ಹಾಸನದಲ್ಲಿ ಕೊರೋನಾ ಸೋಂಕಿತ ಪೊಲೀಸ್ ಹೆಂಡತಿ, ಮಕ್ಕಳು ಸೇರಿ ಕುಟುಂಬದ ಐವರಿಗೆ ಪಾಸಿಟಿವ್

ಪೊಲೀಸ್ ಕುಟುಂಬದವರಿಗಷ್ಟೇ ಅಲ್ಲದೇ ಇಂದು ಬಡಾವಣೆ ಪೊಲೀಸ್ ಠಾಣೆಯ ಮತ್ತೊಬ್ಬ ಕಾನ್ಸ್‌ಟೇಬಲ್​‌ಗೂ ಕೂಡ ಕೊರೋನಾ ಪಾಸಿಟಿವ್ ಬಂದಿದೆ. ಅದರ ಜೊತೆ ಮಿಲಿಟರಿಯಿಂದ ರಜೆಗೆಂದು ಬಂದಿದ್ದ ಓರ್ವ ಸೈನಿಕನಿಗೂ ಇಂದು ಪಾಸಿಟಿವ್ ಬಂದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಹಾಸನ; ಹಾಸನದಲ್ಲಿ ಕೊರೋನಾ ಸೋಂಕಿತ ಪೊಲೀಸ್ ಕಾನ್ಸ್‌ಟೇಬಲ್ ಹೆಂಡತಿ ಮತ್ತು ಮಕ್ಕಳು  ಸೇರಿದಂತೆ ಅವರ ಕುಟುಂಬದ ಐವರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. 

ಹಾಸನ ಜಿಲ್ಲೆಯಲ್ಲಿ ಇಂದು ಒಟ್ಟು 12 ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲಿ ಈ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಹಾಸನ ಬಡಾವಣೆ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರ ಹೆಂಡತಿ, ಇಬ್ಬರು ಮಕ್ಕಳು, ಅತ್ತೆ, ಮಾವ ಸೇರಿ ಐವರಿಗೆ ಪಾಸಿಟಿವ್ ಬಂದಿರುವುದು ಪೊಲೀಸರ ಆತಂಕಕ್ಕೆ ಕಾರಣವಾಗಿದೆ.

ಪೊಲೀಸ್ ಕುಟುಂಬದವರಿಗಷ್ಟೇ ಅಲ್ಲದೇ ಇಂದು ಬಡಾವಣೆ ಪೊಲೀಸ್ ಠಾಣೆಯ ಮತ್ತೊಬ್ಬ ಕಾನ್ಸ್‌ಟೇಬಲ್​‌ಗೂ ಕೂಡ ಕೊರೋನಾ ಪಾಸಿಟಿವ್ ಬಂದಿದೆ. ಅದರ ಜೊತೆ ಮಿಲಿಟರಿಯಿಂದ ರಜೆಗೆಂದು ಬಂದಿದ್ದ ಓರ್ವ ಸೈನಿಕನಿಗೂ ಇಂದು ಪಾಸಿಟಿವ್ ಬಂದಿದೆ.

ಇದನ್ನು  ಓದಿ: ಬೆಂಗಳೂರಿನಲ್ಲಿ ಬಾಗಲಕೋಟೆ ಮೂಲದ ಸರ್ಕಾರಿ ವೈದ್ಯ ಮಾರಕ ಕೊರೋನಾಗೆ ಬಲಿ

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 312ಕ್ಕೆ ಏರಿದ್ದು ಅದರಲ್ಲಿ 81 ಕೇಸ್‌ಗಳು ಆಕ್ಟಿವ್ ಆಗಿದ್ದು, ಉಳಿದವರು ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದಾರೆ.
First published: