ಚೀನಾದಲ್ಲಿ ಕೊರೊನಾ ದಾಳಿ: ರಫ್ತು ಹೆಚ್ಚಿಸಲು ಭಾರತಕ್ಕೆ ಅನುಕೂಲ ಎಂದ ಆರ್ಥಿಕ ಸಲಹೆಗಾರ

ಚೀನಾದಲ್ಲಿ ತಲೆ ಎತ್ತಿದ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ವ್ಯಾಪಿಸುತ್ತಿದೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ಈ ವೈರಸ್ ಲಗ್ಗೆ ಹಾಕಿದೆ. ಚೀನಾದಲ್ಲಂತೂ ಕೆಲ ವಾರಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ಧಾರೆ.

news18
Updated:February 13, 2020, 4:01 PM IST
ಚೀನಾದಲ್ಲಿ ಕೊರೊನಾ ದಾಳಿ: ರಫ್ತು ಹೆಚ್ಚಿಸಲು ಭಾರತಕ್ಕೆ ಅನುಕೂಲ ಎಂದ ಆರ್ಥಿಕ ಸಲಹೆಗಾರ
ಕೃಷ್ಣಮೂರ್ತಿ ಸುಬ್ರಮಣಿಯನ್
  • News18
  • Last Updated: February 13, 2020, 4:01 PM IST
  • Share this:
ಕೋಲ್ಕತಾ(ಫೆ. 13): ಕೊರೊನಾ ವೈರಸ್​ನಿಂದ ತೀವ್ರ ಮಟ್ಟದಲ್ಲಿ ಬಾಧಿತವಾಗಿರುವ ಚೀನಾ ದೇಶದಲ್ಲಿ ಜನರು ಹೊರಬರಲು ಹೆದರುತ್ತಿದ್ದಾರೆ. ಅನೇಕ ಕಾರ್ಖಾನೆಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ. ಭಾರತ ತನ್ನ ವ್ಯವಹಾರ ವೃದ್ಧಿಸಿಕೊಳ್ಳಲು ಇದು ಸಕಾಲ ಎಂಬುದು ಕೆಲ ಆರ್ಥಿಕ ತಜ್ಞರ ಸಲಹೆ. ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ ಕೂಡ ಇದೇ ವಿಚಾರವನ್ನು ಉಲ್ಲೇಖಿಸಿದ್ದಾರೆ. ರಫ್ತು ಹೆಚ್ಚಿಸಲು ಭಾರತಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ಸುಬ್ರಮಣಿಯನ್ ಅಭಿಪ್ರಾಯಪಟ್ಟಿದ್ದಾರೆ.

ಕೋಲ್ಕತಾದ ಐಐಎಂನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮುಖ್ಯ ಆರ್ಥಿಕ ಸಲಹೆಗಾರ, “ಮುಂದೇನಾಗುತ್ತದೆ ಎಂದು ಹೇಳುವುದು ಬಹಳ ಕಷ್ಟ. ಆದರೆ, ಕೊರೊನಾ ವೈರಸ್ ಉದ್ಭಯವಾಗಿರುವುದು ಭಾರತಕ್ಕೆ ರಫ್ತು ಆಧಾರಿತ ಆರ್ಥಿಕತೆಯ ವ್ಯವಸ್ಥೆ ತರಲು ಅವಕಾಶ ಮಾಡಿಕೊಟ್ಟಿದೆ” ಎಂದು ಕೆ. ಸುಬ್ರಮಣಿಯನ್ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಆಮ್ ಆದ್ಮಿ ಗೆಲುವು ಸಾಧಿಸಿದ 24 ಗಂಟೆಯಲ್ಲಿ ಪಕ್ಷಕ್ಕೆ ಹೊಸದಾಗಿ 1 ದಶಲಕ್ಷ ಜನ ಸೇರ್ಪಡೆ

“ಚೀನಾ ದೇಶ ವಿವಿಧ ಕಚ್ಛಾವಸ್ತು, ಬಿಡಿಭಾಗಗಳನ್ನ ಆಮದು ಮಾಡಿಕೊಂಡು, ಬಳಿಕ ಅವನ್ನು ಜೋಡಿಸಿ ಅಂತಿಮ ಉತ್ಪನ್ನವನ್ನು ರಫ್ತು ಮಾಡುತ್ತದೆ. ಭಾರತ ಕೂಡ ಮೊಬೈಲ್ ತಯಾರಿಕೆಯ ವಿಚಾರದಲ್ಲಿ ಇದೇ ಮಾದರಿ ಅನುಸರಿಸುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಭಾರತಕ್ಕೆ ಒಳ್ಳೆಯ ಅವಕಾಶದ ಬಾಗಿಲು ತೆರೆದಂತೆ ತೋರುತ್ತದೆ” ಎಂಬುದು ಭಾರತದ ಚೀಫ್ ಎಕನಾಮಿಕ್ ಅಡ್ವೈಸರ್ ಅವರ ಅನಿಸಿಕೆ.

ಚೀನಾದಲ್ಲಿ ತಲೆ ಎತ್ತಿದ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ವ್ಯಾಪಿಸುತ್ತಿದೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ಈ ವೈರಸ್ ಲಗ್ಗೆ ಹಾಕಿದೆ. ಚೀನಾದಲ್ಲಂತೂ ಕೆಲ ವಾರಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ಧಾರೆ. ಲಕ್ಷಾಂತರ ಮಂದಿಗೆ ಸೋಂಕು ತಗುಲಿದೆ. ಈ ಹೊಸ ಕಾಯಿಲೆಗೆ ಮದ್ದು ಹುಡುಕಲು ವೈದ್ಯರು ಈಗಲೂ ಹರಸಾಹಸ ನಡೆಸುತ್ತಿದ್ದಾರೆ. ಆದರೆ, ಔಷಧ ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: Corona Virus: ಕೊರೊನಾ ವೈರಸ್​ಗೆ ಹುಬೈ​ನಲ್ಲಿ ಒಂದೇ ದಿನ 242 ಸಾವು; ಚೀನಾದಲ್ಲಿ ಮೃತರ ಸಂಖ್ಯೆ 1,355ಕ್ಕೆ ಏರಿಕೆ

ರಫ್ತು ಆಧಾರಿತ ಆರ್ಥಿಕತೆಯ ವ್ಯವಸ್ಥೆಗೆ ಜೋತುಬಿದ್ದಿರುವ ಚೀನಾ ದೇಶಕ್ಕೆ ಈಗ ಅಕ್ಷರಶಃ ಆರ್ಥಿಕ ದಿಗ್ಬಂಧನದಂತಾಗಿದೆ. ಚೀನಾದಿಂದ ವಿವಿಧ ಉತ್ಪನ್ನಗಳು ಮತ್ತು ಕಚ್ಛಾವಸ್ತುಗಳ ಪೂರೈಕೆ ಕಾಣುತ್ತಿದ್ದ ವಿವಿಧ ರಾಷ್ಟ್ರಗಳಿಗೂ ಇದರ ಬಿಸಿ ತಾಗಿದೆ. ಕೊರೊನಾ ವೈರಸ್​ನಿಂದ ಉದ್ಭವವಾಗಿರುವ ಪರಿಸ್ಥಿತಿಗೆ ಅಮೆರಿಕ ಕೂಡ ಆತಂಕಗೊಂಡಿದೆ. ಚೀನಾ ಕಡೆಯಿಂದ ಪೂರೈಕೆ ನಿಂತು ಹೋದ ಬೆನ್ನಲ್ಲೇ ಸರಬರಾಜು ವ್ಯವಸ್ಥೆಗೆ (ಸಪ್ಲೈ ಚೈನ್) ಹಿನ್ನಡೆಯಾಗಿದೆ. ಇದನ್ನು ಸರಿದೂಗಿಸಲು ಬೇರೆ ಬೇರೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ಇಂಥ ಸರಿಪಡಿಸುವಿಕೆಯ ಕ್ರಮಗಳಲ್ಲಿ ಭಾರತಕ್ಕೆ ಅನುಕೂಲಕರ ಪರಿಸ್ಥಿತಿಯ ಅವಕಾಶ ಇರುವ ಸಾಧ್ಯತೆ ಇಲ್ಲದಿಲ್ಲ.ಕಳೆದೊಂದು ವರ್ಷದಿಂದ ಭಾರತದ ಆರ್ಥಿಕತೆ ತೀವ್ರ ಮಟ್ಟದಲ್ಲಿ ಕುಸಿಯುತ್ತಿದೆ. ಕಳೆದ ವರ್ಷದ ಜಿಡಿಪಿ ವೃದ್ಧಿ ದರ ಶೇ. 5ಕ್ಕೆ ಬಂದು ನಿಲ್ಲುವ ಸಾಧ್ಯತೆ ಇದೆ. ಈ ವರ್ಷ ಆರ್ಥಿಕತೆ ಚೇತರಿಕೆ ತೋರಬಹುದು ಎಂದು ಕೇಂದ್ರ ಸರ್ಕಾರ ನಂಬಿಕೊಂಡಿದೆ. ಆದರೆ, ವಿವಿಧ ಕ್ಷೇತ್ರಗಳ ಅಭಿವೃದ್ಧಿ ಇನ್ನೂ ತೀರಾ ಮಂದಗತಿಯಲ್ಲೇ ಸಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಭಾರತವನ್ನು ಸಹಜವಾಗಿಯೇ ತಲ್ಲಣಗೊಳಿಸಿದೆ. ಆದರೆ, ಇದನ್ನೇ ಒಂದು ಅನುಕೂಲಕರ ಪರಿಸ್ಥಿತಿಯಾಗಿ ಮಾರ್ಪಡಿಸಿಕೊಳ್ಳಬಹುದು ಎಂದು ಕೆ. ಸುಬ್ರಮಣಿಯನ್ ಹೇಳಿರುವುದು ಗಮನಾರ್ಹವೆನಿಸಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading