HOME » NEWS » Coronavirus-latest-news » CORONAVIRUS OUTBREAK KERALA ON WAR FOOTING AS 3RD TESTS POSITIVE AIRPORTS SEAPORTS MONITORED STATE CALAMITY DECLARED LG

ಕೊರೊನಾ ವೈರಸ್​: ಚೀನಾದಲ್ಲಿ ಸಾವಿನ ಸಂಖ್ಯೆ 425ಕ್ಕೆ ಏರಿಕೆ; ಕೇರಳದಲ್ಲಿ ರಾಜ್ಯ ವಿಪತ್ತು ಘೋಷಣೆ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಆದೇಶದಂತೆ ರಾಜ್ಯ ವಿಪತ್ತು ಘೋಷಿಸಲಾಗಿದೆ, ಎಂದು ಆರೋಗ್ಯ ಸಚಿವೆ ಕೆಕೆ ಶೈಲಜಾ ತಿಳಿಸಿದ್ದಾರೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

news18-kannada
Updated:February 4, 2020, 8:47 AM IST
ಕೊರೊನಾ ವೈರಸ್​: ಚೀನಾದಲ್ಲಿ ಸಾವಿನ ಸಂಖ್ಯೆ 425ಕ್ಕೆ ಏರಿಕೆ; ಕೇರಳದಲ್ಲಿ ರಾಜ್ಯ ವಿಪತ್ತು ಘೋಷಣೆ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಫೆ.04): ಮಾರಣಾಂತಿಕ ಕೊರೊನಾ ವೈರಸ್​​ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 425ಕ್ಕೆ ಏರಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದಿನೇ ದಿನೇ ಈ ಕೊರೊನಾ ವೈರಸ್​​ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಚೀನಾದಲ್ಲಿ ಈವರೆಗೆ ಕೊರೊನಾ ಪತ್ತೆಯಾಗಿರುವ ಪ್ರಕರಣಗಳು ಒಟ್ಟು 20,438. ಹೊಸದಾಗಿ 3235 ಪ್ರಕರಣಗಳು ಪತ್ತೆಯಾಗಿದ್ದು, ಆತಂಕ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಭಾರತದಲ್ಲೂ ಈ ಕೊರೊನಾ ವೈರಸ್​​ ಭೀತಿ ಹೆಚ್ಚಾಗಿದ್ದು, ಎಲ್ಲೆಡೆ ಹೈ ಅಲರ್ಟ್​​ ಘೋಷಣೆ ಮಾಡಲಾಗಿದೆ. ನೆರೆಯ ರಾಜ್ಯ ಕೇರಳದಲ್ಲಿ ಈಗಾಗಲೇ ಮೂರು ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕೇರಳ ಸರ್ಕಾರ ‘ರಾಜ್ಯ ವಿಪತ್ತು’ ಘೋಷಣೆ ಮಾಡಿದೆ. "ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಆದೇಶದಂತೆ ರಾಜ್ಯ ವಿಪತ್ತು ಘೋಷಿಸಲಾಗಿದೆ," ಎಂದು ಆರೋಗ್ಯ ಸಚಿವೆ ಕೆಕೆ ಶೈಲಜಾ ತಿಳಿಸಿದ್ದಾರೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕೇರಳದಲ್ಲಿ ಕೊರೋನಾ ವೈರಸ್ ಪತ್ತೆ ಹಿನ್ನೆಲೆ; ಕೊಡಗು, ಚಾಮರಾಜನಗರದಲ್ಲಿ ಹೈ ಅಲರ್ಟ್

ಈವರೆಗೆ ಚೀನಾದಿಂದ ಕೇರಳಕ್ಕೆ ಬಂದಿರುವ 2,239 ಜನರನ್ನು ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್​​ಗಳಲ್ಲಿ ಇರಿಸಲಾಗಿದೆ. ಶಂಕಿತ ಪ್ರಕರಣಗಳ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಚೀನಾದಿಂದ ಕೇರಳಕ್ಕೆ ಬಂದ ಮೂವರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಕೊರೊನಾ ವೈರಸ್​​ ಇರುವುದು ದೃಢಪಟ್ಟಿದೆ.

ರಾಜಸ್ಥಾನದಲ್ಲೂ ಕೊರೊನಾ ವೈರಸ್​​ ಭೀತಿ ಹೆಚ್ಚಾಗಿದೆ. ಶಂಕಿತ ವ್ಯಕ್ತಿಗಳ ರಕ್ತದ ಮಾದರಿಯನ್ನು ಎಸ್​ಎಂಎಸ್​ ಆಸ್ಪತ್ರೆಗೆ ಕಳುಹಿಸಲಾಗಿದೆ. ಚೀನಾದಿಂದ ವಾಪಸ್​ ಆದ ಉತ್ತರಾಖಂಡ ವಿದ್ಯಾರ್ಥಿಯು ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಇನ್ನು, ಮಹಾರಾಷ್ಟ್ರದಲ್ಲೂ ಸಹ ಕೊರೊನಾ ವೈರಸ್​ ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಸಾಂಗ್ಲಿ ಜಿಲ್ಲೆಯಲ್ಲಿ 6 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಭಯೋತ್ಪಾದಕ ಕೇಜ್ರಿವಾಲ್: ಸಂಸದ ಪರ್ವೇಶ್ ವರ್ಮಾ ಆರೋಪಕ್ಕೆ ಧ್ವನಿಗೂಡಿಸಿದ ಪ್ರಕಾಶ್ ಜಾವಡೇಕರ್

ಸಾವಿರಾರು ಶಂಕಿತ ಪ್ರಕರಣಗಳ ಪರೀಕ್ಷೆ ಇನ್ನೂ ಬಾಕಿ ಉಳಿದಿರುವುದರಿಂದ ಚೀನಾದಲ್ಲಿ ಕೊರೊನಾ ವೈರಸ್​​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕೊರೊನಾ ಸೋಂಕು ಪತ್ತೆ ಹಿನ್ನೆಲೆ. ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಸ್ಥಿತಿ'ಯನ್ನು ಘೋಷಿಸಿದೆ.
First published: February 4, 2020, 8:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories