆ ಹೊರರಾಜ್ಯದಿಂದ ಬರುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.  ಪೊಲೀಸರು ಒಂದು ಕಡೆ ಕಂಟೋನ್ಮೆಂಟ್ ಜೋನ್​ನಲ್ಲಿ ಕೆಲಸ ಮಾಡಬೇಕು. ಮತ್ತೊಂದೆಡೆ ಕ್ವಾರಂಟೈನ್​ನಲ್ಲಿ‌ ಇರುವರ ಬಗ್ಗೆ ನಿಗಾ ವಹಿಸಬೇಕಾಗಿದೆ. ಅಲ್ಲದೆ ಕ್ವಾರಂಟೈನ್‌ನಲ್ಲಿರದೆ ತಪ್ಪು ಮಾಹಿತಿ ನೀಡಿದವರನ್ನು ಪತ್ತೆ ಮಾಡಬೇಕಿದೆ. ಕೇವಲ‌ ಕ್ವಾರಂಟೈನ್‌ ಮಾಡಿ ಪೊಲೀಸರಿಗೆ ಪಟ್ಟಿ ಕೊಟ್ಟ ಬಿಬಿಎಂಪಿ‌ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಹೀಗೆ ಪ್ರತಿಯೊಬ್ಬರ ಮೇಲೆ ನಿಗಾವಹಿಸುವುದೇ ಪೊಲೀಸರಿಗೆ ದೊಡ್ಡ ಸವಾಲಿನ ಕೆಲಸ‌ ಆಗಿದೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು