HOME » NEWS » Coronavirus-latest-news » CORONAVIRUS OUTBREAK WHY IS MAHARASHTRA SEEING SECOND COVID 19 WAVE HERE IS THE FACTS SCT STG

Coronavirus: ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆಯ ಆತಂಕ; ಸರ್ಕಾರ ಎಡವಿದ್ದೆಲ್ಲಿ?

Maharashtra Coronavirus: ಕಳೆದ ವರ್ಷ ಭಾರತದಲ್ಲಿ ಕೊರೋನಾ ವೈರಸ್ ಹರಡಲು ಪ್ರಾರಂಭಿಸಿದಾಗಿನಿಂದ ಮಹಾರಾಷ್ಟ್ರದಲ್ಲೆ ಹೆಚ್ಚು ಪ್ರಕರಣಗಳು ಕಂಡುಬಂದಿವೆ.

news18india
Updated:March 17, 2021, 3:02 PM IST
Coronavirus: ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆಯ ಆತಂಕ; ಸರ್ಕಾರ ಎಡವಿದ್ದೆಲ್ಲಿ?
ಸಾಂದರ್ಭಿಕ ಚಿತ್ರ.
 • Share this:
ಮುಂಬೈ (ಮಾ. 17): ಮಹಾರಾಷ್ಟ್ರದಲ್ಲಿ ಕೊರೋನಾ ಮಹಾಮಾರಿಯ ಎರಡನೇ ಅಲೆ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರದ ತಂಡವೊಂದು ವರದಿ ಮಾಡಿದೆ ಮತ್ತು ಕಟ್ಟುನಿಟ್ಟಾದ ನಿಯಂತ್ರಣ ತಂತ್ರಗಳತ್ತ ಗಮನ ಹರಿಸುವಂತೆ ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ಸೂಚಿಸಿದೆ. ಕೊರೋನಾ ಪರೀಕ್ಷೆಯನ್ನು ಗಣನೀಯವಾಗಿ ಹೆಚ್ಚಿಸಬೇಕು ಮತ್ತು ಐಸಿಎಂಆರ್ ನಿಗದಿಪಡಿಸಿದ ಪ್ರೋಟೋಕಾಲ್ ಅನ್ನು ಅನುಸರಿಸಬೇಕೆಂದು ಕೇಂದ್ರ ಸರ್ಕಾರ ಹೇಳಿದೆ.

ಪಾಸಿಟಿವ್ ಬಂದ ಪ್ರತಿ ಕೊರೋನಾ ಕೇಸ್​ನ ಒಡನಾಟ ಹೊಂದಿರುವ ಕನಿಷ್ಠ 20ರಿಂದ 30 ಹತ್ತಿರದ ಸಂಪರ್ಕ ಹೊಂದಿರುವವರನ್ನು (ಕುಟುಂಬದವರು, ಸ್ನೇಹಿತರು, ಕೆಲಸದ ಸ್ಥಳದ ಸಂಪರ್ಕಗಳು ಮತ್ತು ಇತರ ಪ್ರಾಸಂಗಿಕ ಸಂಪರ್ಕಗಳು ಸೇರಿದಂತೆ) ಕೂಡಲೇ ಪತ್ತೆ ಹಚ್ಚಿ ಮತ್ತು ಟ್ರ್ಯಾಕ್ ಮಾಡಬೇಕಾಗುತ್ತದೆ ಮತ್ತು 80-85 ಪೂರ್ವ ಶೇಕಡಾ ಸಕ್ರಿಯ ಪ್ರಕರಣಗಳನ್ನು ಮನೆಯಲ್ಲಿ ಹೋಮ್ ಕ್ವಾರಂಟೈನ್ ಮಾಡಿ ಅವರನ್ನು ಪ್ರತ್ಯೇಕತೆವಾಗಿ ಪರಿಶೀಲಿಸಬೇಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್  ರಾಜ್ಯ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮಹಾರಾಷ್ಟ್ರ ಈ ಸ್ಥಿತಿಗೆ ತಲುಪಲು ಕಾರಣವಾದರೂ ಏನು?

 • ಕಳೆದ ವರ್ಷ ಭಾರತದಲ್ಲಿ ಕೊರೋನಾ ವೈರಸ್ ಹರಡಲು ಪ್ರಾರಂಭಿಸಿದಾಗಿನಿಂದ ಮಹಾರಾಷ್ಟ್ರದಲ್ಲೆ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ವಾಸ್ತವವಾಗಿ, ವುಹಾನ್‌ನಲ್ಲಿ ವೈರಸ್ ಮೊದಲು ಕಾಣಿಸಿಕೊಂಡಿತ್ತು ಮತ್ತು ಮುಂಬೈ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯ ಅಂತರರಾಷ್ಟ್ರೀಯ ಪ್ರಯಾಣಿಕರು ಓಡಾಡುವ ಕಾರಣದಿಂದ ವಿಮಾನ ನಿಲ್ದಾಣದಲ್ಲಿ ಮತ್ತು ಸುತ್ತಮುತ್ತ ಕೆಲಸ ಮಾಡುವವರಿಗೆ ಹರಡಲು ಕಾರಣವಾಗಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದರು.

 • ಕಳೆದ ವರ್ಷ ಜೂನ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗತೊಡಗಿದವು, ವೈರಸ್‌ನ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಮೂರು ತಿಂಗಳ ಕಠಿಣ ಲಾಕ್‌ಡೌನ್‌ನ ನಂತರ ಕೇಂದ್ರವು ನಿರ್ಬಂಧಗಳನ್ನು ಸ್ವಲ್ಪ ಸಡಿಲಿಸಿತು.

 • ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿರುವುದರಿಂದ ಮತ್ತು ಜೀವನೋಪಾಯ ಹಾಗೂ ವ್ಯವಹಾರಗಳು ಸ್ಥಗಿತಗೊಳ್ಳುತ್ತಿರುವುದರಿಂದ ಲಾಕ್‌ಡೌನ್ ಅನ್ನು ತೆಗೆದುಹಾಕುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ತಜ್ಞರು ಹೇಳಿದ್ದರು. ಹೆಚ್ಚಿನ ಜನಸಂಖ್ಯೆಯ ಹೊರತಾಗಿಯೂ, ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಿದ ಕಾರಣವೇ ಕೊರೋನಾ ಅತೀ ಹೆಚ್ಚಾಗಿ ಹಬ್ಬಿತು ಎಂದೂ ತಜ್ಞರು ಹೇಳಿದರು.
 • ಲೋಕಲ್ ಟ್ರೈನ್ ಪುನರಾರಂಭವು ಕೊರೋನಾ ಹೆಚ್ಚಲು ಮತ್ತೊಂದು ಕಾರಣವಾಗಿದೆ ಎಂದು ಕೆಲವರು ನಂಬುತ್ತಾರೆ. ಕೊರೋನಾ ಟಾಸ್ಕ್'ನ ಫೋರ್ಸ್ ಸದಸ್ಯರಾದ ಡಾ.ಶಶಾಂಕ್ ಜೋಶಿ ಅವರನ್ನು ಇಂಡಿಯಾ ಟುಡೆಯಲ್ಲಿ ಉಲ್ಲೇಖಿಸಿದ್ದು, ಇದರ ಹಿಂದಿನ ಮತ್ತೊಂದು ಕಾರಣವೆಂದರೆ ಸಾರ್ವಜನಿಕರಿಗೆ ಲೋಕಲ್ ಟ್ರೈನ್ ಸೇವೆಗಳ ಪ್ರಾರಂಭವೆಂದು ಹೇಳಿದರು. "ಡಿಸೆಂಬರ್-ಜನವರಿ ತಿಂಗಳಲ್ಲಿ ಹೊಸ ಪ್ರಕರಣಗಳು ನಿಯಂತ್ರಣದಲ್ಲಿತ್ತು ಮತ್ತು ಫೆಬ್ರವರಿಯಿಂದ ಈ ಏರಿಕೆ ಕಂಡು ಬಂದಿದೆ. ಫೆಬ್ರವರಿ 1ರಿಂದ ಎಲ್ಲರಿಗೂ ಲೋಕಲ್ ಟ್ರೈನ್ ಸೇವೆಗಳನ್ನು ತೆರೆಯಲಾಗಿದೆ ”ಎಂದು ಅವರು ಹೇಳಿದರು.

 • ಕೋವಿಡ್ ನಿರ್ವಹಣೆ ಕುರಿತು ಮಹಾರಾಷ್ಟ್ರ ಸರ್ಕಾರದ ಸಲಹೆಗಾರ ಡಾ.ಸುಭಾಷ್ ಸಲುಂಕೆ ಹೇಳಿದ್ದೇನೆಂದರೆ “ಜನರ ಕೊರೋನಾ ಪರೀಕ್ಷೆ ಮತ್ತು ಸಂಪರ್ಕಗಳ ಪತ್ತೆಹಚ್ಚುವಿಕೆ ಇನ್ನೂ ಕಠಿಣವಾಗಿ ನಡೆಯಬೇಕಿತ್ತು. ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಇವೆರೆಡು ತುಂಬಾನೇ ಮುಖ್ಯವಾದುದು.


ಅತ್ಯಂತ ಪ್ರಮುಖ ನಿಯಮ:

 • ಪರೀಕ್ಷೆ ಮಾಡುವುದು, ಟ್ರ್ಯಾಕ್ ಮಾಡುವುದು ಮತ್ತು ಐಸೊಲೇಟ್ ಮಾಡುವುದು.

 • ಕೊರೋನಾ ಪ್ರಕರಣಗಳ ಸಂಪರ್ಕವನ್ನು ಪತ್ತೆಹಚ್ಚವ, ಪರೀಕ್ಷಿಸವ, ಅವರನ್ನು ಪ್ರತ್ಯೇಕಿಸುವ ಕಾರ್ಯವನ್ನು ತ್ವರಿತವಾಗಿ ಮಾಡಬೇಕು ಮತ್ತು ಮಹಾರಾಷ್ಟ್ರದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರಲ್ಲಿ ಕೋವಿಡ್ ನ ಸೂಕ್ತ ನಡವಳಿಕೆಯನ್ನು ಅನುಸರಿಸುವುದಿಲ್ಲ ಎಂದು ಕೇಂದ್ರ ತಂಡದ ವರದಿಯು ಎತ್ತಿ ತೋರಿಸಿದೆ. "ಕೇಸ್-ಸಂಪರ್ಕ ಅನುಪಾತವು 1:20ಗಿಂತ ಹೆಚ್ಚಾಗಿದೆ.

 • ಇದು ಹೆಚ್ಚು ಕಾಣಿಸಿಕೊಂಡರೂ, ಕೋರೋನಾ ಜೊತೆಗಿನ ಸಂಪರ್ಕ ಪತ್ತೆಹಚ್ಚುವಿಕೆಯ ವಿಧಾನಕ್ಕೆ ಹೆಚ್ಚು ಗಮನ ವಹಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಇದರ ಪರಿಕಲ್ಪನೆಯನ್ನು ಕ್ಷೇತ್ರ ಮಟ್ಟದ ಸಿಬ್ಬಂದಿಗಳು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲಾಗುವುದಿಲ್ಲ, ಅವರು ಮುಖ್ಯವಾಗಿ ಕುಟುಂಬ ಮತ್ತು ನೆರೆಹೊರೆಯ ಸಂಪರ್ಕಗಳನ್ನು ಪಟ್ಟಿ ಮಾಡಬೇಕು. "ಕೆಲಸದ ಸ್ಥಳದಲ್ಲಿರುವ ಸಂಪರ್ಕಗಳು, ಸಾಮಾಜಿಕ ಸಂಪರ್ಕಗಳು ಮತ್ತು ಕುಟುಂಬದಲ್ಲಿನ ಸಂಪರ್ಕಗಳನ್ನು ಇವು ಪ್ರಮುಖ ಅಪಾಯದ ಸಂಪರ್ಕಗಳನ್ನು ಮಹಾರಾಷ್ಟ್ರ ಸರಕಾರ ತನಿಖೆ ಮಾಡಿಲ್ಲ ಮತ್ತು ಅದರ ಪಟ್ಟಿಯೂ ಮಾಡಿಲ್ಲ ಎಂದು ಕೇಂದ್ರ ಸರಕಾರ ಈ ವರದಿ ಹೈಲೈಟ್ ಮಾಡಿದೆ.

 • ಕೇಂದ್ರ ತಂಡದ ವರದಿಯನ್ನು ಆಧರಿಸಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ, "ರಾತ್ರಿ ಕರ್ಫ್ಯೂಗಳು, ವಾರಾಂತ್ಯದ ಲಾಕ್‌ಡೌನ್‌ಗಳು ಮುಂತಾದ ಕ್ರಮಗಳು ಮಾಡಬೇಕು ಇಲ್ಲದಿದ್ದಲ್ಲಿ ಇದು ಹೆಚ್ಚು ಪರಿಣಾಮ ಬೀರುತ್ತವೆ" ಎಂದು ಬರೆದು ಕೊಂಡಿದ್ದಾರೆ ಮತ್ತು ರಾಜ್ಯವನ್ನು ಒತ್ತಾಯಿಸಿದೆ ಕಟ್ಟುನಿಟ್ಟಾದ ಕ್ರಮಗಳ ಮೇಲೆ ಕೇಂದ್ರೀಕರಿಸಬೇಕು, ಕಣ್ಗಾವಲು ಬಲಪಡಿಸಬೇಕು ಮತ್ತು ಪರೀಕ್ಷೆಯನ್ನು ಹೆಚ್ಚಿಸಬೇಕೆಂದು ಹೇಳಿದೆ.

 • ಪ್ರತಿ ಪಾಸಿಟಿವ್ ಪ್ರಕರಣಕ್ಕೂ, ಕನಿಷ್ಠ 20 ರಿಂದ 30 ಹತ್ತಿರದ ಸಂಪರ್ಕಗಳನ್ನು (ಕುಟುಂಬದವರ ಸಂಪರ್ಕಗಳು, ಸಾಮಾಜಿಕ ಸಂಪರ್ಕಗಳು, ಕೆಲಸದ ಸಂಪರ್ಕಗಳು ಮತ್ತು ಇತರ ಪ್ರಾಸಂಗಿಕ ಸಂಪರ್ಕಗಳು ಸೇರಿದಂತೆ) ತ್ವರಿತವಾಗಿ ಪತ್ತೆಹಚ್ಚಬೇಕು ಮತ್ತು 80-85 ಪೂರ್ವ ಶೇಕಡಾ ಸಕ್ರಿಯ ಪ್ರಕರಣಗಳನ್ನು ಮನೆಯಲ್ಲಿ ಹೋಮ್ ಕ್ವಾರಂಟೈನ್ ಮಾಡಿ ಅವರನ್ನು ಪ್ರತ್ಯೇಕತೆವಾಗಿ ಪರಿಶೀಲಿಸಬೇಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Published by: Sushma Chakre
First published: March 17, 2021, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories