ಕೊರೋನಾ ಭೀತಿ; ದೇಶದ 80 ಜಿಲ್ಲೆಗಳು ಶಟ್‌ಡೌನ್; ನೀವು ಏನು ಮಾಡಬಹುದು? ಏನು ಮಾಡುವಂತಿಲ್ಲ?

ಈ ಶಟ್‌ಡೌನ್ ಸಂದರ್ಭದಲ್ಲಿ ನೀವು ಯಾವ ಸೇವೆಯನ್ನು ಪಡೆಯಬಹುದು ಮತ್ತು ನೀವು ಏನು ಮಾಡಬಹುದು? ಏನು ಮಾಡುವಂತಿಲ್ಲ ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಲ್ಲಿ ಕೊರೋನಾ ವೈರಸ್ ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ. ಸುಮಾರು 80 ಜಿಲ್ಲೆಗಳಲ್ಲಿ ಕೊರೋನಾ ಧನಾತ್ಮಕ ಪ್ರಕರಣಗಳು ವರದಿಯಾದ ಬೆನ್ನಿಗೆ ಈ ಎಲ್ಲಾ ಜಿಲ್ಲೆಗಳನ್ನು ಶಟ್‌ಡೌನ್ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಆದಾಗ್ಯೂ, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಈ ಶಟ್‌ಡೌನ್ ಸಂದರ್ಭದಲ್ಲಿ ನೀವು ಯಾವ ಸೇವೆಯನ್ನು ಪಡೆಯಬಹುದು ಮತ್ತು ನೀವು ಏನು ಮಾಡಬಹುದು? ಏನು ಮಾಡುವಂತಿಲ್ಲ ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. 

ಯಾವುದೇ ರೀತಿಯ ಸಾರ್ವಜನಿಕ ಸಾರಿಗೆ ಚಾಲನೆಯಾಗುತ್ತದೆಯೇ?

ಖಾಸಗಿ ಬಸ್ಸುಗಳು, ಟ್ಯಾಕ್ಸಿಗಳು, ಆಟೋರಿಕ್ಷಾಗಳು ಮತ್ತು ಇ-ರಿಕ್ಷಾಗಳು ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ಸೇವೆಗಳು ಲಭ್ಯವಿರುವುದಿಲ್ಲ. ಅಗತ್ಯ ಸೇವೆಯಲ್ಲಿ ತೊಡಗಿರುವು ಸಿಬ್ಬಂದಿಗಳಿಗೆ ಮಾತ್ರ ಡಿಟಿಸಿ ಬಸ್ಸುಗಳು ಕಾರ್ಯನಿರ್ವಹಿಸಲಿವೆ. ಅದೂ ಸಹ ಶೇ.25ರಷ್ಟು ಮೀರುವುದಿಲ್ಲ. ಇನ್ನೂ ಅಂತರ ರಾಜ್ಯ ಬಸ್ಸುಗಳು, ರೈಲುಗಳು ಮತ್ತು ಮೆಟ್ರೋಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು.

ನಾನು ಓಲಾ / ಉಬರ್ ಬುಕ್ ಮಾಡಬಹುದೇ?

ಇಲ್ಲ, ಹೆಚ್ಚಿನ ರಾಜ್ಯಗಳು ಟ್ಯಾಕ್ಸಿ ಸೇರಿದಂತೆ ಎಲ್ಲಾ ಸಾರ್ವಜನಿಕ ಸಾರಿಗೆಯನ್ನು ನಿಷೇಧಿಸಿವೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ಮಾತ್ರ ಆಸ್ಪತ್ರೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಹೋಗಲು ಟ್ಯಾಕ್ಸಿಗಳಿಗೆ ಅವಕಾಶ ನೀಡಲಾಗಿದೆ.

ಖಾಸಗಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ಅನುಮತಿಸಲಾಗುತ್ತದೆಯೇ?

ಹೌದು, ಆದರೆ ಅಗತ್ಯ ಉದ್ದೇಶಗಳಿಗಾಗಿ ಪ್ರಯಾಣಿಸುವವರಿಗೆ ಮಾತ್ರ. ವಿಮಾನ ನಿಲ್ದಾಣಗಳಲ್ಲಿ ನಿಲ್ಲಿಸಿ ನಿಮ್ಮನ್ನು ಪೊಲೀಸರು ಪ್ರಶ್ನಿಸಬಹುದು.

ನನ್ನ ಕಾಲೋನಿಯಲ್ಲಿ ನಾನು ನನ್ನ ನಾಯಿಯ ಜೊತೆಗೆ ನಡೆಯಲು ಅವಕಾಶ ಇದೆಯೇ?

ಅವಕಾಶ ಇದೆ. ಆದರೆ, ಜನರ ಗುಂಪುಗಳಿಂದ ಆದಷ್ಟು ದೂರ ಇರಿ.

ಸ್ಥಳೀಯ ಮಳಿಗೆಗಳು ಕಾರ್ಯನಿರ್ವಹಿಸಲಿದೆಯೇ?

ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಕಾರ್ಯಾಗಾರಗಳು, ಕಚೇರಿಗಳು, ಗೋದಾಮುಗಳು ಮತ್ತು ಸಾಪ್ತಾಹಿಕ ಬಜಾರ್‌ಗಳು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿರುತ್ತವೆ.

ನನ್ನ ಮನೆಕೆಲಸದವರು ಅಥವಾ ಕಾರು ಚಾಲಕ ಕೆಲಸಕ್ಕೆ ಬರಲು ಅವಕಾಶ ಇದೆಯೇ?

ಇದೆ, ಆದಾಗ್ಯೂ ಅಗತ್ಯ ಸೇವೆಗಳಿಗೆ ಮಾತ್ರ ಅವರನ್ನು ಕರೆಸಿಕೊಳ್ಳುವುದು ಸೂಕ್ತ. ಏಕೆಂದರೆ ಅವರು ಮನೆಯಿಂದ ಹೊರಬಂದರೆ ಪ್ರಶ್ನೆಗೆ ಒಳಗಾಗಬಹುದು.

ದೆಹಲಿಯಿಂದ ಉತ್ತರ ಪ್ರದೇಶ ಮತ್ತು ಹರಿಯಾಣ ಪ್ರಯಾಣಕ್ಕೆ ರಸ್ತೆಗಳು ಮುಕ್ತವಾಗುತ್ತವೆಯೇ?

ನೆರೆಯ ರಾಜ್ಯಗಳಾದ ಹರಿಯಾಣ ಮತ್ತು ಉತ್ತರ ಪ್ರದೇಶದ ದೆಹಲಿಯ ಎನ್‌ಸಿಟಿಯ ಚಲಿಸಬಲ್ಲ ಮತ್ತು ಚಲಿಸಲಾಗದ ಗಡಿಗಳನ್ನು ಸಂಪೂರ್ಣ ಮುಚ್ಚಲಾಗಿದೆ.

ನಾನು ಪೆಟ್ರೋಲ್ ಖರೀದಿಸಲು ಸಾಧ್ಯವಾಗುತ್ತದೆ?

ಹೌದು, ಪೆಟ್ರೋಲ್ ಪಂಪ್‌ಗಳು, ಎಲ್‌ಪಿಜಿ ಮತ್ತು ತೈಲ ಏಜೆನ್ಸಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ನನ್ನಲ್ಲಿ ದೆಹಲಿ ವಿಮಾನ ಟಿಕೆಟ್ ಇದೆ. ಹೀಗಾಗಿ ನಾನು ಅಲ್ಲಿಗೆ ಪ್ರಯಾಣಿಸಬಹುದೇ?

ಈ ಅವಧಿಯಲ್ಲಿ ದೆಹಲಿಗೆ ಬರುವ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಆದಾಗ್ಯೂ, ದೇಶೀಯ ವಿಮಾನಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ.

ದೇವಾಲಯಗಳಿಗೆ ತೆರಳಬಹುದೇ?

ಯಾವುದೇ ಪಂಗಡದ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮುಚ್ಚಲಾಗಿದೆ.

ನಾನು ಆಸ್ಪತ್ರೆಗೆ ಹೋಗಬಹುದೇ?

ಹೌದು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಎಂದಿನಂತೆ ತಮ್ಮ ಕಾರ್ಯನಿರ್ವಹಿಸುತ್ತಿರುತ್ತವೆ.

ನನಗೆ ಔಷಧಿಗಳು ಅಗತ್ಯವಾದರೆ ಏನು ಮಾಡುವುದು?

ಮೆಡಿಕಲ್‌ಗಳು ಮತ್ತು ಔಷಧ ಅಂಗಡಿಗಳು ಎಂದಿನಂತೆ ತೆರೆದಿರುತ್ತವೆ.

ಮನೆಗೆ ಇ-ವಿತರಣೆಯಾಗುವಂತಹ ವಸ್ತುಗಳನ್ನು ನಾನು ಆದೇಶಿಸಬಹುದೇ?

ಹೌದು, ಆಹಾರ ಪದಾರ್ಥಗಳು, ಔಷಧಗಳು, ವೈದ್ಯಕೀಯ ಉಪಕರಣಗಳು, ದಿನಸಿ ವಸ್ತುಗಳು, ಡೈರಿ ಉತ್ಪನ್ನಗಳು, ಸಾಮಾನ್ಯ ಸರಬರಾಜು ವಸ್ತುಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಇ-ಕಾಮರ್ಸ್ ತೆರೆದಿರುತ್ತದೆ. ಅಲ್ಲದೆ, ರೆಸ್ಟೋರೆಂಟ್‌ಗಳ ಮನೆ ವಿತರಣಾ ಸೇವೆಗಳು ತೆರೆದಿರುತ್ತವೆ.

ವರದಿ ಮಾಡಲು ಪತ್ರಕರ್ತರು ಹೊರಗೆ ಹೋಗಬಹುದೇ?

ಹೌದು, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಪತ್ರಕರ್ತರು ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಬಹುದು.

ನಗದು ಹಣವನ್ನು ಹಿಂಪಡೆಯಲು ಬ್ಯಾಂಕ್ ಗಳಿಗೆ ಹೋಗಬಹುದೆ?

ಹೌದು, ಬ್ಯಾಂಕುಗಳು ಮತ್ತು ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿರುತ್ತವೆ. ಈ ಸೇವೆಗಳಿಗಾಗಿ ವ್ಯಕ್ತಿಗಳು ಮನೆಯಿಂದ ಹೊರಬರಲು ಮುಕ್ತ ಅವಕಾಶ ಇದೆ.

ಇಂಟರ್ನೆಟ್ ಮತ್ತು ಕೊರಿಯರ್ ಸೇವೆಗಳನ್ನು ಅಮಾನತುಗೊಳಿಸಲಾಗುತ್ತದೆಯೇ?

ಇಲ್ಲ, ಟೆಲಿಕಾಂ, ಇಂಟರ್ನೆಟ್ ಮತ್ತು ಅಂಚೆ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಲೇ ಇರುತ್ತವೆ.

ನಾನು ಗುಂಪಿನಲ್ಲಿ ಹೊರಗೆ ಹೋಗಬಹುದೇ?

ಇಲ್ಲ. ಐದು ಜನರಿಗಿಂತ ಹೆಚ್ಚು ಜನರ ಪಾಲ್ಗೊಳ್ಳುವ ಯಾವುದೇ ಸಭೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಇಂತಹ ನಡವಳಿಕೆಗಳು ಕಾನೂನಿನ ಪ್ರಕಾರ ಶಿಕ್ಷೆಗೊಳಗಾಗಬಹುದು.

ಈ ಆದೇಶದಿಂದ ಹೊರಗಿಡಲಾದ ಸೇವೆಗಳು ಮತ್ತು ಸಂಸ್ಥೆಗಳು ಯಾವುವು?

ಕಾನೂನು ಮತ್ತು ಸುವ್ಯವಸ್ಥೆ, ಮ್ಯಾಜಿಸ್ಟೀರಿಯಲ್ ಕರ್ತವ್ಯಗಳು, ಪೊಲೀಸ್, ಆರೋಗ್ಯ, ಅಗ್ನಿಶಾಮಕ, ಕಾರಾಗೃಹಗಳು, ನ್ಯಾಯಯುತ ಬೆಲೆ ಅಂಗಡಿಗಳು, ವಿದ್ಯುತ್, ನೀರು, ಪುರಸಭೆಯ ಸೇವೆಗಳು, ಶಾಸಕಾಂಗ ಸಭೆ, ವೇತನ ಮತ್ತು ಖಾತೆಗಳ ಕಚೇರಿಯ ಕಾರ್ಯಚಟುವಟಿಕೆಗಳಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.

ನಾನು ಸಾಕು ಪ್ರಾಣಿಗಳನ್ನು ಹೊಂದಿದ್ದರೆ ಏನು ಮಾಡುವುದು?

ಸಾಕು ಪ್ರಾಣಿಗಳ ಮೇವಿನ ವಿತರಣೆ-ಸಂಗ್ರಹಣೆ ಸೇರಿದಂತೆ ಇತರ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ವ್ಯಾಪಾರ, ವಾಣಿಜ್ಯ ಮತ್ತು ಲಾಜಿಸ್ಟಿಕ್ಸ್ ಎಂದಿನಂತೆ ಮುಂದುವರಿಯುತ್ತದೆ.

ಇದನ್ನೂ ಓದಿ : ಮಾ. 31ರವರೆಗೆ ತೆಲಂಗಾಣ ದಿಗ್ಬಂಧನ; ಮನೆಯಾಚೆ ಹೋಗಲು ಒಬ್ಬರಿಗಷ್ಟೇ ಅವಕಾಶ
First published: