• Home
  • »
  • News
  • »
  • coronavirus-latest-news
  • »
  • ನಿಲ್ಲದ ಕೊರೋನಾ ಅಬ್ಬರ; ಇರಾನ್​ನಿಂದ 53 ಭಾರತೀಯರು ತಾಯ್ನಾಡಿಗೆ ವಾಪಾಸ್

ನಿಲ್ಲದ ಕೊರೋನಾ ಅಬ್ಬರ; ಇರಾನ್​ನಿಂದ 53 ಭಾರತೀಯರು ತಾಯ್ನಾಡಿಗೆ ವಾಪಾಸ್

ಇರಾನ್​ನಿಂದ ಬಂದ ಭಾರತೀಯರ ಲಗೇಜ್​ಗಳಿಗೆ ಔಷಧ ಸಿಂಪಡಿಸುತ್ತಿರುವ ಸಿಬ್ಬಂದಿ

ಇರಾನ್​ನಿಂದ ಬಂದ ಭಾರತೀಯರ ಲಗೇಜ್​ಗಳಿಗೆ ಔಷಧ ಸಿಂಪಡಿಸುತ್ತಿರುವ ಸಿಬ್ಬಂದಿ

ಇರಾನ್‍ನಲ್ಲಿದ್ದ 53 ಜನ ಭಾರತೀಯರು ಇಂದು ದೇಶಕ್ಕೆ ವಾಪಸಾಗಿದ್ದಾರೆ. ಬೆಳಗ್ಗೆ ರಾಜಸ್ಥಾನದ ಜೈಸಲ್ಮೇರ್ ವಿಮಾನ ನಿಲ್ದಾಣಕ್ಕೆ ಬಂದಿರುವ ಭಾರತೀಯರನ್ನು ಪ್ರಾಥಮಿಕ ಸ್ಕ್ರೀನಿಂಗ್ ತಪಾಸಣೆಗಾಗಿ ಸೇನಾ ಸ್ವಾಸ್ಥ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

  • Share this:

ನವದೆಹಲಿ (ಮಾ. 16): ವಿಶ್ವದೆಲ್ಲೆಡೆ 6,515 ಜನರನ್ನು ಬಲಿ ತೆಗೆದುಕೊಂಡಿರುವ ಕೊರೋನಾ ವೈರಸ್​ ಎಲ್ಲ ದೇಶಗಳಲ್ಲೂ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಇರಾನ್​ನಲ್ಲಿದ್ದ 53 ಭಾರತೀಯರನ್ನು ಭಾರತಕ್ಕೆ ವಾಪಾಸ್ ಕರೆತರಲಾಗಿದೆ. ಇರಾನ್​ನಲ್ಲಿದ್ದ 52 ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕನನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಒಟ್ಟಾರೆ, ಇದುವರೆಗೂ 389 ಭಾರತೀಯರನ್ನು ಇರಾನ್​ನಿಂದ ಸ್ವದೇಶಕ್ಕೆ ಸ್ಥಳಾಂತರ ಮಾಡಿದಂತಾಗಿದೆ.

ಇರಾನ್‍ನಲ್ಲಿದ್ದ 53 ಜನ ಭಾರತೀಯರು ಇಂದು ದೇಶಕ್ಕೆ ವಾಪಸಾಗಿದ್ದಾರೆ. ಬೆಳಗ್ಗೆ ರಾಜಸ್ಥಾನದ ಜೈಸಲ್ಮೇರ್ ವಿಮಾನ ನಿಲ್ದಾಣಕ್ಕೆ ಬಂದಿರುವ ಭಾರತೀಯರನ್ನು ಪ್ರಾಥಮಿಕ ಸ್ಕ್ರೀನಿಂಗ್ ತಪಾಸಣೆಗಾಗಿ ಸೇನಾ ಸ್ವಾಸ್ಥ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಇರಾನ್‍ನ ತೆಹ್ರಾನ್ ಹಾಗೂ ಶಿರಾಜ್ ನಗರಗಳಲ್ಲಿ ವಾಸವಾಗಿದ್ದ ಭಾರತೀಯರನ್ನು ವಾಪಾಸ್ ಕರೆತರಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 110ಕ್ಕೇರಿಕೆ; ವಿಶ್ವಾದ್ಯಂತ 6,515 ಬಲಿ

ಇಟಲಿ ಮತ್ತು ಇರಾನ್​ನಲ್ಲಿ ಸಿಲುಕಿದ್ದ 450ಕ್ಕೂ ಹೆಚ್ಚು ಭಾರತೀಯರನ್ನು ಏರ್​ ಇಂಡಿಯಾ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ. ವಿದೇಶದಿಂದ ಬಂದಿರುವ ಭಾರತೀಯರ ಸುರಕ್ಷತೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ವಿದೇಶಾಂಗ ಸಚಿವಾಲಯ ಕೈಗೊಂಡಿದೆ.ವಿಶ್ವಾದ್ಯಂತ ಕೊರೋನಾಗೆ 6,515 ಜನ ಬಲಿಯಾಗಿದ್ದಾರೆ. ಇಟಲಿಯಲ್ಲಿ ನಿನ್ನೆ ಒಂದೇ ದಿನ 368 ಜನ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಇದುವರೆಗೂ 1,809 ಜನರು ಸಾವನ್ನಪ್ಪಿದ್ದು, ಚೀನಾ ರೀತಿಯಲ್ಲೇ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇರಾನ್​ನಲ್ಲಿ ನಿನ್ನೆ ಒಂದೇ ದಿನ 113 ಮಂದಿ ಬಲಿಯಾಗಿದ್ದಾರೆ. ಇರಾನ್​ನಲ್ಲಿ ಈವರೆಗೆ 724 ಮಂದಿ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ 3,213, ಸ್ಪೇನ್​ನಲ್ಲಿ 292, ಫ್ರಾನ್ಸ್​ನಲ್ಲಿ 127, ಅಮೆರಿಕಾ 68, ಜಪಾನ್ 24, ನೆದರ್ಲೆಂಡ್​ನಲ್ಲಿ 20 ಜನ ಬಲಿಯಾಗಿದ್ದಾರೆ. ವಿಶ್ವಾದ್ಯಂತ 1,69,417 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇದನ್ನೂ ಓದಿ: ಇಟಲಿಯಲ್ಲಿ ನಿಲ್ಲದ ಕೊರೋನಾ ಹಾವಳಿ; ಭಾನುವಾರ ಒಂದೇ ದಿನ 368 ಸಾವು, 3,500 ಹೊಸ ಪ್ರಕರಣ

ಭಾರತದಲ್ಲಿ 110 ಜನರಿಗೆ ಕೊರೋನಾ ವೈರಸ್ ಹರಡಿದೆ. 93 ಭಾರತೀಯರು, 17 ವಿದೇಶಿಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ 32, ಕೇರಳದಲ್ಲಿ 22, ಹರಿಯಾಣದಲ್ಲಿ 14, ಉತ್ತರ ಪ್ರದೇಶದಲ್ಲಿ 13, ದೆಹಲಿಯಲ್ಲಿ 7, ಲಡಾಖ್​ನಲ್ಲಿ 3, ರಾಜಸ್ಥಾನದಲ್ಲಿ 4, ಕರ್ನಾಟಕದಲ್ಲಿ 7, ತೆಲಂಗಾಣದಲ್ಲಿ 3, ಜಮ್ಮು-ಕಾಶ್ಮೀರದಲ್ಲಿ 2, ಉತ್ತರಾಖಂಡ್, ಆಂಧ್ರ ಪ್ರದೇಶ, ತಮಿಳುನಾಡು, ಪಂಜಾಬ್​ನಲ್ಲಿ ತಲಾ ಒಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

First published: