ಕೊರೊನಾ ಎಫೆಕ್ಟ್​: ಚೀನಾದಿಂದ ಎಲೆಕ್ಟ್ರಾನಿಕ್ ಸರಕುಗಳ ಪೂರೈಕೆಯಲ್ಲಿ ಇಳಿಕೆ, ತಟ್ಟಲಿದೆ ಬೆಲೆ ಏರಿಕೆ ಬಿಸಿ

ಚೀನಾ ಮತ್ತು ದಕ್ಷಿಣ ಕೋರಿಯಾ ಭಾರತಕ್ಕೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಪೂರೈಸುವ ಪ್ರಮುಖ ದೇಶಗಳು. ಭಾರತದ ಪಾಲಿಗೆ ಜನಪ್ರಿಯ ಬ್ರ್ಯಾಂಡ್ ಆಗಿರುವ ಎಲ್​ಜಿ ಮತ್ತು ಸ್ಯಾಮ್​ಸಾಂಗ್ ಬ್ರಾಂಡ್​ಗಳ​ ಎಲೆಕ್ಟ್ರಾನಿಕ್ ವಸ್ತುಗಳನ್ನು ಭಾರತ ಈ ಎರಡು ದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಅದರಲ್ಲೂ ಭಾರತ ಆಮದು ಮಾಡಿಕೊಳ್ಳುತ್ತಿರುವ ಎಲೆಕ್ಟ್ರಾನಿಕ್ ಸಾಮಗ್ರಿಗಳ ಪೈಕಿ ಚೀನಾದ ಪಾಲು ಶೇ.24.

MAshok Kumar | news18-kannada
Updated:February 24, 2020, 8:57 PM IST
ಕೊರೊನಾ ಎಫೆಕ್ಟ್​: ಚೀನಾದಿಂದ ಎಲೆಕ್ಟ್ರಾನಿಕ್ ಸರಕುಗಳ ಪೂರೈಕೆಯಲ್ಲಿ ಇಳಿಕೆ, ತಟ್ಟಲಿದೆ ಬೆಲೆ ಏರಿಕೆ ಬಿಸಿ
ಪ್ರಾತಿನಿಧಿಕ ಚಿತ್ರ.
  • Share this:
ಕಳೆದ ಒಂದು ತಿಂಗಳಿನಿಂದ ಚೀನಾ ದೇಶದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್, ಇದೀಗ ಚೀನಾ ಮತ್ತು ದಕ್ಷಿಣ ಕೋರಿಯಾದಿಂದ ಭಾರತಕ್ಕೆ ಆಮದಾಗುತ್ತಿದ್ದ ಎಲೆಕ್ಟ್ರಾನಿಕ್ ವಸ್ತುಗಳ ಕೊರತೆಗೂ ಕಾರಣವಾಗುವ ಮೂಲಕ ದೇಶದ ಎಲೆಕ್ಟ್ರಾನಿಕ್ ಮಾರುಕಟ್ಟೆಯಲ್ಲಿ ಹೊಸ ಬಿಕ್ಕಟ್ಟೊಂದನ್ನು ಸೃಷ್ಟಿಸಿದೆ. ಅಲ್ಲದೆ, ಮೇ ಅಂತ್ಯದ ವೇಳೆಗೆ ದೇಶದಲ್ಲಿರುವ ಎಲೆಕ್ಟ್ರಾನಿಕ್ ವಸ್ತುಗಳ ದಾಸ್ತಾನು ಖಾಲಿಯಾಗಲಿದ್ದು, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಶೇ. 10 ರಿಂದ 15 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಚೀನಾ ಮತ್ತು ದಕ್ಷಿಣ ಕೋರಿಯಾ ಭಾರತಕ್ಕೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಪೂರೈಸುವ ಪ್ರಮುಖ ದೇಶಗಳು. ಭಾರತದ ಪಾಲಿಗೆ ಜನಪ್ರಿಯ ಬ್ರ್ಯಾಂಡ್ ಆಗಿರುವ ಎಲ್​ಜಿ ಮತ್ತು ಸ್ಯಾಮ್​ಸಾಂಗ್ ಬ್ರಾಂಡ್​ಗಳ​ ಎಲೆಕ್ಟ್ರಾನಿಕ್ ವಸ್ತುಗಳನ್ನು ಭಾರತ ಈ ಎರಡು ದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಭಾರತದ ಎಲೆಕ್ಟ್ರಾನಿಕ್ ಮಾರುಕಟ್ಟೆ ಅತಿಹೆಚ್ಚು ಅವಲಂಭಿತವಾಗಿರುವುದು ಈ ಎರಡು ದೇಶಗಳ ಮೇಲೆಯೇ . ಅದರಲ್ಲೂ ಭಾರತ ಆಮದು ಮಾಡಿಕೊಳ್ಳುತ್ತಿರುವ ಎಲೆಕ್ಟ್ರಾನಿಕ್ ಸಾಮಗ್ರಿಗಳ ಪೈಕಿ ಚೀನಾದ ಪಾಲು ಶೇ.24.

ಆದರೆ, ಕೊರೊನಾ ವೈರಸ್​ ಈ ಎರಡೂ ದೇಶಗಳಲ್ಲಿ ಇದೀಗ ಸಾಕ್ಷಾತ್ ಮರಣ ಮೃಧಂಗ ಬಾರಿಸುತ್ತಿದೆ. ಚೀನಾದಲ್ಲಿ ಆರಂಭವಾದ ಕೊರೊನಾ ವೈರಸ್​ ಇದೀಗ ದಕ್ಷಿಣ ಕೋರಿಯಾಗೂ ವ್ಯಾಪಿಸಿದೆ. ಈ ಎರಡೂ ದೇಶಗಳಲ್ಲಿ ಇದೀಗ 2,500ಕ್ಕೂ ಅಧಿಕ ಜನ ಈ ವೈರಸ್​ನಿಂದ ಸಾವನ್ನಪ್ಪಿದ್ದಾರೆ. ಅಲ್ಲದೆ, ಈ ವೈರಸ್​ಗೆ ಹೆದರಿ ಕಾರ್ಮಿಕರು ಎಲೆಕ್ಟ್ರಾನಿಕ ಸಾಮಗ್ರಿಗಳ ಉತ್ಪಾದನಾ ಘಟಕಗಳಿಗೆ ಕೆಲಸಕ್ಕೂ ತೆರಳುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಈ ಎರಡೂ ದೇಶಗಳ ಹತ್ತಾರು ಘಟಕಗಳನ್ನು ಮುಚ್ಚಲಾಗಿದೆ.

ಪರಿಣಾಮ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಇಳಿಕೆಯಾಗಿದ್ದು, ಭಾರತದ ರಫ್ತನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪರಿಣಾಮ ಮೇ ಅಂತ್ಯದ ವೇಳೆ ಭಾರತದಲ್ಲಿರುವ ದಾಸ್ತಾನುಗಳು ಖಾಲಿಯಾಗಲಿದ್ದು, ಬೇಸಿಗೆಯ ಆರಂಭಕ್ಕೂ ಮುನ್ನ ಹವಾ ನಿಯಂತ್ರಣ ಮತ್ತು ರೆಫ್ರಿಜರೇಟರ್​ಗಳನ್ನು ಖರೀದಿಸಲು ಧಾವಿಸುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಅಂಕಿಅಂಶಗಳ ಪ್ರಕಾರ ಪ್ರತಿಯೊಂದು ವಸ್ತುಗಳ ಬೆಲೆಯೂ ಶೇ.10ರಿಂದ15 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿಯೊಬ್ಬರು“ನಾವು ಚೀನಾ ಮತ್ತು ದಕ್ಷಿಣ ಕೊರಿಯಾದ ಉತ್ಪಾದನಾ ಘಟಕಗಳೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದೇವೆ. ಈ ದೇಶಗಳಲ್ಲಿ ಕೊರೊನಾ ಸೃಷ್ಟಿಸಿರುವ ಆತಂಕ ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ. ಅಲ್ಲದೆ, ಈ ದೇಶಗಳಿಂದ ಎಲೆಕ್ಟ್ರಾನಿಕ್ ವಸ್ತುಗಳ ಆಮದು ಸಂಪೂರ್ಣವಾಗಿ ನಿಂತಿದ್ದು, ಎಲ್ಲಾ ದಾಸ್ತಾನುಗಳು ಮೇ ಮೊದಲ ವಾರದವರೆಗೆ ಮಾತ್ರ ಇರುತ್ತದೆ. ಆನಂತರ ಪರಿಸ್ಥಿತಿ ನಮ್ಮ ಕೈಮೀರಲಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

 

ಇದನ್ನೂ ಓದಿ : ಚೀನಾದಲ್ಲಿ ಸಾವಿನ ಸಂಖ್ಯೆ 2,442ಕ್ಕೆ ಏರಿಕೆ; ನಾಲ್ವರು ಭಾರತೀಯರಲ್ಲಿ ಕೊರೊನಾ ಸೋಂಕು
First published:February 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading