ಕಾಂಟ್ಯಾಕ್ಟ್ ಟ್ರೇಸಿಂಗ್ ಕಷ್ಟ ಎಂದು ಹೇಳುವುದು ಬರೀ ನೆವ ಅಷ್ಟೇ: ವಿಶ್ವರಾಷ್ಟ್ರಗಳಿಗೆ ಡಬ್ಲ್ಯೂಎಚ್ಒ ಕಟುಮಾತು

ಅಪಾಯದಲ್ಲಿರುವವರನ್ನ ಗುರುತಿಸಿ ಪ್ರತ್ಯೇಕಿಸಲು ಪ್ರಬಲ ಕಾಂಟ್ಯಾಕ್ಟ್ ಟ್ರೇಸಿಂಗ್ ವ್ಯವಸ್ಥೆ ಅಗತ್ಯ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪದೇ ಪದೇ ಹೇಳುತ್ತಲೇ ಬಂದಿದೆ. ಆದರೆ, ಅಮೆರಿಕ, ಬ್ರಿಟನ್ ಮೊದಲಾದ ದೇಶಗಳು ತಮ್ಮಿಂದ ಕಾಂಟ್ಯಾಕ್ಟ್ ಟ್ರೇಸಿಂಗ್ ಕಾರ್ಯ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿವೆಯಂತೆ.

news18
Updated:June 30, 2020, 5:21 PM IST
ಕಾಂಟ್ಯಾಕ್ಟ್ ಟ್ರೇಸಿಂಗ್ ಕಷ್ಟ ಎಂದು ಹೇಳುವುದು ಬರೀ ನೆವ ಅಷ್ಟೇ: ವಿಶ್ವರಾಷ್ಟ್ರಗಳಿಗೆ ಡಬ್ಲ್ಯೂಎಚ್ಒ ಕಟುಮಾತು
ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರಾಸ್
  • News18
  • Last Updated: June 30, 2020, 5:21 PM IST
  • Share this:
ನವದೆಹಲಿ(ಜೂನ್ 30): ಕೊರೋನಾ ವೈರಸ್ ಸೋಂಕು ಸದ್ಯಕ್ಕಂತೂ ತಣ್ಣಗಾಗುವ ಲಕ್ಷಣಗಳಿಲ್ಲ. ಈ ಬಿಕ್ಕಟ್ಟು ಶಮನವಾಗುವ ಕಾಲ ಬಹಳ ದೂರ ಇದೆ. ಅತ್ಯಂತ ಕಷ್ಟದ ಪರಿಸ್ಥಿತಿ ಬರಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಕೊರೋನಾ ಸೋಂಕು ಡಬ್ಲ್ಯೂಎಚ್​ಒ ಗಮನಕ್ಕೆ ಬಂದು ಇವತ್ತಿಗೆ ಆರು ತಿಂಗಳಾಗಿದೆ. ಒಂದು ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 5 ಲಕ್ಷದಷ್ಟು ಜನರನ್ನು ಬಲಿಪಡೆದುಕೊಂಡಿದೆ. ಅಮೆರಿಕ ಖಂಡಗಳಲ್ಲಿ ಸೋಂಕು ಈಗಲೂ ಹೆಚ್ಚಾಗುತ್ತಲೇ ಇದೆ. ಈಗಲೇ ನಿಲ್ಲುವ ಸಾಧ್ಯತೆ ಕಾಣುತ್ತಿಲ್ಲ ಎಂದು ಡಬ್ಲ್ಯೂಎಚ್​ಒ ಮಹಾ ನಿರ್ದೇಶಕ ಟೆಡ್ರೋಸ್ ಅಧಾನೋಮ್ ಘೆಬ್ರೆಯೆಸೂಸ್ ಹೇಳಿದ್ದಾರೆ.

ಕಾಂಟ್ಯಾಕ್ಟ್ ಟ್ರೇಸಿಂಗ್ ಕಷ್ಟ ಎನ್ನುವುದು ಒಂದು ನೆವ ಮಾತ್ರ: ಡಬ್ಲ್ಯೂಎಚ್​ಒ

ಕೊರೋನಾ ವೈರಸ್ ಸೋಂಕು ಹರಡದಂತೆ ನಿಯಂತ್ರಿಸಲು ಕಾಂಟ್ಯಾಕ್ಟ್ ಟ್ರೇಸಿಂಗ್ ಬಹಳ ಮುಖ್ಯ ಕ್ರಮ. ಅಂದರೆ, ಸೋಂಕು ತಗುಲಿದವರ ಟ್ರಾವೆಲ್ ಹಿಸ್ಟರಿ ಸೇರಿದಂತೆ ಅವರು ಯಾರ್ಯಾರನ್ನ ಸಂಪರ್ಕಿಸಿದ್ದರು ಇತ್ಯಾದಿಯ ಜಾಡು ಹಿಡಿದು ಅವರನ್ನೆಲ್ಲಾ ಪತ್ತೆ ಹಚ್ಚುವ ಕಾರ್ಯವೇ ಕಾಂಟ್ಯಾಕ್ಟ್ ಟ್ರೇಸಿಂಗ್. ಆದರೆ, ಈಗ ಸೋಂಕು ಬಹಳ ವ್ಯಾಪಕವಾಗಿರುವುದರಿಂದ ಹಲವು ದೇಶಗಳು ಕಾಂಟ್ಯಾಕ್ಟ್ ಟ್ರೇಸಿಂಗ್ ಕಾರ್ಯ ತೀರಾ ಕಷ್ಟವಾಗಿದೆ ಎಂದು ಡಬ್ಲ್ಯೂಹೆಚ್​ಒಗೆ ತಿಳಿಸಿವೆಯಂತೆ. ಈ ವಿಚಾರವನ್ನು ಪ್ರಸ್ತಾಪಿಸಿದ ಡಬ್ಲ್ಯೂಎಚ್​ಒ ಮಹಾನಿರ್ದೇಶಕರು, ಅಂಥ ದೇಶಗಳನ್ನ ತರಾಟೆಗೆ ತೆಗೆದುಕೊಂಡರು. ಕಾಂಟ್ಯಾಕ್ಟ್ ಟ್ರೇಸಿಂಗ್ ಕಷ್ಟ ಎಂದು ಹೇಳುವುದು ಒಂದು ನೆವ ಮಾತ್ರವಾಗಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ‘ವಿದೇಶಿ ಹೂಡಿಕೆದಾರರ ಹಕ್ಕು ರಕ್ಷಣೆ ಭಾರತದ ಹೊಣೆ – 59 ಆ್ಯಪ್ ನಿಷೇಧಿಸುವ ಕ್ರಮಕ್ಕೆ ಚೀನಾ ಕೆಂಗಣ್ಣು

ಅಪಾಯದಲ್ಲಿರುವವರನ್ನ ಗುರುತಿಸಿ ಪ್ರತ್ಯೇಕಿಸಲು ಪ್ರಬಲ ಕಾಂಟ್ಯಾಕ್ಟ್ ಟ್ರೇಸಿಂಗ್ ವ್ಯವಸ್ಥೆ ಅಗತ್ಯ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪದೇ ಪದೇ ಹೇಳುತ್ತಲೇ ಬಂದಿದೆ. ಆದರೆ, ಅಮೆರಿಕ, ಬ್ರಿಟನ್ ಮೊದಲಾದ ದೇಶಗಳು ತಮ್ಮಿಂದ ಕಾಂಟ್ಯಾಕ್ಟ್ ಟ್ರೇಸಿಂಗ್ ಕಾರ್ಯ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿವೆಯಂತೆ.

ಬ್ರಿಟನ್ ದೇಶದಲ್ಲಿ ಅತ್ಯುತ್ತಮ ಕಾಂಟ್ಯಾಕ್ಟ್ ಟ್ರೇಸಿಂಗ್ ವ್ಯವಸ್ಥೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ, ಶೇ. 25ಕ್ಕೂ ಹೆಚ್ಚು ಸೋಂಕಿತರನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗುತ್ತಿದ್ದೇವೆ. ಪತ್ತೆಯಾಗದ ಸೋಂಕಿತರಿಂದ ಇನ್ನಷ್ಟು ಜನರಿಗೆ ಹರಡುವ ಸಾಧ್ಯತೆ ಇದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಹೇಳಿಕೊಂಡಿದ್ಧಾರೆ.

ಕಾಂಟ್ಯಾಕ್ಟ್ ಟ್ರೇಸಿಂಗ್ ಬಹಳ ತ್ರಾಸದಾಯಕ ಕಾರ್ಯವಾದರೂ ಅದು ಬಹಳ ಅತ್ಯಗತ್ಯ ಎಂಬುದನ್ನು ಡಬ್ಲ್ಯೂಎಚ್​ಒ ಮುಖ್ಯಸ್ಥರು ಒತ್ತಿ ಹೇಳುತ್ತಾ, ಇಬೋಲಾ ರೋಗದ ಉದಾಹರಣೆ ನೀಡಿದ್ದಾರೆ.ಇದನ್ನೂ ಓದಿ: ಪಾಕಿಸ್ತಾನದಿಂದ ಮುಂಬೈ ತಾಜ್​​ ಹೋಟಲ್​​ಗೆ ಬಾಂಬ್​​​ ಬೆದರಿಕೆ ಕರೆ: ಬಿಗಿ ಪೊಲೀಸ್​​ ಬಂದೋಬಸ್ತ್​​

ಆಫ್ರಿಕಾದಲ್ಲಿ ಇಬೋಲಾ ರೋಗ ಹರಡುತ್ತಿತ್ತು. ಕಾಂಗೋ ದೇಶದಲ್ಲಿ ಇಬೋಲಾ ರೋಗ ಪತ್ತೆಗೆ ಹೋದ ಆರೋಗ್ಯ ಕಾರ್ಯಕರ್ತರ ಮೇಲೆ ಸಶಸ್ತ್ರ ಗುಂಪುಗಳು ದಾಳಿ ನಡೆಸಿ ಹತ್ಯೆ ಮಾಡಿದ್ದವು. ಅಂಥ ಸಂದರ್ಭದಲ್ಲಿ ಡಬ್ಲ್ಯೂಎಚ್​ಒನ ಈಗಿನ ಎಮರ್ಜೆನ್ಸಿ ಡೈರೆಕ್ಟರ್ ಡಾ. ಮೈಕೇಲ್ ರಯಾನ್ ಅವರು ಬುಲೆಟ್ ಪ್ರೂಫ್ ಹೆಲ್ಮೆಟ್ ಮತ್ತು ವಸ್ತ್ರವನ್ನು ಧರಿಸಿ ಅದೇ ಸ್ಥಳಗಳಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್ ಕಾರ್ಯಕ್ಕೆ ಹೋಗಿದ್ದರು. ಅಂಥ ಬದ್ಧತೆ ಇದ್ದರೆ ಮಾತ್ರ ಇಬೋಲಾವನ್ನು ನಿಯಂತ್ರಿಸಬಹುದು ಎಂಬುದು ಅವರ ನಂಬಿಕೆಯಾಗಿತ್ತು ಎಂದು ಡಬ್ಲ್ಯೂಎಚ್​ಒ ಮುಖ್ಯಸ್ಥರು ಮೈಕೇಲ್ ರಯಾನ್ ಅವರ ಉದಾಹರಣೆ ನೀಡಿ ಶ್ಲಾಘಿಸಿದ್ಧಾರೆ.“ಕಾಂಟ್ಯಾಕ್ಟ್ ಟ್ರೇಸಿಂಗ್​ನಿಂದ ಗೆಲುವು ಸಾಧ್ಯವಾಗುತ್ತದೆ ಎಂದಾದರೆ ನಿಮ್ಮ ಜೀವ ಪಣಕ್ಕಿಟ್ಟಾದರೂ ಮಾಡಿ. ಕಾಂಟ್ಯಾಕ್ಟ್ ಟ್ರೇಸಿಂಗ್ ಕಷ್ಟ ಎಂದು ಯಾವದೇ ದೇಶ ಹೇಳಿದರೂ ಅದು ಕುಂಟು ನೆವ ಅಷ್ಟೇ” ಎಂದು ಟೆಡ್ರೋಸ್ ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಚೀನಾದಂಥ ದೇಶಗಳಲ್ಲಿನ ಕಾಂಟ್ಯಾಕ್ಟ್ ಟ್ರೇಸಿಂಗ್ ವ್ಯವಸ್ಥೆ ಬಗ್ಗೆ ಡಬ್ಲ್ಯೂಎಚ್​ಒ ಈ ಮುಂಚೆ ಮೆಚ್ಚುಗೆ ವ್ಯಕ್ತಪಡಿಸಿತ್ತು.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading