ಕೊರೋನಾ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಸೋಂಕೇ ಇರಲಿಲ್ಲ; ವರದಿಯಲ್ಲಿ ದೃಢ

ಪಂಜಾಬ್​ನ ಬಾಲಾಚೌರ್​ನವನಾದ 23 ವರ್ಷದ ಯುವಕ ಸಿಡ್ನಿಯಿಂದ ವಾಪಾಸಾಗಿದ್ದ. ಆತನನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆತಂದು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು

Sushma Chakre | news18-kannada
Updated:March 27, 2020, 9:44 AM IST
ಕೊರೋನಾ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಸೋಂಕೇ ಇರಲಿಲ್ಲ; ವರದಿಯಲ್ಲಿ ದೃಢ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಮಾ. 27): ಸಿಡ್ನಿಯಿಂದ ಭಾರತಕ್ಕೆ ವಾಪಾಸಾಗಿದ್ದ ಯುವಕನನ್ನು ಕೊರೋನಾ ವೈರಸ್​ ಶಂಕೆಯಿಂದ ಮಾ. 18ರಂದು ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತನ ವೈದ್ಯಕೀಯ ಪರೀಕ್ಷೆಯ ವರದಿ ಬರುವುದರೊಳಗೆ ಆತ ಆಸ್ಪತ್ರೆಯ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ವರದಿ ಈಗ ಬಂದಿದ್ದು, ಸೋಂಕಿನ ಭೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಆತನಿಗೆ ಕೊರೋನಾ ಸೋಂಕು ತಗುಲಿರಲಿಲ್ಲ ಎಂಬುದು ದೃಢಪಟ್ಟಿದೆ.

ಪಂಜಾಬ್​ನ ಬಾಲಾಚೌರ್​ನವನಾದ 23 ವರ್ಷದ ಯುವಕ ಸಿಡ್ನಿಯಿಂದ ವಾಪಾಸಾಗಿದ್ದ. ಆತನನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆತಂದು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು. ಆತನ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ, ವರದಿ ಬರುವುದರೊಳಗೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದ.

ಇದನ್ನೂ ಓದಿ: ಲಾಠಿ ಬಳಸದಂತೆ ಪೊಲೀಸ್ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ ನಗರ ಕಮಿಷನರ್ ಭಾಸ್ಕರ್ ರಾವ್

ಕಳೆದ ಒಂದು ವರ್ಷದಿಂದ ಸಿಡ್ನಿಯಲ್ಲೇ ನೆಲೆಸಿದ್ದ ಆತ ಭಾರತಕ್ಕೆ ವಾಪಾಸಾದ ನಂತರ ವಿಪರೀತ ತಲೆನೋವಿನಿಂದ ಬಳಲುತ್ತಿದ್ದ. ತನಗೆ ಕೊರೋನಾ ಸೋಂಕು ತಗುಲಿರಬಹುದು ಎಂಬ ಭಯದಿಂದ ಜೀವ ಕಳೆದುಕೊಳ್ಳಲು ನಿರ್ಧರಿಸಿದ್ದ ಆತ ತನ್ನ ವೈದ್ಯಕೀಯ ವರದಿ ಬರುವ ಮೊದಲೇ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನಿಗೆ ಯಾವುದೇ ಸೋಂಕು ತಗುಲಿರಲಿಲ್ಲ ಎಂಬುದು ಇದೀಗ ವರದಿಯಲ್ಲಿ ಖಚಿತವಾಗಿದೆ.

ಇದನ್ನೂ ಓದಿ: 21 ದಿನ ಲಾಕ್​ಡೌನ್ ಹಿನ್ನೆಲೆ; ಏ. 14ರವರೆಗೂ ಅಂತಾರಾಷ್ಟ್ರೀಯ ವಿಮಾನಗಳ ಪ್ರವೇಶ ನಿಷೇಧ

ಮೃತಪಟ್ಟ ವ್ಯಕ್ತಿಯ ಮನೆಯವರು ಸಫ್ದರ್​ಜಂಗ್ ಆಸ್ಪತ್ರೆಯ ಸಿಬ್ಬಂದಿ ಮೇಲೆ ದೂರು ದಾಖಲಿಸಿದ್ದಾರೆ. ತಮ್ಮ ಮಗನನ್ನು ಆಸ್ಪತ್ರೆಯಲ್ಲಿ ಸರಿಯಾಗಿ ನೋಡಿಕೊಂಡಿಲ್ಲ, ಆತನಿಗೆ ನಾನಾ ಪರೀಕ್ಷೆಗಳನ್ನು ಮಾಡಿ ಸಾವಿನ ಆತಂಕವನ್ನು ತುಂಬಲಾಗಿತ್ತು. ನಮಗೆ ಆತನನ್ನು ಭೇಟಿಯಾಗಲು ಕೂಡ ಆಸ್ಪತ್ರೆ ಸಿಬ್ಬಂದಿ ಅವಕಾಶ ನೀಡಲಿಲ್ಲ. ಕೊನೆಯ ಬಾರಿ ನಮ್ಮ ಮಗನನ್ನು ನೋಡಲು ಕೂಡ ಸಾಧ್ಯವಾಗಲಿಲ್ಲ. ಆತನ ಸಾವಿಗೆ ಆಸ್ಪತ್ರೆಯವರೇ ಕಾರಣ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ದೆಹಲಿ ವೈದ್ಯರಿಗೆ ಕೊರೋನಾ ಸೋಂಕು ದೃಢ​; ಅವರೊಂದಿಗೆ ಸಂಪರ್ಕ ಹೊಂದಿದ್ದ 800 ಜನಕ್ಕೆ ಗೃಹ ದಿಗ್ಬಂಧನ
First published:March 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading